Karnataka Weather Today LIVE: ಮಲೆನಾಡಲ್ಲಿ ನಿಲ್ಲದ ಮಳೆ ಅವಾಂತರ, ಮೂಡಿಗೆರೆಯಲ್ಲಿ ಶಾಲೆ ಗೋಡೆ ಕುಸಿತ

Weather Report: ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದ್ದು,  ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿದ್ದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಸದ್ಯ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದೆ.  ಮಲೆನಾಡು (Malnadu) ಮತ್ತು ಕರಾವಳಿ ಭಾಗದಲ್ಲಿ (Coastal Area) ಜನರು ಪರದಾಡುವ ಪರಿಸ್ಥಿತಿ ಇದೀಗ ಕಡಿಮೆಯಾಗಿದ್ದು, ಆದರೂ ಹಲವು ಭಾಗಗಳಲ್ಲಿ ಮಳೆ ಆರ್ಭಟಿಸುತ್ತಿದೆ.  ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಇಂದಿನಿಂದ ಕೆಲ ದಿನಗಳ ಕಾಲ ಪ್ರವಾಹ ಹಾಗೂ ನೆರೆ ಭೀತಿ ಎದುರಾಗಲಿದೆ. ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದ್ದು,  ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
Published by:Sandhya M
First published: