Karnataka Weather Report: ನಾಳೆಯಿಂದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಇಂದಿನ ಹವಾಮಾನ ವರದಿ ಹೀಗಿದೆ

Karnataka Weather Today Updates: ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ (State) ಕೆಲವು ದಿನಗಳಿಂದ ಆರ್ಭಟಿಸಿದ್ದ ಮಳೆರಾಯ (rain) ಇದೀಗ ಸ್ವಲ್ಪ ತಣ್ಣಗಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ ಬಿಡುವು ನೀಡಿದೆ. ಆದರೆ ಒಂದೆರಡು ಜಿಲ್ಲೆಗಳಲ್ಲಿ (District) ಮಾತ್ರ ಮಳೆ ಇದ್ದು, ಇನ್ನೂ ಕೆಲವು ದಿನ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮಲೆನಾಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗಲಿದೆ.

ಇಲಾಖೆಯ ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರು, ಶಿವಮೊಗ್ಗ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಬೀದರ್, ಹಾಸನ, ಕೋಲಾರ, ತುಮಕೂರು, ಕಲಬುರಗಿ, ಮಂಗಳೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು: 28-19, ಮಂಗಳೂರು: 29-14, ಹಾಸನ: 27-19, ಕೋಲಾರ: 30-21, ತುಮಕೂರು: 29-20, ಉಡುಪಿ: 29-24, ಚಾಮರಾಜನಗರ: 31-20, ಚಿತ್ರದುರ್ಗ: 29-21, ಹಾವೇರಿ: 29-21, ಮೈಸೂರು: 30-20, ಮಂಡ್ಯ: 31-21, ಚಿಕ್ಕಬಳ್ಳಾಪುರ: 28-18, ಚಿಕ್ಕಮಗಳೂರು: 26-18, ಯಾದಗಿರಿ: 32-23

ವಿಜಯಪುರ: 29-21, ಬಾಗಲಕೋಟೆ: 31-22

819900
ಸಾಂದರ್ಭಿಕ ಚಿತ್ರ


, ಶಿವಮೊಗ್ಗ: 28-21, ಬೆಳಗಾವಿ: 26-20, ಬೀದರ್: 28-21, ಕಲಬುರಗಿ: 31-22, ದಾವಣಗೆರೆ: 29-21, ಬಳ್ಳಾರಿ: 33-23, ಗದಗ: 29-21, ಕೊಡಗು: 24-17, ರಾಮನಗರ: 32-26, ಕೊಪ್ಪಳ: 31-22, ರಾಯಚೂರು: 32-33

ಅಲ್ಲದೇ, ಮಳೆಯ ಅಬ್ಬರದಿಂದ ತತ್ತರಿಸಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ನಾಳೆಯಿಂದ 6 ದಿನಗಳ ಕಾಲ ಮಳೆ ಬೀಳಲಿದ್ದು, ವಿಜಯಪುರದಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ, ಬೆಳಗಾವಿ, ಕೊಡಗು, ರಾಮನಗರ, ಗದಗ, ವಿಜಯಪುರ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಮಳೆಯಾಗುವ ನಿರೀಕ್ಷೆ ಇದೆ.

karnataka-weather-report-today-10th-august-2022-mrq
ಬೆಂಗಳೂರಿನ ಸಾಯಿ ಲೇಔಟ್


ಕೆಲ ದಿನಗಳಿಂದ ಸುರಿದ  ನಿರಂತರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. ಮತ್ತೊಂದೆಡೆ ಕೆರೆ ಕುಂಟೆಗಳೆಲ್ಲಾ ಭರ್ತಿಯಾಗಿದ್ದು, ರೈತ ವರ್ಗ ಸಂತಸದಲ್ಲಿದೆ. ಇದೇ ರೀತಿ ಹಿಂಗಾರು ಮಳೆಯಾಗಲಿ ಎಂದು ಕೃಷಿಕರು ವರುಣ ದೇವನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬೆಂಬಲಿಗ!

ಮಹಾರಾಷ್ಟ್ರದಲ್ಲಿ ಭಾರೀ ಮಳೆ

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೃಷ್ಣಾ ಮತ್ತು ಭೀಮಾ ನದಿಗಳ ಒಳ ಹರಿವು ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಆಲಮಟ್ಟಿ, ನಾರಾಯಣಪುರ ಬಸವ ಸಾಗರ ಜಲಾಶಯಗಳಿಂದ ನದಿಗೆ ನೀರನ್ನು ಬಿಡಲಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ  ನೀಡಲಾಗಿದೆ.

Karnataka heavy rain cloud burst rainfall death

ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಸರಿಯಾದ ಸಮಯದಲ್ಲಿ ಬೋಡೋ ದ್ರಾವಣವನ್ನು ಸಿಂಪಡಿಸಲಾಗದೇ ಇದ್ದ ಕಾರಣ ಇದೀಗ ಗಿಡಗಳ ಹಿಂಗಾರ ಕರಟಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಸಣ್ಣ ಅಡಿಕೆಗಳು ಉದುರಲಾರಂಭಿಸಿದೆ.



ಇದನ್ನೂ ಓದಿ: ವಿಶ್ವದ 6 ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು, ಈ ಊರೇ ಬೆಸ್ಟ್ ಎಂದ ವಲಸಿಗರು!

ಸುಮಾರು ಒಂದು ತಿಂಗಳು ಕಾಲ ಸುರಿದ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿತ್ತು. ಕೆಲವೆಡೆ ಮನೆ ಕುಸಿದು ಜನ ಪರದಾಡಿದ್ದಾರೆ, ಇನ್ನೂ ಕೆಲವೆಡೆ ರಸ್ತೆಗಳು ಬಿರುಕು ಬಿಟ್ಟಿದ್ದವು. ಜನ ಜೀವನ ಅಸ್ತವ್ಯಸ್ತವಾಗಿತ್ತು. ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜನರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ.
Published by:Sandhya M
First published: