Karnataka Weather Today LIVE: ಕೊಡಗಿನಲ್ಲಿ ಮತ್ತೆ ಭೂಕುಸಿತ; ಕೊಚ್ಚಿಹೋಯ್ತು ಕಾಫಿ ತೋಟ

ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಬೆಳಗಾವಿಯಲ್ಲಿ ಮಳೆ ಇಳಿಕೆಯಾಗಿದೆ. ಪಶ್ಚಿಮಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣೆ, ಭೀಮೆ ಸೇರಿದಂತೆ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.

ಭೂಕುಸಿತ

ಭೂಕುಸಿತ

  • Share this:
ಮಳೆ ನಿಂತರೂ ಮಳೆ (Rainfall) ಹನಿ ನಿಲ್ಲಲ್ಲ ಎಂಬ ಮಾತಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ್ದರೂ, ವರುಣದೇವ ಸೃಷ್ಟಿಸಿದ ಅವಾಂತರಗಳು (Rains effect) ಜನರನ್ನ ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಕೊಡಗಿನಲ್ಲಿ ಮಳೆಯ (Kodagu Rains) ಜೊತೆ ಪ್ರತಿದಿನ ಹೊಸ ಹೊಸ ಸ್ಥಳಗಳಲ್ಲಿ ಭೂ ಕುಸಿತವಾಗುತ್ತಿದ್ದು (Landslide), ಮಡಿಕೇರಿ ಮತ್ತು ಮಂಗಳೂರು (Madikeri To Mangaluru) ನಡುವೆ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ. ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಯ ಕೊರತೆಯಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಬುಧವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಹುದಿನಗಳ ಬಳಿಕ ಸೂರ್ಯದೇವ ದರ್ಶನ ನೀಡಿದ್ದಾನೆ. ಮಳೆಯ ಪ್ರಮಾಣ ಕಡಿಮೆಯಾದರೂ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಬೆಳಗಾವಿಯಲ್ಲಿ ಮಳೆ ಇಳಿಕೆಯಾಗಿದೆ.  ಪಶ್ಚಿಮಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣೆ, ಭೀಮೆ ಸೇರಿದಂತೆ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. 
Published by:Mahmadrafik K
First published: