ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಭಾರೀ ಮಳೆ (Heavy Rainfall) ಸುರಿಯುತ್ತಿದ್ದು, ಕರಾವಳಿ (Coastal) ಹಾಗೂ ಮಲೆನಾಡು (Malenadu) ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂದಿನ ಹವಾಮಾನ ಇಲಾಖೆ (Indian India Meteorological Department) ಮಾಹಿತಿ ಪ್ರಕಾರದಲ್ಲಿ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗಲಿದೆ. ಇನ್ನು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಇನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಸಹ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ಘೋಷಿಸಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜುಲೈ 9 ರಿಂದ ಕರಾವಳಿಯ ಜಿಲ್ಲೆಗಳು ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲುಗಳ ಬಳಿ ಹೇಮಾವತಿ ನದಿ ನೀರು ತುಂಬಿ ಬಂದಿದ್ದು, ಮಳೆ ಹೀಗೆ ಮುಂದುವರಿದರೆ ದೇವಾಲಯ ಮುಳುಗಡೆ ಸಾಧ್ಯತೆ ಇದೆ.
ಜಿಲ್ಲಾವಾರು ಹವಾಮಾನ ವರದಿ ಹೀಗಿದೆ.
ಬೆಂಗಳೂರು: 24-19, ಕೊಡಗು: 20-17, ರಾಮನಗರ: 25-21, ಚಿಕ್ಕಬಳ್ಳಾಪುರ: 24-19, ಮಂಗಳೂರು: 27-24, ಶಿವಮೊಗ್ಗ: 24-21, ಬೆಳಗಾವಿ: 23-20, ಮೈಸೂರು: 23-19, ಹಾಸನ: 22-19, ಚಾಮರಾಜನಗರ: 25-21, ಮಂಡ್ಯ: 25-21, ಯಾದಗಿರಿ: 27-23.
ವಿಜಯಪುರ: 26-21. ಕೋಲಾರ: 26-21, ತುಮಕೂರು: 24-20, ಚಿತ್ರದುರ್ಗ: 24-21, ಹಾವೇರಿ: 24-21, ಬಳ್ಳಾರಿ: 27-23, ಗದಗ: 25-21, ಉಡುಪಿ: 27-24, ಕಾರವಾರ: 27-25, ಚಿಕ್ಕಮಗಳೂರು: 21-18, ಬೀದರ್: 23-21, ಕಲಬುರಗಿ: 26-22ಬಾಗಲಕೋಟೆ: 27-22, ಕೊಪ್ಪಳ: 26-22, ರಾಯಚೂರು: 28-23, ದಾವಣಗೆರೆ: 25-21.
ಇದನ್ನೂ ಓದಿ: ಕೊಲೆ ನಡೆದಿದ್ದ ಹೋಟೆಲ್ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಸಿಬ್ಬಂದಿಗೆ ಫುಲ್ ಕ್ಲಾಸ್
ವಿವಿಧ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ
ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಧಾರಾಕಾರ ಮಳೆ ಆಗುತ್ತಿದ್ದು, ಇಂದು ಜಿಲ್ಲೆಯ 3 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿ ಡಿಡಿಪಿಐ ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಮಳೆಯ ಆರ್ಭಟ ಹೆಚ್ಚಿದ್ದು, ಎಲ್ಲಾ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಜುಲೈ 8 ಮತ್ತು ಜುಲೈ 9 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ನೀಡಿದ್ದು, ರೆಡ್ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಮಾತ್ರವಲ್ಲದೇ, ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿಕೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿ, ಎಲ್ಲಾ ಸರ್ಕಾರಿ ಖಾಸಗಿ ಶಾಲಾ ಕಾಲೇಜಿಗೆ ಎರಡು ದಿನ ರಜೆ ಮಾಡಿ ಆದೇಶ ನೀಡಲಾಗಿದೆ. ಹಾಗೆಯೇ, ಹೆಚ್ಚು ಮಳೆ ಬೀಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಹೊನ್ನಾವರ, ಅಂಕೋಲಾ, ಭಟ್ಕಳ, ಶಿರಸಿ, ಸಿದ್ದಾಪುರ, ಜೋಯಿಡಾ ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಮುಂಡಗೋಡು, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ನಡೆಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಭೂಕುಸಿತ, ಭೂಕಂಪ! ಅಗತ್ಯ ಬಿದ್ದರೆ ಮನೆ ಮನೆಗೆ ಸೆಕ್ಯುರಿಟಿ ಭರವಸೆ ಕೊಟ್ಟ ಸರ್ಕಾರ
ಕರಾವಳಿಯಾದ್ಯಂತ ಈ ವಾರಾಂತ್ಯದವರೆಗೂ ಭಾರೀ ಮಳೆ ನಿರೀಕ್ಷಿಸಲಾಗಿದೆ. ಸಮುದ್ರ, ನದಿ, ಕೆರೆಗಳಿಗೆ ಇಳಿಯದಂತೆ ಆಯಾಯ ಜಿಲ್ಲಾಡಳಿತವು ಎಚ್ಚರಿಸಿದೆ ಸಾಮಾನ್ಯವಾಗಿ ಜೂನ್‌ನಲ್ಲಿ ಭಾರತದ ಸರಾಸರಿ ಮಳೆಯ ಪ್ರಮಾಣ 16.53 ಸೆಂ.ಮೀ. ಆಗಬೇಕಿತ್ತು. ಮಾನ್ಸೂನ್ ಮುಂಚಿತವಾಗಿ ಪ್ರವೇಶಿಸಿದರೂ ಈ ಭಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವುದು ರೈತರಲ್ಲಿ ಕೊಂಚ ಆತಂಕಕ್ಕೀಡು ಮಾಡಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ