Karnataka Weather Report: ತಗ್ಗಿದ ಮಳೆರಾಯ, ನದಿಗಳ ಅಬ್ಬರ ಇಳಿಕೆ; ಸೂರ್ಯದೇವನ ದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮೋಡ ಕವಿದ ವಾತಾವರಣದ ಜೊತೆಗೆ ಬಿಸಿಲು ಸಹ ಕಾಣಿಸಿಕೊಳ್ಳಲಿದೆ. ಕೆಲವು ಭಾಗಗಳಲ್ಲಿನ ತುಂತುರು ಮಳೆಯಾಗುವ (Bengaluru Rains) ಸಾಧ್ಯತೆಗಳಿವೆ.

  • Share this:

Weather Report: ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿದ್ದ ಮಳೆ ಪ್ರಮಾಣ (Rainfall) ತಗ್ಗಿದ್ದು, ನದಿಗಳು (Rivers) ಶಾಂತವಾಗಿವೆ. ಮಲೆನಾಡು (Malnadu) ಮತ್ತು ಕರಾವಳಿ ಭಾಗದಲ್ಲಿ (Coastal Area) ಜನರು ಮನೆಯಿಂದ ಹೊರಗೆ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸೂರ್ಯ (Sun) ದರ್ಶನ ನೀಡುತ್ತಿದ್ದು, ರೈತಾಪಿ (Farmers) ವರ್ಗದಲ್ಲಿ ಸಂತಸ ಮನೆ ಮಾಡಿದೆ. ಇಂದು ಭಾಗಶಃ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಇದೇ ರೀತಿಯ ವಾತಾವರಣ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮೋಡ ಕವಿದ ವಾತಾವರಣದ ಜೊತೆಗೆ ಬಿಸಿಲು ಸಹ ಕಾಣಿಸಿಕೊಳ್ಳಲಿದೆ. ಕೆಲವು ಭಾಗಗಳಲ್ಲಿನ ತುಂತುರು ಮಳೆಯಾಗುವ (Bengaluru Rains) ಸಾಧ್ಯತೆಗಳಿವೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್)


ಬೆಂಗಳೂರು 27-19, ಮೈಸೂರು 28-20, ಚಾಮರಾಜನಗರ 29-21, ರಾಮನಗರ 29-20, ಮಂಡ್ಯ 29-20, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 28-19, ಕೋಲಾರ 29-20, ಹಾಸನ 24-19, ಚಿತ್ರದುರ್ಗ 27-20, ಚಿಕ್ಕಮಗಳೂರು 23-18, ದಾವಣಗೆರೆ 27-21, ಶಿವಮೊಗ್ಗ 23-17, ಕೊಡಗು 26-18, ತುಮಕೂರು 28-19,


ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 25-21, ಧಾರವಾಡ 26-20, ಹಾವೇರಿ 27-21, ಹುಬ್ಬಳ್ಳಿ 26-21, ಬೆಳಗಾವಿ 24-21, ಗದಗ 27-21, ಕೊಪ್ಪಳ 29—22, ವಿಜಯಪುರ 29-22, ಬಾಗಲಕೋಟ 29-22, ಕಲಬುರಗಿ 31-23, ಬೀದರ್ 28-21, ಯಾದಗಿರಿ 31-23, ರಾಯಚೂರ 32-23 ಮತ್ತು ಬಳ್ಳಾರಿ 32-23


ಇದನ್ನೂ ಓದಿ:  Praveen Nettar: ಪ್ರವೀಣ್ ನೆಟ್ಟಾರು ಕೊಲೆಗೆ ಹೇಗಿತ್ತು ಪ್ಲಾನ್- ಆರೋಪಿಗಳು ಬಾಯ್ಬಿಟ್ಟಿದ್ದೇನು?


karnataka-weather-report-today-12th-august-2022-mrq
ಚಿಕ್ಕಮಗಳೂರು ಮಳೆ


ರಾಷ್ಟ್ರೀಯ ಹೆದ್ದಾರಿ 275ರ ಬದಿಯ ಬೆಟ್ಟದಲ್ಲಿ ಕುಸಿತ


ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರ ಬದಿಯ ಬೆಟ್ಟದಲ್ಲಿ ಸಣ್ಣ ಪ್ರಮಾಣದ ಕುಸಿತವಾಗಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಅಪಾಯವೆಂದು ಅರಿತು ಮಣ್ಣು ತೆರವು ಮಾಡಿಸುತ್ತಿದ್ದಾರೆ. ಎರಡು ಹಿಟಾಚಿ, ನಾಲ್ಕು ಟಿಪ್ಪರ್ ಗಳ ಮೂಲಕ ಮಣ್ಣು ತೆಗೆಯುತ್ತಿದ್ದಾರೆ. ಬಿರುಕು ಬಿಟ್ಟಿರುವಷ್ಟು ಮಣ್ಣನ್ನು ತೆಗೆಯಲು ನಿರ್ಧಾರ ಮಾಡಲಾಗಿದೆ.


ಮಳೆ ಜಾಸ್ತಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಮೇಲೆ ಸಾವಿರಾರು ಲೋಡ್ ಮಣ್ಣು ರಸ್ತೆಗೆ ಬೀಳುವ ಸಾಧ್ಯತೆ ಇದೆ. ರಸ್ತೆಯ ಒಂದು ಬದಿಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಮಾಡಲಾಗಿದೆ. ಯಾವುದೇ ಆತಂಕ ಇಲ್ಲ. ತೊಂದರೆ ಆಗದಂತೆ ಮಣ್ಣು ತೆರವು ಮಾಡಲಾಗ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಎಂಜಿನಿಯರ್ ಮುರುಗೇಶ್ ಮಾಹಿತಿ ನೀಡಿದ್ದಾರೆ.


ಕೊಚ್ಚಿ ಹೋಯ್ತು ಕಾಫಿ ತೋಟ


ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಊರುಗುತ್ತಿಯಲ್ಲಿ ಭೂ ಕುಸಿತವಾಗಿದೆ. ಸುಮಿತ್ರ ವೆಂಕಟೇಶ್ ಎಂಬವರ ಕಾಫಿ ತೋಟದಲ್ಲಿ ಅರ್ಧ ಎಕರೆಯಷ್ಟು ಭೂಕುಸಿತವಾಗಿದೆ. ಫಸಲಿಗೆ ಬಂದ ಕಾಫಿತೋಟ ನಾಶವಾಗಿದೆ. ನಿನ್ನೆ ಹರಪಳ್ಳಿಯಲ್ಲಿ ಭೂಕುಸಿತವಾಗಿತ್ತು.


ಚಿಕ್ಕಮಗಳೂರಿನಲ್ಲಿಯೂ ಭೂಕುಸಿತ


ಕಾಫಿನಾಡಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ತಂಬಳ್ಳಿಪುರ ಗ್ರಾಮದಲ್ಲಿ ವರುಣನ ಅಬ್ಬರಕ್ಕೆ ಕಾಫಿ ತೋಟ ಕೊಚ್ಚಿ ಹೋಗಿದೆ. ಅಣ್ಣಪ್ಪಶೆಟ್ಟಿ ಎಂಬವರಿಗೆ ಸೇರಿದ ಅರ್ಧ ಎಕರೆ ಕಾಫಿ ತೋಟ, ಮೆಣಸು ಹಾಳಾಗಿದೆ.


karnataka-weather-report-today-12th-august-2022-mrq
ಚಿಕ್ಕಮಗಳೂರು ಮಳೆ


ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಯ ಕೊರತೆಯಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಹುದಿನಗಳ ಬಳಿಕ ಸೂರ್ಯದೇವ ದರ್ಶನ ನೀಡಿದ್ದಾನೆ. ಮಳೆಯ ಪ್ರಮಾಣ ಕಡಿಮೆಯಾದರೂ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ.


ಇದನ್ನೂ ಓದಿ:  Shivamogga Subbanna: ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ


ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಬೆಳಗಾವಿಯಲ್ಲಿ ಮಳೆ ಇಳಿಕೆಯಾಗಿದೆ. ಪಶ್ಚಿಮಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣೆ, ಭೀಮೆ ಸೇರಿದಂತೆ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.

top videos
    First published: