Karnataka Weather Today: ಬೆಳಗ್ಗೆ ಚಳಿ, ಮಧ್ಯಾಹ್ನ ಬಿರು ಬಿಸಿಲು! ಹೇಗಿರಲಿದೆ ನಿಮ್ಮೂರಿನ ಹವಾಮಾನ?

ಈಗಾಗಲೇ ಬೇಸಿಗೆ ಕಾಲಿಟ್ಟಿದೆ. ಕೆಂಡದಂತೆ ಭೂಮಿ ಸುಡಲು ಆರಂಭವಾಗಿದೆ. ಆದರೂ ಬಹುತೇಕ ಕಡೆಗಳಲ್ಲಿ ರಾತ್ರಿ ಹಾಗೂ ಮುಂಜಾನೆ ಚಳಿಯ ವಾತಾವರಣವಿದ್ದು, ದಿನವೆಲ್ಲಾ ಬಿಸಿಲು ಸುಡುತ್ತಿರುತ್ತದೆ. ಹಾಗಾದ್ರೆ ಇಂದು ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? ನಿಮ್ಮೂರಿನ ಹವಾಮಾನ ವರದಿ ಏನು ಹೇಳುತ್ತದೆ? ಇಲ್ಲಿದೆ ಓದಿ ಸಂಪೂರ್ಣ ವಿವರ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report, Feb. 16: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ (Summer) ಕಾಲ ಶುರುವಾಗಿದೆ. ಫೆಬ್ರವರಿ (February) ಆರಂಭದಲ್ಲೇ ರಾಜ್ಯದ ಬಹುತೇಕ ಕಡೆ ಬಿರು ಬಿಸಿಲು ಆರಂಭವಾಗಿದೆ. ಕೆಂಡದಂತೆ ಭೂಮಿ ಸುಡಲು ಆರಂಭವಾಗಿದೆ. ಆದರೂ ಬಹುತೇಕ ಕಡೆಗಳಲ್ಲಿ ರಾತ್ರಿ ಹಾಗೂ ಮುಂಜಾನೆ ಚಳಿಯ ವಾತಾವರಣವಿದ್ದು (Cold Weather) , ದಿನವೆಲ್ಲಾ ಬಿಸಿಲು ಸುಡುತ್ತಿರುತ್ತದೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ವಾತಾವರಣವಿರುತ್ತದೆ. ಬಳಿಕ ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಕೊಂಚ ಕೊಂಚವೇ  ಏರಿಕೆಯಾಗಲಿದೆ. ಕರಾವಳಿ ಭಾಗಗಳಲ್ಲಿ ಮಧ್ಯಾಹ್ನದಿಂದಲೇ ಉಷ್ಣಾಂಶ ಹೆಚ್ಚಾಗಿ ಇರಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಮಲೆನಾಡಿನ ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮುಂದಿನ 48 ಗಂಟೆಗಳ ಕಾಲ ಕೆಲವೆಡೆ ಮಳೆ

ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ತಮಿಳುನಾಡಿನ ದಕ್ಷಿಣ ಪಶ್ಚಿಮ ಘಟ್ಟಗಳು ಮತ್ತು ಒಳ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಯಮತ್ತೂರು, ತಿರುಪುರ್, ಥೇಣಿ, ದಿಂಡಿಗಲ್, ಮಧುರೈ, ವಿರುದುನಗರ, ತೆಂಕಶಿ, ಶಿವಗಂಗಾ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಚೆನ್ನೈನಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ, ಆದರೆ ತಮಿಳುನಾಡಿನ ಉಳಿದ ಭಾಗಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಶುಷ್ಕ ವಾತಾವರಣವಿರುತ್ತದೆ.

ನಿಮ್ಮ ನಗರಗಳ ಇಂದಿನ ಹವಾಮಾನ ವರದಿ ಹೀಗಿದೆ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು - 30-17, ಮಂಗಳೂರು - 31-23, ಶಿವಮೊಗ್ಗ - 33-19, ಬೆಳಗಾವಿ -  32-17, ಮೈಸೂರು - 32-19

ಮಂಡ್ಯ- 32-19, ರಾಮನಗರ - 32-19, ಹಾಸನ - 29-18, ಚಾಮರಾಜನಗರ - 32-19, ಚಿಕ್ಕಬಳ್ಳಾಪುರ - 29-16, ಕೋಲಾರ -  30-16, ತುಮಕೂರು - 31-18, ಉಡುಪಿ-  31-24, ಉತ್ತರ ಕನ್ನಡ -  31-22, ಚಿಕ್ಕಮಗಳೂರು  - 29-17, ದಾವಣಗೆರೆ - 33-19

ಇದನ್ನೂ ಓದಿ: Astrology: ತುಲಾ ರಾಶಿಯವರಿಗೆ ಕಾಡಲಿದೆ ಅತಿಯಾದ ಒತ್ತಡ; ಹೇಗಿರಲಿದೆ ಉಳಿದ ರಾಶಿಗಳ ದಿನ

ಚಿತ್ರದುರ್ಗ -  32-19, ಹಾವೇರಿ - 33-18, ಬಳ್ಳಾರಿ - 33-21, ಗದಗ - 33-19, ಕೊಪ್ಪಳ-  33-20, ರಾಯಚೂರು - 33-21 , ಯಾದಗಿರಿ - 33-21, ವಿಜಯಪುರ - 33-21, ಬೀದರ್ - 31-19, ಕಲಬುರಗಿ -  33-21, ಬಾಗಲಕೋಟೆ- 34-20

ದೇಶದ ಹಲವೆಡೆ ಇಂದು ಮಳೆ ಸಾಧ್ಯತೆ

ತಮಿಳುನಾಡು, ಕೇರಳ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಭಾರೀ ಮಳೆ ಇರಲಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಿಮಮಳೆ ಅಥವಾ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.

ಈ ವಾರಾಂತ್ಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಭಾರೀ ಹಿಮ ಅಥವಾ ಮಳೆಯಾಗುತ್ತದೆ. ಇಂದು ಕೇರಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. 

ಮುಂದಿನ ಮೂರು ದಿನಗಳ ಕಾಲ ಮಳೆ 

ಮುಂದಿನ 3 ದಿನಗಳ ಕಾಲ ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ರಾಜ್ಯವಾದ ತಮಿಳುನಾಡಿನಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ. ದಕ್ಷಿಣ ಮತ್ತು ಪಶ್ಚಿಮ ಘಟ್ಟದ ​​ಜಿಲ್ಲೆಗಳಲ್ಲಿ ತುಂತುರು ಮಳೆಯ ಜೊತೆಗೆ ಚೆನ್ನೈನಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆ.10ರಿಂದ ಸಂಜೆ 7ರವರೆಗೆ ಕರೆಂಟ್​ ಇರೋಲ್ಲ..!

ಇಂದಿನಿಂದ ತಮಿಳುನಾಡಿನಲ್ಲಿ ಶುಷ್ಕ ವಾತಾವರಣವನ್ನು ನಿರೀಕ್ಷಿಸಲಾಗಿತ್ತು. ಆದರೆ, ಗಾಳಿಯ ವೇಗ ಮತ್ತು ದಿಕ್ಕಿನಲ್ಲಿ ಉಂಟಾಗುವ ಬದಲಾವಣೆಯು ಮತ್ತೊಮ್ಮೆ ತಮಿಳುನಾಡಿನಲ್ಲಿ ಮಳೆಯ ಚಟುವಟಿಕೆಯನ್ನು ಉಂಟುಮಾಡುತ್ತದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Published by:Annappa Achari
First published: