Karnataka Weather Report: ಕರ್ನಾಟಕದ ಎಲ್ಲೆಲ್ಲಿ ಇಂದು ಜೋರು ಮಳೆಯಾಗಲಿದೆ? ಯಾವೂರಿನ ಉಷ್ಣಾಂಶ ಎಷ್ಟಿರಲಿದೆ?

ಸೆಪ್ಟೆಂಬರ್ 16ರಂದು ದಿನದ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಂಗಳೂರಿನಲ್ಲಿ ಇಂದೇ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೀದರ್ ಮಳೆ

ಬೀದರ್ ಮಳೆ

  • Share this:
ಮಳೆ ಕೊಂಚ ಬಿಡುವು ನೀಡಿದೆ. ಆದರೂ ಕರ್ನಾಟಕದ (Karnataka Rains) ವಿವಿಧ ಭಾಗಗಳಲ್ಲಿ ಮೋಡ ಕವಿದ (Karnataka Weather Report) ವಾತಾವರಣವಿದೆ. ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅಲ್ಲದೇ  ಬೆಂಗಳೂರು ನಗರದಲ್ಲೂ ಮಳೆ (Bengaluru Rains) ಸುರಿಯುವ ಸಾಧ್ಯತೆ ಇದೆ. ಜೊತೆಗೆ ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲೂ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ದೊಡ್ಡಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರೀ ಪ್ರಮಾಣದಲ್ಲಿ ಬೀಳಬಹುದು ಎಂದು ಹವಾಮಾನ ಇಲಾಖೆ ಮುಂಜಾಗೃತೆಗಾಗಿ ಮುನ್ಸೂಚನೆ ನೀಡಿದೆ.  ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು ಸೆಪ್ಟೆಂಬರ್ 16ರಂದು ದಿನದ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಂಗಳೂರಿನಲ್ಲಿ ಇಂದೇ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದಲ್ಲಿ (North Karnataka) ಮಳೆ ತಗ್ಗಿದ್ದರೂ, ಪ್ರವಾಹದ (Flood) ಆತಂಕ ಮಾತ್ರ ಕಡಿಮೆಯಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ (Western Hills) ಸುರಿಯುತ್ತಿರುವ ಮಳೆಯಿಂದಾಗಿ ಭೀಮೆ, ಕೃಷ್ಣೆ (Bhima And Krishna Rivers) ಸೇರಿದಂತೆ ಬೆಳಗಾವಿ (Belagavi) ಭಾಗದ ಎಲ್ಲಾ ನದಿಗಳು ಅಪಾಯದ ಮಟ್ಟ ತಲುಪಿದೆ.

ಯಾವ ಜಿಲ್ಲೆಯಲ್ಲಿ ಎಷ್ಟಿರಲಿದೆ ಇಂದಿನ ಉಷ್ಣಾಂಶ?
ಕರ್ನಾಟಕದ ವಿವಿಧ ಜಿಲ್ಲೆಗಳ ಇಂದಿನ ಉಷ್ಣಾಂಶವನ್ನು ಗಮನಿಸುವುದಾದರೆ  ಬೆಂಗಳೂರು: 29-19, ಮಂಗಳೂರು: 28-24, ಶಿವಮೊಗ್ಗ: 28-21, ಬೆಳಗಾವಿ: 24-21,  ತುಮಕೂರು: 30-19, ಉಡುಪಿ: 29-24, ಕಾರವಾರ: 28-25, ಚಿಕ್ಕಮಗಳೂರು: 26-18, ದಾವಣಗೆರೆ: 29-21, ಮೈಸೂರು: 30-20, ಮಂಡ್ಯ: 31-20, ಕೊಡಗು: 24-18, ರಾಮನಗರ: 31-20, ಹಾಸನ: 27-19, ಚಾಮರಾಜನಗರ: 31-19, ಚಿಕ್ಕಬಳ್ಳಾಪುರ: 28-18, ಕೋಲಾರ: 31-19 ಉಷ್ಣಾಂಶ ಇರಲಿದೆ

ರಾಯಚೂರು: 32-23, ಯಾದಗಿರಿ: 31-23, ವಿಜಯಪುರ: 29-19, ಬೀದರ್: 28-21, ಕಲಬುರಗಿ: 30-22, ಬಾಗಲಕೋಟೆ: 30-22ಚಿತ್ರದುರ್ಗ: 29-21, ಹಾವೇರಿ: 28-22, ಬಳ್ಳಾರಿ: 32-23, ಗದಗ: 28-21, ಕೊಪ್ಪಳ: 30-22 ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Puneeth Rajkumar: ಯುವರತ್ನನ ಜನ್ಮದಿನವಿನ್ನು ಸ್ಫೂರ್ತಿ ದಿನ! ಸರ್ಕಾರದಿಂದ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ

ಬೆಳಗಾವಿಯಲ್ಲಿ ಮಳೆ ಅವಾಂತರ; ಒಂದೇ ವಾರದಲ್ಲಿ ‌ಮೂವರು ಬಲಿ!
ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇತ್ತ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ  ಒಂದೇ ವಾರದ ಅಂತರದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: Anti Conversion Bill: ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಪಾಸ್! ಪ್ರತಿ ಹರಿದು ಹಾಕಿ ಕಾಂಗ್ರೆಸ್ ಆಕ್ರೋಶ

ಮಹಾರಾಷ್ಟ್ರದ ಸತಾರ ಜಿಲ್ಲೆಯ 105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯ ಭಾಗಶಃ ಭರ್ತಿಯಾಗಿದೆ. ಶೇ.96ರಷ್ಟು ಜಲಾಶಯ ಭರ್ತಿಯಾಗಿದ್ದು, ಒಳಹರಿವು ಹೆಚ್ಚಳವಾದ್ರೆ, ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ 36 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ 85 ಸಾವಿರ ಕ್ಯೂಸೆಕ್ ಕೃಷ್ಣಾ ನದಿ ಹರಿವು ಹೆಚ್ಚಳವಾಗಿದೆ. ಒಳಹರಿವು ಮತ್ತಷ್ಟು ಹೆಚ್ಚಾದ್ರೆ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲಿದೆ.

ರಾಜಕಾಲುವೆ ಅತಿಕ್ರಮ ತೆರವು
ಇತ್ತ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಒಮದೊಂದಾಗಿ ಕ್ರಮ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತೆರವು ಕಾಮಗಾರಿ ಭರದಿಂದ ನಡೆಯುತ್ತಿದೆ. 
Published by:ಗುರುಗಣೇಶ ಡಬ್ಗುಳಿ
First published: