Karnataka Weather Today: ಮೈ ಕೊರೆಯುವ ಚಳಿಗೆ ತತ್ತರಿಸಿದ ರಾಜ್ಯದ ಜನರು, ಇಂದಿನ ಹವಾಮಾನ ವರದಿ ಹೀಗಿದೆ

ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಬೇರೆ ರಾಜ್ಯಗಳಲ್ಲಿ ವರುಣ ಇನ್ನೂ ಸಹ ತನ್ನ ಆರ್ಭಟ ನಿಲ್ಲಿಸಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಳ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Dec 23, 2021: ಅಕಾಲಿಕ ವರುಣನ ಆರ್ಭಟ(Unseasonal Rain) ನಿಂತ ಬಳಿಕ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಗಢ-ಗಢ ಚಳಿ(Winter)ಗೆ ಜನರು ನಡುಗುತ್ತಿದ್ದಾರೆ. ಡಿಸೆಂಬರ್(December) ಮೊದಲ ವಾರದವರೆಗೂ ಸುರಿದ ಮಳೆ ಈಗ ಕೊಂಚ ಬ್ರೇಕ್​​ ಕೊಟ್ಟಿದ್ದು, ಎಲ್ಲೆಡೆ ಶೀತಗಾಳಿ ಬೀಸುತ್ತಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ದಟ್ಟ ಚಳಿಗೆ ಜನರು ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 30 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನು, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಬೇರೆ ರಾಜ್ಯಗಳಲ್ಲಿ ವರುಣ ಇನ್ನೂ ಸಹ ತನ್ನ ಆರ್ಭಟ ನಿಲ್ಲಿಸಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಳ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

ಈ ರಾಜ್ಯಗಳಲ್ಲಿ 3 ದಿನ ಮಳೆ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಕೆಲವು ಭಾಗಗಳಲ್ಲಿ ಇನ್ನೂ 3 ದಿನ ಗುಡುಗು ಮಿಂಚು ಸಹಿತ ಕೆಲವು ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಡಿಸೆಂಬರ್ 23 ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇಂದು ಅರುಣಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather Report Today: ರಾಜ್ಯದಲ್ಲಿ ಮುಂದುವರಿದ ಚಳಿ: ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ?

ಇಂದು-ನಾಳೆ ಹಿಮಪಾತ

ಪಶ್ಚಿಮವಾಗಿ ಬೀಸುವ ಮಾರುತಗಳಿಂದ ಡಿಸೆಂಬರ್ 22 ರಿಂದ 24ರವರೆಗೆ ಎರಡು ದಿನ ಹಿಮಾಲಯ ಭಾಗದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಮಳೆ ಮತ್ತು ಹಿಮಪಾತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಪರಿಣಾಮ ಪಂಜಾಬ್ ವರೆಗೂ ವ್ಯಾಪಿಸಲಿದ್ದು, ಡಿಸೆಂಬರ್ 24ರವರೆಗೂ ಲಘು ಮಳೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆಯಿದೆ.

ಮಾವಿನ ಬೆಳೆಯ ಮೇಲೆ ಅಕಾಲಿಕ ಮಳೆಯ ಎಫೆಕ್ಟ್

ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚಿನ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣವು ಸತತ ಎರಡನೇ ವರ್ಷವೂ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಬಹುದು. ಅಕಾಲಿಕ ಮಳೆಯಿಂದಾಗಿ ಹೂ ಬಿಡುವ ಪ್ರಕ್ರಿಯೆಗೂ ಅಡ್ಡಿಯಾಗಿದೆ. ಚಳಿಗಾಲದ ಆರಂಭದ ಹೊರತಾಗಿಯೂ, ಇನ್ನೂ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿ

ಇದರಿಂದಾಗಿ ಹೂಬಿಡುವ ಪ್ರಕ್ರಿಯೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿಲ್ಲ ಹೂ ಬಿಡುವ ಪ್ರಕಿಯೆಗೆ ಶುಷ್ಕ ಮತ್ತು ಶೀತ ಹವಾಮಾನ ಅಗತ್ಯ. ಆದರೆ ನಿರಂತರ ಸುರಿಯುತ್ತಿರುವ ಮಳೆ ಈ ನೈಸರ್ಗಿಕ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿಯುನ್ನುಂಟು ಮಾಡುತ್ತಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.. ನಿಮ್ಮ ಏರಿಯಾ ಕೂಡ ಇದೆಯಾ ಒಮ್ಮೆ ನೋಡಿ

ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆ

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಮಾರುಕಟ್ಟೆಗಳಿಗೆ ಹಣ್ಣು, ತರಕಾರಿಯ ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Latha CG
First published: