ಇಂದು ಅಥವಾ ನಾಳೆ ಮಳೆ (Rainfall) ಕಡಿಮೆ ಆಗುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ. ಆದ್ರೆ ಅಕಾಶಕ್ಕೆ ರಂಧ್ರ ಬಿದ್ದಂತೆ ಮಳೆರಾಯ ಮಾತ್ರ ಅಬ್ಬರಿಸುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ಸಮಸ್ಯೆಗಳು (Rain Effect) ಸಹ ಸೃಷ್ಟಿಯಾಗ್ತಿವೆ. ಪ್ರವಾಹ (Flood) ಆತಂಕ, ಭೂಮಿ ಕುಸಿಯುತ್ತಾ (Landslide) ಅನ್ನೋ ಭಯ ಮಲೆನಾಡು ಮತ್ತು ನದಿತೀರದ ವಾಸಿಗಳಲ್ಲಿ ಮನೆ ಮಾಡಿದೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕಡಿಮೆ ಆಗಲಿ ಎಂದು ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಮತ್ತು ನಾಳೆ ಸಹ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸಂಪೂರ್ಣ ಮೋಡ ಮುಸುಕಿದ ವಾತಾವರಣ (Cloudy Weather) ಇರಲಿದ್ದು, ಮಳೆ ಆಗಲಿದೆ. ಉತ್ತರ ಒಳನಾಡು ಭಾಗದಲ್ಲಿ ವರುಣದೇವ ಅಬ್ಬರಿಸುತ್ತಿದ್ದಾನೆ.
ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಿಸಿಲು ಕಾಣದೇ ಇರೋದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ಇತ್ತ ಕಾಫಿ ಬೆಳೆಗಾರರು ಸಹ ಬೆಳೆಗೆ ರೋಗ ತಗಲುವ ಆತಂಕದಲ್ಲಿದ್ದಾರೆ.
ರಾಜಧಾನಿ ಬೆಂಗಳೂರು ಬೇರೆ ಪ್ರದೇಶಗಳಿಗಿಂತ ಏನು ಭಿನ್ನವಾಗಿಲ್ಲ. ಬೆಂಗಳೂರು ನಗರದ ಜನರು ಸೂರ್ಯನಿಗಾಗಿ ಕಾಯುತ್ತಿದ್ದು, ತಮ್ಮ ಮೇಲೆ ಕೃಪೆ ತೋರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಗಾರ್ಡನ್ ಸಿಟಿಯಲ್ಲಿಂದು ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಇದನ್ನೂ ಓದಿ: Arkavathi River: ದಶಕಗಳ ನಂತರ ಮೈದುಂಬಿ ಹರಿಯುತ್ತಿದ್ದಾಳೆ ಅರ್ಕಾವತಿ; 1962ರಲ್ಲಿ ಕಾಣಿಸಿಕೊಂಡಿತ್ತು ಪ್ರವಾಹ
ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು 26-19, ಮೈಸೂರು 25-20, ಚಾಮರಾಜನಗರ 27-21, ರಾಮನಗರ 27-21, ಮಂಡ್ಯ 26-21, ಬೆಂಗಳೂರು ಗ್ರಾಮಾಂತರ 26-19, ಚಿಕ್ಕಬಳ್ಳಾಪುರ 27-20, ಕೋಲಾರ 27-20, ಹಾಸನ 22-19, ಚಿತ್ರದುರ್ಗ 25-21, ಚಿಕ್ಕಮಗಳೂರು 21-18, ದಾವಣಗೆರೆ 26-21, ಶಿವಮೊಗ್ಗ 24-21, ಕೊಡಗು 19-17, ತುಮಕೂರು 26-20
ಉಡುಪಿ 27-25, ಮಂಗಳೂರು 27-25, ಉತ್ತರ ಕನ್ನಡ 23-21, ಧಾರವಾಡ 23-20, ಹಾವೇರಿ 25-21, ಹುಬ್ಬಳ್ಳಿ 24-21, ಬೆಳಗಾವಿ 27-20, ಗದಗ 25-21, ಕೊಪ್ಪಳ 27-22, ವಿಜಯಪುರ 25-21, ಬಾಗಲಕೋಟ 26-22 , ಕಲಬುರಗಿ 26-22, ಬೀದರ್ 24-21, ಯಾದಗಿರಿ 26-23, ರಾಯಚೂರ 27-23 ಮತ್ತು ಬಳ್ಳಾರಿ 28-23
ಹಂತ ಹಂತವಾಗಿ ಕಡಿಮೆ ಆಗಲಿದೆ ಮಳೆ
ರಾಜ್ಯದ ಒಟ್ಟು 31ಜಿಲ್ಲೆಗಳ ಪೈಕಿ ಸುಮಾರು ಏಳು ಜಿಲ್ಲೆಗಳಲ್ಲಿ ಮಾತ್ರ ಮುಂದಿನ 3 ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೀದರ್, ಕಲಬುರಗಿ ಈ ಏಳು ಜಿಲ್ಲೆಗಳ ಹಲವೆಡೆ ಭಾರೀ ಮಳೆ ಆಗಬಹುದು.
ದಶಕಗಳ ಬಳಿಕ ತುಂಬಿಕೊಂಡ ಅರ್ಕಾವತಿ
ಎಡೆಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಅರ್ಕಾವತಿ ನದಿ (Arkavathi River) ಸುಮಾರು 52 ವರ್ಷಗಳ ಬಳಿಕ ಪ್ರವಾಹೋಪಾದಿಯಲ್ಲಿ (Flood) ಹರಿದಿದೆ. ಇದುವರೆಗೆ ಕುರುಹು ಇಲ್ಲದಂತಿದ್ದ ನದಿಯಲ್ಲಿ ಪ್ರವಾಹ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಸುಮಾರು ಐದು ದಶಕಗಳ ಬಳಿಕ ಕಂಡು ಬಂದ ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಇದನ್ನೂ ಓದಿ: Heavy Rain: ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ; ರಸ್ತೆಯಲ್ಲಿ ಬಿರುಕು, ಮನೆಗಳು ಕುಸಿತ
ಹಾಗೆ ನೋಡಿದರೆ ದಶಕಗಳಿಂದ ಚರಂಡಿ ನೀರಿನ (Drainage Water) ಹರಿವಿಗೆ ಸೀಮಿತವಾಗಿದ್ದ ಅರ್ಕಾವತಿ ನದಿಯು ನಿರಂತರ ಮಳೆಯಿಂದ ಇದೀಗ ಹಿಂದಿನ ವೈಭವದೊಂದಿಗೆ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ