Karnataka Weather Today: ಕರ್ನಾಟಕದಲ್ಲಿ ಹೆಚ್ಚಿದ ಚಳಿ, ಈ ರಾಜ್ಯಗಳಲ್ಲಿ ಶೀತಗಾಳಿ, ಮಳೆ ಜೊತೆಗೆ ಹಿಮಪಾತ

ಕರ್ನಾಟಕದಲ್ಲಿ ವರುಣ ತನ್ನ ಆರ್ಭಟ ನಿಲ್ಲಿಸಿದ್ದರೂ, ಭಾರತದ ಹಲವೆಡೆ ಇನ್ನೂ ಸಹ ಮಳೆಯಾಗುತ್ತಿದೆ. ಹಿಮಪಾತ, ದಟ್ಟ ಮಂಜಿನ ಜೊತೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Forecast Jan 27th 2022: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 27 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ದಕ್ಷಿಣ ಒಳನಾಡು(South Interior Karnataka) ಮತ್ತು ಕರಾವಳಿ ಭಾಗದಲ್ಲಿ(Coastal Area) ಒಣ ಹವೆ ಇರಲಿದೆ. ಚಳಿ ಹೆಚ್ಚಾಗಿರುವ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಬಿಸಿಲು ನಾಡು ಜಿಲ್ಲೆಗಳಲ್ಲಿ ಚಳಿಯ (Winter) ಪ್ರಮಾಣ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಸಂಬಂಧಿತ ರೋಗಗಳಿಂದ (Cold Fever) ಜನರು ಬಳಲುತೊಡಗಿದ್ದಾರೆ. ಉತ್ತರ ಕರ್ನಾಟಕದ (North Karnataka) ಬೀದರ್, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ದಟ್ಟವಾದ ಮಂಜಿನ ಜೊತೆ ಇಬ್ಬನಿ ಬೀಳುತ್ತಿದೆ. ಕರ್ನಾಟಕದಲ್ಲಿ ವರುಣ ತನ್ನ ಆರ್ಭಟ ನಿಲ್ಲಿಸಿದ್ದರೂ, ಭಾರತದ ಹಲವೆಡೆ ಇನ್ನೂ ಸಹ ಮಳೆಯಾಗುತ್ತಿದೆ. ಹಿಮಪಾತ, ದಟ್ಟ ಮಂಜಿನ ಜೊತೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಮುಂದಿನ 24 ಗಂಟೆ ಎಲ್ಲೆಲ್ಲಿ ಮಳೆ?

ಮುಂದಿನ 24 ಗಂಟೆಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್​ನ ಹಲವು ಪ್ರದೇಶಗಳಲ್ಲಿ ಶೀತಗಾಳಿ ಇರಲಿದೆ. ಅರುಣಾಚಲ ಪ್ರದೇಶದ ಕೆಲ ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಸಿಕ್ಕಿಂ ಹಾಗೂ ಈಶಾನ್ಯ ಭಾಗದ ರಾಜ್ಯಗಳಲ್ಲಿ ಲಘು ಮಳೆಯಾಗಲಿದೆ.

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರ ಮಳೆಯ ಜೊತೆಗೆ ಹಿಮಪಾತ ಆಗುವ ಸಾಧ್ಯತೆ ಇದೆ IMD ಮುನ್ಸೂಚನೆ ನೀಡಿದೆ. ಇನ್ನು, ಆಂಧ್ರಪ್ರದೇಶದ ಕರಾವಳಿ, ರಾಯಲ್​ಸೀಮಾ, ತಮಿಳುನಾಡು, ಕೇರಳ ಹಾಗೂ ಅಂಡಮಾನ್​ & ನಿಕೋಬಾರ್​​ನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್- ಇಂದು ಈ ಏರಿಯಾಗಳಲ್ಲಿ ವಿದ್ಯುತ್​ ವ್ಯತ್ಯಯ

ಕಳೆದ 24 ಗಂಟೆಯ ಹವಾಮಾನ ವರದಿ:

ಕಳೆದ 24 ಗಂಟೆಗಳಲ್ಲಿ ಜಮ್ಮು-ಕಾಶ್ಮೀರ, ಗಿಲ್ಜಿಟ್-ಬಲ್ಟಿಸ್ತಾನ್, ಮುಜಾಫರ್​ಬಾದ್, ಲಡಾಖ್​ನ ಕೆಲ ಪ್ರದೇಶಗಳು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಗುರ ಮಳೆಯ ಜೊತೆಗೆ ಹಿಮಪಾತವಾಗಿದೆ.

ಅರುಣಾಚಲ ಪ್ರದೇಶದಾದ್ಯಂತ ಲಘು ಮಳೆಯಾಗಿದೆ. ಇಷ್ಟೇ ಅಲ್ಲದೇ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಆಂಧ್ರ ಪ್ರದೇಶ ಕರಾವಳಿ, ತಮಿಳುನಾಡು ಹಾಗೂ ಬಿಹಾರದ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಶೀತಗಾಳಿ ಹೆಚ್ಚಾಗಿ ಬೀಸಿದೆ. ಪಂಜಾಬ್​, ಉತ್ತರ ಪ್ರದೇಶದ ಪಶ್ಚಿಮ ಭಾಗ ಹಾಗೂ ಹರಿಯಾಣದ ಕೆಲ ಭಾಗಗಳಲ್ಲಿ ದಟ್ಟ ಮಂಜು ಕವಿದಿದೆ.

ಇದನ್ನೂ ಓದಿ: ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ BK Hariprasad ನೇಮಕ

ಮುಂದಿನ 5 ದಿನ ಎಲ್ಲೆಲ್ಲಿ ಶೀತಗಾಳಿ?

ಮಧ್ಯಪ್ರದೇಶದಲ್ಲಿ ಮುಂದಿನ 5 ದಿನಗಳ ಕಾಲ ತೀವ್ರ ಶೀತಗಾಳಿ ಬೀಸಲಿದೆ. ಪಂಜಾಬ್, ಹರಿಯಾಣ, ಚಂಡೀಗರ್, ರಾಜಸ್ಥಾನದಲ್ಲಿ ಮುಂದಿನ 3-4 ದಿನ ಶೀತಗಾಳಿ ಬೀಸಿದರೆ, ಉತ್ತರ ಪ್ರದೇಶದಲ್ಲಿ ಜನವರಿ 27ರಿಂದ 30ರವರೆಗೆ ಶೀತಗಾಳಿ ಮುಂದುವರೆಯಲಿದೆ. ಮಹಾರಾಷ್ಟ್ರ, ಮಾರತ್​ವಾಡ, ಗುಜರಾತ್​​ನಲ್ಲಿ ಮುಂದಿನ 2 ದಿನ ಶೀತಗಾಳಿ ಬೀಸಲಿದೆ. ಒಡಿಶಾದಲ್ಲಿ ಜನವರಿ 29 &30ರಂದು ಶೀತಗಾಳಿ ಹೆಚ್ಚಾಗಲಿದೆ.

ಕರಾವಳಿಯಲ್ಲಿ ಭತ್ತದ ಬೆಳೆ ನಾಶ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಲ್ಲಿ ಅಡಿಕೆಗೆ ಕೊಳೆ ರೋಗದ ಸಮಸ್ಯೆಯಿಂದ ರೈತರು ಕಂಗಾಲಾಗಿದ್ರೆ, ಕರಾವಳಿಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗ ತಗುಲಿ ರೈತರು ಸಮಸ್ಯೆ ಎದುರಿಸುವಂತಾಯಿತು. ಈ‌ಬಾರಿ ಭತ್ತ ಬೆಳೆದ ರೈತ ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸಿದ್ದಾರೆ, ರೈತರ ಪಾಲಿಗೆ ಅಕಾಲಿಕ ಮಳೆ ಆಘಾತದ ಮೇಲೆ ಆಘಾತ ನೀಡಿದೆ. ಮಲೆನಾಡಿನಲ್ಲಿ ಒಂದು ಸಮಸ್ಯೆ ಆದ್ರೆ ಕರಾವಳಿಯಲ್ಲಿ ಇನ್ನೊಂದು ಸಮಸ್ಯೆ. ಬೆಳೆದೆ ಬೆಳೆ ಸುಖವಾಗಿ ರೈತನ ತುತ್ತಿನ ಚೀಲ ತುಂಬದೆ ನಷ್ಟದಲ್ಲೆ ಕೈ ತೊಳೆಯುವಂತಾಗಿದೆ.
Published by:Latha CG
First published: