Karnataka Weather Today; ಮೋಡ ಮುಸುಕಿದ ವಾತಾವರಣ, ಅಲ್ಲಲ್ಲಿ ತುಂತುರು ಮಳೆಯ ಸಿಂಚನ

ಮುಂದಿನ 24 ಗಂಟೆಯಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಶನಿವಾರ  ಮತ್ತು ಭಾನುವಾರ ಹಲವೆಡೆ ಮಳೆಯಾಗಿತ್ತು. ಕೆಲವು ಕಡೆ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣ ಆಸ್ತಿಗೆ ಹಾನಿಯುಂಟಾಗಿತ್ತು.

ಬೆಂಗಳೂರು

ಬೆಂಗಳೂರು

  • Share this:
ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿದಿದ್ದ ಮಳೆ (Rainfall) ಇವತ್ತು  ರಿಲೀಫ್ ನೀಡಲಿದೆ. ಆದ್ರೆ ಇಂದು ಸಹ ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮೈಸೂರು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಮುಂದಿನ 24 ಗಂಟೆಯಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಶನಿವಾರ  ಮತ್ತು ಭಾನುವಾರ ಹಲವೆಡೆ ಮಳೆಯಾಗಿತ್ತು. ಕೆಲವು ಕಡೆ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣ ಆಸ್ತಿಗೆ ಹಾನಿಯುಂಟಾಗಿತ್ತು. ಇಂದು ಬೆಂಗಳೂರಿ(Bengaluru Rains)ನಲ್ಲಿ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ತುಂತುರು ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮುಂದಿನ 24 ಗಂಟೆ ಮಳೆಯ ಅಬ್ಬರ ನಿಲ್ಲಲಿದೆ. ಬುಧವಾರ ಮತ್ತೆ ಮಳೆರಾಯ ನಗರಕ್ಕೆ ಎಂಟ್ರಿ ಕೊಡಲಿದ್ದಾನೆ. ಇನ್ನು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಗದಗ, ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆಯಲ್ಲಿ ಒಣ ಹವೆ ಇರಲಿದೆ. ಶನಿವಾರ ಮತ್ತು ಭಾನುವಾರ ಸಹ ಈ ಭಾಗಗಳಲ್ಲಿ ಮಳೆಯಾಗಿತ್ತು.

ಇದನ್ನೂ ಓದಿ: Bengaluru Rains: ಬೆಂಗಳೂರು ಮಳೆ: ಮನೆಗೆ ನೀರು, ಅಂಡರ್ ಪಾಸ್ ಜಲಾವೃತ, ಧರೆಗೆ ಉರುಳಿದ ಮರ

ಕಳೆದ 24 ಗಂಟೆ ಎಲ್ಲೆಲ್ಲಿ ಮಳೆ?

ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಕುರುವಂಗಿ ಕೆರೆ ತುಂಬಿ ರಸ್ತೆಗೆ ನೀರು ಹರಿದಿದೆ. ಕೆರೆಯ ಸಣ್ಣ ನಾಲೆಯಿಂದ ಹರಿದ ನೀರು ಸಮೀಪದ ಮನೆಗಳಿಗೂ ನುಗ್ಗಿತ್ತು.ರಸ್ತೆಯಲ್ಲಿ ಅಪಾರ ಪ್ರಮಾಣದ  ನೀರು ಹರಿದ ಪರಿಣಾಮ ಜನರು ಪರದಾಡುವಂತಾಗಿತ್ತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿ ಖಾರೆವಾಡದ ರೈತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಮೃತ ಮಹಿಳೆಯನ್ನು 40 ವರ್ಷದ ಜಾನುಬಾಯಿ ಕಾನು ಶಳಕೆ ಎಂದು ಗುರುತಿಸಲಾಗಿದೆ. ಕುಕನೂರು ತಾಲೂಕು ಕುದರಿಮೋತಿ ಗ್ರಾಮದ ರೈತ ಲಾಡೆನ್ ಸಾಬ್ ಮನೆಗೆ ಹಿಂದಿರುಗುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.

ಮನೆಗಳಿಗೆ ನುಗ್ಗಿದ ನೀರು

ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ, ತಾವರೆಗೆರೆ, ಗಜೇಂದ್ರಗಢ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿಯಲ್ಲಿ ಸುಮಾರು 80 ಕ್ಕೂ ಹೆಚ್ಚು ಮನೆಗಳಿಗೆ ಮಳೆಯ ನೀರು ನುಗ್ಗಿತ್ತಯ. ಮನೆಯಲ್ಲಿದ್ದ ದವಸ ಧಾನ್ಯ, ದಿನಸಿ ಸಾಮಾಗ್ರಿಗಳು ಹಾನಿಯಾಗಿವೆ. ಮನೆಯಿಂದ ಮಳೆ ನೀರು ಹೊರ ಹಾಕಲು ಜನರು ಪರದಾಡುವಂತಾಯ್ತು. ಕೆಲವರಿಗೆ ಮನೆಯಲ್ಲಿ ನಿದ್ರೆ ಮಾಡೋಕೆ ಜಾಗೆ ಇದಲ್ಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಹೊರವಲಯದಲ್ಲಿರುವ ಹಳ್ಳ ಕಟ್ಟಿದ ಪರಿಣಾಮ ಗ್ರಾಮಕ್ಕೆ ಮಳೆಯ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಉಪ ಚುನಾವಣೆ ಕ್ಷೇತ್ರ ಹಾನಗಲ್ ನಲ್ಲಿಯೂ ರಾಜಕೀಯ ನಾಯಕರ ಪ್ರಚಾರಕ್ಕೆ ಮಳೆ ಅಡ್ಡಿಯುಂಟು ಮಾಡಿತ್ತು.

ಇದನ್ನೂ ಓದಿ: Astrology Today: ಮೇಷ ರಾಶಿಯವರಿಗೆ ಮನೆ ಕಟ್ಟುವ ಶುಭಯೋಗ, ಎಲ್ಲಾ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ಉತ್ತರ ಭಾರತದಲ್ಲಿಯೂ ಅಕಾಲಿಕ ಮಳೆ, ಹಿಮಪಾತ

ಪಂಜಾಜ್ ಮತ್ತು ಹರಿಯಾಣ (Punjab and Haryana) ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಮುಂದಿನ 48 ಗಂಟೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೈತರು ಬೆಳೆದ ಬೆಳೆಗಳೆಲ್ಲ ಮಳೆಗೆ ಹಾಳಾಗಿದ್ದು, ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತ(Snowfall)ವಾಗುತ್ತಿದ್ದು, ಮುಂದಿನ 24 ಗಂಟೆ ಜನರು ಎಚ್ಚರಿಕೆಯಿಂದಿರಬೇಕೆಂದ ಸೂಚನೆ ನೀಡಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲೂ ಇವತ್ತು ಮಳೆಯಾಗಲಿದೆ.
Published by:Mahmadrafik K
First published: