Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಆರ್ಭಟ: ಇಂದು ಸಹ ಅಬ್ಬರಿಸಲಿದ್ದಾನೆ ವರುಣದೇವ

ಬೆಂಗಳೂರಿನ ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು (Bengaluru Rains) ಸೇರಿದಂತೆ ರಾಜ್ಯದ ಹಲವೆಡೆ ಮಳೆ (Karnataka Rains) ಇವತ್ತು ಸಹ ಅಬ್ಬರಿಸಲಿದೆ. ಹವಾಮಾನ ಇಲಾಖೆ ಅಕ್ಟೋಬರ್ 23 ಮತ್ತು 24ರಂದು ಮಳೆಯಾಗುವ ಮುನ್ಸೂಚನೆ ನೀಡಿತ್ತು. ಶುಕ್ರವಾರ ಮತ್ತು ಶನಿವಾರದ ಮಳೆಗೆ ಹೈರಾಣಾಗಿದ್ದ ಬೆಂಗಳೂರಿನ ಜನತೆಗೆ ಇವತ್ತು ಸಹ ಮಳೆಯ ಕಿರಿಕಿರಿ ಉಂಟಾಗಲಿದೆ. ಬೆಂಗಳೂರಿಗರು ಸಂಡೇ ಪ್ಲಾನ್ ಮಾಡೋ ಮುಂಚೆ ಮಳೆಯ ಬಗ್ಗೆ ಅಲರ್ಟ್ ಆಗಿರಬೇಕು. ಶನಿವಾರ ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಹಲವೆಡೆ ಮಳೆ

ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಕುರುವಂಗಿ ಕೆರೆ ತುಂಬಿ ರಸ್ತೆಗೆ ನೀರು ಹರಿದಿದೆ. ಕೆರೆಯ ಸಣ್ಣ ನಾಲೆಯಿಂದ ಹರಿದ ನೀರು ಸಮೀಪದ ಮನೆಗಳಿಗೂ ನುಗ್ಗಿದೆ.ರಸ್ತೆಯಲ್ಲಿ ಅಪಾರ ಪ್ರಮಾಣದ  ನೀರು ಹರಿದ ಪರಿಣಾಮ ಜನರು ಪರದಾಡುವಂತಾಯ್ತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿ ಖಾರೆವಾಡದ ರೈತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೃತಯ ಮಹಿಳೆಯನ್ನು 40 ವರ್ಷದ ಜಾನುಬಾಯಿ ಕಾನು ಶಳಕೆ ಎಂದು ಗುರುತಿಸಲಾಗಿದೆ. ಕುಕನೂರು ತಾಲೂಕು ಕುದರಿಮೋತಿ ಗ್ರಾಮದ ರೈತ ಲಾಡೆನ್ ಸಾಬ್ ಮನೆಗೆ ಹಿಂದಿರುಗುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:  Lizard Problem: ನಿಮ್ಮ ಮನೆಯಲ್ಲಿ ಹಲ್ಲಿಗಳ ಕಾಟವೇ..? ಅವುಗಳನ್ನು ತೊಡೆದು ಹಾಕಲು ಇಲ್ಲಿವೆ ಸಲಹೆಗಳು

ಮನೆಗಳಿಗೆ ನುಗ್ಗಿದ ನೀರು

ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ, ತಾವರೆಗೆರೆ, ಗಜೇಂದ್ರಗಢ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿಯಲ್ಲಿ

ಯತ್ತಿನಹಳ್ಳಿಯಲ್ಲಿ ಸುಮಾರು 80 ಕ್ಕೂ ಹೆಚ್ಚು ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯ, ದಿನಸಿ ಸಾಮಾಗ್ರಿಗಳು ಹಾನಿಯಾಗಿವೆ. ಮನೆಯಿಂದ ಮಳೆ ನೀರು ಹೊರ ಹಾಕಲು ಜನರು ಪರದಾಡುವಂತಾಯ್ತು. ಕೆಲವರಿಗೆ ಮನೆಯಲ್ಲಿ ನಿದ್ರೆ ಮಾಡೋಕೆ ಜಾಗೆ ಇದಲ್ಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಹೊರವಲಯದಲ್ಲಿರುವ ಹಳ್ಳ ಕಟ್ಟಿದ ಪರಿಣಾಮ ಗ್ರಾಮಕ್ಕೆ ಮಳೆಯ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಉಪ ಚುನಾವಣೆ ಕ್ಷೇತ್ರ ಹಾನಗಲ್ ನಲ್ಲಿಯೂ ರಾಜಕೀಯ ನಾಯಕರ ಪ್ರಚಾರಕ್ಕೆ ಮಳೆ ಅಡ್ಡಿಯುಂಟು ಮಾಡಿತ್ತು.

ಇದನ್ನೂ ಓದಿ: India vs Pak- ಭಾರತ ವಿರುದ್ಧ ಗೆದ್ದರೆ ಪಾಕಿಸ್ತಾನ ಕ್ರಿಕೆಟಿಗರಿಗೆ ಸಿಗಲಿದೆ ಬಂಪರ್ ಕೊಡುಗೆ

ಕೇರಳದಲ್ಲಿ ಯೆಲ್ಲೋ ಅಲರ್ಟ್

ಕೇರಳದಲ್ಲಿ ಅಕ್ಟೋಬರ್ 25 ರಂದು ಆರೆಂಜ್ ಮತ್ತು ಯೆಲ್ಲೋ ಅಲರ್ಟ್  ಘೋಷಣೆ ಮಾಡಲಾಗಿದೆ. ದೆ. ಪತ್ತನಂತಿಟ್ಟ, ಕೋಟಯಂ, ಇಡುಕ್ಕಿ, ಪಾಲಕ್ಕಾಡ್‌, ಮಲಪ‍್ಪುರ, ಕೋಯಿಕ್ಕೋಡ್‌, ವಯನಾಡ್‌ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ತ್ರಿಶ್ಶೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಆರೆಂಜ್‌ ಅಲರ್ಟ್ ಎಂದರೆ ಭಾರಿ ಮಳೆ ಮತ್ತು ಯೆಲ್ಲೋ ಅಲರ್ಟ್‌ ಎಂದರೆ ಅಲ್ಲಲ್ಲಿ ಸಾಮಾನ್ಯ ಮಳೆಯಾಗಲಿದೆ.

ಎಲ್ಲೆಲ್ಲಿ ಮಳೆ?

ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದ ಲಕ್ಷ ದ್ವೀಪ ಭಾಗದಲ್ಲಿ ಹಾಗೂ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮಳೆಗೆ ಮೂಲ ಕಾರಣ ಎನ್ನಲಾಗುತ್ತಿದೆ.
Published by:Mahmadrafik K
First published: