• Home
  • »
  • News
  • »
  • state
  • »
  • Karnataka Weather Today LIVE: ಮಳೆಯ ಅಬ್ಬರಕ್ಕೆ ಐತಿಹಾಸಿಕ ಕೆರೆ ಏರಿ ಬಿರುಕು, ಗ್ರಾಮಗಳಲ್ಲಿ ಆತಂಕ

Karnataka Weather Today LIVE: ಮಳೆಯ ಅಬ್ಬರಕ್ಕೆ ಐತಿಹಾಸಿಕ ಕೆರೆ ಏರಿ ಬಿರುಕು, ಗ್ರಾಮಗಳಲ್ಲಿ ಆತಂಕ

ಕೆರೆ ಏರಿ ಬಿರುಕು

ಕೆರೆ ಏರಿ ಬಿರುಕು

ಇದೀಗ ಸೂರ್ಯ (Sun) ದರ್ಶನ ನೀಡುತ್ತಿದ್ದು, ರೈತಾಪಿ (Farmers) ವರ್ಗದಲ್ಲಿ ಸಂತಸ ಮನೆ ಮಾಡಿದೆ. ಇಂದು ಭಾಗಶಃ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗಲಿದೆ.

  • News18
  • Last Updated :
  • Share this:

ಇಂದು ರಾಜ್ಯದಲ್ಲಿ ತುಂತುರು ಮಳೆಯಾಗಲಿದೆ (Karnataka Rains). ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಕೊಂಚ ಇಳಿಕೆಯಾಗಿದ್ದು, ಅಲ್ಲಲ್ಲಿ ಭೂಕುಸಿತ (Landslide) ಉಂಟಾಗುತ್ತಿವೆ. ಸುಮಾರು ಅರ್ಧ ಎಕರೆಯಷ್ಟು ಕಾಫಿ ತೋಟಗಳು (Coffee Plants) ಕೊಚ್ಚಿಕೊಂಡು ಹೋಗುತ್ತಿವೆ. ಚಿಕ್ಕಮಗಳೂರು (Chikkamagaluru) ಮತ್ತು ಕೊಡಗು (Kodagu) ಭಾಗದಲ್ಲಿ ಇಂತಹ ವರದಿಗಳು ಬರುತ್ತಿವೆ. ಕಳೆದೊಂದು ತಿಂಗಳಿನಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಗಳು (River) ಶಾಂತವಾಗಿವೆ. ಜಲಾವೃತಗೊಂಡಿದ್ದ ಕೆಳ ಹಂತದ ಸೇತುವೆಗಳು (Bridge) ಸಂಚಾರಕ್ಕೆ ಮುಕ್ತವಾಗಿವೆ. ಇನ್ನೂ ಈ ಬಾರಿ ಬಿಸಿಲು ನಾಡು ಕಲಬುರಗಿ ಮತ್ತು ಬೀದರ್ (Kalaburgi And Bidar Rains) ಭಾಗದಲ್ಲಿಯೂ ವರುಣ ಕೃಪೆ ತೋರಿದ್ದಾನೆ. ರಾಜ್ಯದ ಜಲಾಶಯಗಳು (Dams) ಬಹುತೇಕ ಭರ್ತಿಯಾಗಿದ್ದು, ಹೆಚ್ಚಾದ ನೀರನ್ನು ನದಿಗೆ ಬಿಡಲಾಗುತ್ತಿದೆ.

Published by:Mahmadrafik K
First published: