• Home
  • »
  • News
  • »
  • state
  • »
  • Karnataka Weather Report: ಮಂಜು, ಬಿಸಿಲು, ಮಳೆ; ರಾಜ್ಯದ ಈ ಪ್ರದೇಶಗಳಲ್ಲಿ ಹವಾಮಾನ ಹೀಗಿರಲಿದೆ

Karnataka Weather Report: ಮಂಜು, ಬಿಸಿಲು, ಮಳೆ; ರಾಜ್ಯದ ಈ ಪ್ರದೇಶಗಳಲ್ಲಿ ಹವಾಮಾನ ಹೀಗಿರಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ.

  • Share this:

ಬೆಂಗಳೂರು: ಬೆಳಗ್ಗೆ ಮಂಜು ಮುಸುಕಿನ ವಾತಾವರಣ, ಚೂರು ಚಳಿ ಮಧ್ಯಾಹ್ನ, ಬಿಸಿಲು ಸಂಜೆ ತುಂತುರು ಮಳೆ, ಕರ್ನಾಟಕದ ಇಂದಿನ ವಾತಾವರಣವನ್ನು (Karnataka Weather Report Today) ಒಂದೇ ಸಾಲಿನಲ್ಲಿ ವಿವರಿಸುವುದಾದರೆ ಹೀಗೆ ಹೇಳಬಹುದು. ಆದರೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮೋಡ ಕವಿದ (Karnataka Rains)  ವಾತಾವರಣ ಇರಲಿದೆ. ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಾತಾವರಣ  ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ಮಳೆಯಾಗುವ ಸಾಧ್ಯತೆಯಿದೆ.


ಬಂಗಾಳಕೊಲ್ಲಿಯ (Bay of Bengal) ಮೇಲ್ಮ್ಮೈಯಲ್ಲಿ ಉಂಟಾಗಿರುವ ಸುಳಿಗಾಳಿ ಹಿನ್ನೆಲೆ ಇಂದು ವಿವಿಧ ಪ್ರದೇಶಗಳಲ್ಲಿ ಮಳೆಯಾಗುವ (Rain Prediction) ಸಾಧ್ಯತೆಗಳಿವೆ. ಆಂಧ್ರ ಪ್ರದೇಶ (Andhra Pradesh), ತಮಿಳುನಾಡು ಕರಾವಳಿಯಲ್ಲಿ ಕೊಂಚ ಅಧಿಕವಾಗಿ ಮಳೆಯಾಗಲಿದೆ.


ಮುಂಗಾರು ಮಳೆಯೇ ಮುಂದುವರಿಕೆ
ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ. ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಬೆಂಗಳೂರಿನ ಹವಾಮಾನ ಹೇಗಿರಲಿದೆ?
ಬೆಂಗಳೂರಿನ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ , ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಜಿಲ್ಲಾವಾರು ಗರಿಷ್ಠ ಉಷ್ಣಾಂಶ ಮತ್ತು ಕನಿಷ್ಠ ಉಷ್ಣಾಂಶ ವಿವರ ಓದಿ
ಬಳ್ಳಾರಿ ಜಿಲ್ಲೆಯ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ , ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ , ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್  ಇರಲಿದೆ. 


ಇದನ್ನೂ ಓದಿ: Humanity: ಮರಿಯಾನೆಯ ರಕ್ಷಿಸಲು ರಾಜಕೀಯ ಮರೆತು, ಮಾನವೀಯತೆ ಮೆರೆದ ರಾಹುಲ್ ಗಾಂಧಿ, ಸಿಎಂ ಬೊಮ್ಮಾಯಿ!


ಈ ಜಿಲ್ಲೆಗಳ ಹವಾಮಾನ ಗರಿಷ್ಠ ಉಷ್ಣಾಂಶ ಮತ್ತು ಕನಿಷ್ಠ ಉಷ್ಣಾಂಶ ಹೀಗಿರಲಿದೆ ನೋಡಿ 
ಮೈಸೂರು 28-18, ಮಂಡ್ಯ 30-19, ಹಾಸನ 27-18, ಬೆಳಗಾವಿ 25-20, ಮಂಗಳೂರು 28-23, ಚಾಮರಾಜನಗರ 30-19, ಶಿವಮೊಗ್ಗ  27-20, ಮಡಿಕೇರಿ  23-16
ರಾಮನಗರ  29-19, ಚಿಕ್ಕಬಳ್ಳಾಪುರ 27-19, ಕೋಲಾರ 29-19 ಡಿಗ್ರಿ ಸೆಲ್ಸಿಯಸ್  ಇರಲಿದೆ.


ಇದನ್ನೂ ಓದಿ: Sudhakar: ವರ್ಷಾಂತ್ಯಕ್ಕೆ ತೆರೆಯಲಿವೆ 438 ನಮ್ಮ ಕ್ಲಿನಿಕ್; ವೈದ್ಯರ ನೇಮಕಕ್ಕೆ ಸಜ್ಜಾದ ಸರ್ಕಾರ


ಬಾಗಲಕೋಟೆ 28-21, ಗದಗ 27-21, ಕೊಪ್ಪಳ 28-21, ರಾಯಚೂರು 29-22, ಯಾದಗಿರಿ 28-22, ವಿಜಯಪುರ 27-21, ಬೀದರ್ 27-21, ಕಲಬುರಗಿ 28-22 ತುಮಕೂರು 28-19, ಉಡುಪಿ 28-24, ಕಾರವಾರ 27-24, ಚಿಕ್ಕಮಗಳೂರು 26-17 , ದಾವಣಗೆರೆ  28-21, ಚಿತ್ರದುರ್ಗ 27-19, ಹಾವೇರಿ 27-21, ಬಳ್ಳಾರಿ 29-22 ಇರಲಿದೆ.


ಶೇ.20ರಷ್ಟು ಅಧಿಕ ಮಳೆ
ಮುಂಗಾರು ರಾಜ್ಯದಲ್ಲಿ ಚುರುಕಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಕರ್ನಾಟಕದಲ್ಲಿ ಶೇ. 20ರಷ್ಟು ಅಧಿಕ ಮಳೆ ಸುರಿದಿದೆ. ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ.ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಭಾರೀ ಮಳೆ ಸಾಧ್ಯತೆ
ಅಕ್ಟೋಬರ್ 8ರವರೆಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಅತಿ ಮಳೆ ಬೀಳುವ ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಇನ್ನು ಮುಂದಿನ ಮೂರು ದಿನ ಒಡಿಶಾ, ಆಂಧ್ರಪ್ರದೇಶದ ಕರಾವಳಿಯಲ್ಲಿ ವರುಣ ಅಬ್ಬರಿಸಲಿದ್ದಾನೆ. ಇದರ ಜೊತೆ ಛತ್ತೀಸ್​​ಗಢ ಮತ್ತು ಮಧ್ಯ ಪ್ರದೇಶದಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇವೆ.

Published by:ಗುರುಗಣೇಶ ಡಬ್ಗುಳಿ
First published: