• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Report: ಹಂತ ಹಂತವಾಗಿ ಕಡಿಮೆ ಆಗಲಿದೆ ಮಳೆ; ನಿಮ್ಮ ಜಿಲ್ಲೆಯ ಹವಾಮಾನ ವರದಿ ಇಲ್ಲಿದೆ

Karnataka Weather Report: ಹಂತ ಹಂತವಾಗಿ ಕಡಿಮೆ ಆಗಲಿದೆ ಮಳೆ; ನಿಮ್ಮ ಜಿಲ್ಲೆಯ ಹವಾಮಾನ ವರದಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Weather Report: ಇಂದು ಸಹ ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

  • Share this:

ಇಂದಿನಿಂದ ರಾಜ್ಯದಲ್ಲಿ ಹಂತ ಹಂತವಾಗಿ ಮಳೆ (Rainfall) ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರದಿಂದಲೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಸಂಜೆ ವೇಳೆಗೆ ತುಂತುರು ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮಂಗಳವಾರ ಮಧ್ಯಾಹ್ನ ಶಾಂತಿ ನಗರ, ವಿಧಾನಸೌಧ, ಜಯನಗರ ಭಾಗದಲ್ಲಿ ಜೋರು ಮಳೆ ಹೊರತುಪಡಿಸಿ ಬಹುತೇಕ ಕಡೆ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿತ್ತು. ಇಂದು ಸಹ ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 27-19, ಮೈಸೂರು 26-20, ಚಾಮರಾಜನಗರ 27-21, ರಾಮನಗರ 28-20, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 26-18, ಕೋಲಾರ 28-20, ಹಾಸನ 23-19, ಚಿತ್ರದುರ್ಗ 26-19, ಚಿಕ್ಕಮಗಳೂರು 21-18, ದಾವಣಗೆರೆ 26-21, ಶಿವಮೊಗ್ಗ 24-21, ಕೊಡಗು 21-17, ತುಮಕೂರು 27-20, ಉಡುಪಿ 28-24


ಮಂಗಳೂರು 28-24, ಉತ್ತರ ಕನ್ನಡ 24-21, ಧಾರವಾಡ 24-20, ಹಾವೇರಿ 26-21, ಹುಬ್ಬಳ್ಳಿ 25-21, ಬೆಳಗಾವಿ 23-20, ಗದಗ 26-21, ಕೊಪ್ಪಳ 28-22, ವಿಜಯಪುರ 28-22, ಬಾಗಲಕೋಟ 28-22 , ಕಲಬುರಗಿ 22-22, ಬೀದರ್ 26-21, ಯಾದಗಿರಿ 30-23, ರಾಯಚೂರ 31-23 ಮತ್ತು ಬಳ್ಳಾರಿ 30-23


ಇದನ್ನೂ ಓದಿ:  Belagavi Rains: ಕುಂದಾ ನಗರಿಯಲ್ಲಿ ಮಳೆಯ ಅಬ್ಬರಕ್ಕೆ ಮನೆ ಕುಸಿತ; ಅದೃಷ್ಟವಶಾತ್ ಉಳಿಯಿತು 7 ಜನರ ಪ್ರಾಣ


ತುಂಗಭದ್ರಾ ನದಿಯಲ್ಲಿ ಪ್ರವಾಹ


ತುಂಗಭದ್ರಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ಜಲಾಶಯದಿಂದ ನದಿಗೆ 1.64 ಲಕ್ಷ ಕ್ಯೂಸೆಕ್ಟ್ ನೀರು ಬಿಡಲಾಗಿದೆ. ಜಲಾಶಯಕ್ಕೆ ಈಗ 1.48 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು 2 ಲಕ್ಷ ಕ್ಯೂಸೆಕ್​ನಷ್ಟು ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ವಿರುಪಾಪುರಗಡ್ಡೆ, ನವವೃಂದಾವನ ಗಡ್ಡೆ ಗಂಗಾಪತಿ ಕಂಪ್ಲಿ ಸೇತುವೆ, ಆನೆಗೊಂದಿ ಬಳಿಯ ಶ್ರೀಕೃಷ್ಣ ದೇವರಾಯ ಸಮಾಧಿ ಮಂಟಪ ಮುಳುಗಡೆಯಾಗಿದೆ.


karnataka-weather-report-today-10th-august-2022-mrq
ಬೆಂಗಳೂರಿನ ಸಾಯಿ ಲೇಔಟ್


ಬೆಳಗಾವಿಯಲ್ಲಿಯೂ ವರುಣನ ಅಬ್ಬರ


ಬೆಳಗಾವಿ ಹಾಗೂ ಖಾನಾಪುರ (Belagavi And Khanapura) ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವರುಣನ (Rainfall) ಅಬ್ಬರ ಮುಂದುವರಿದಿದೆ. ಅನೇಕ ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅದೃಷ್ಠವಶಾತ್ ಕುಟುಂಬವೊಂದು ಅಪಾಯದಿಂದ ಪಾರಾಗಿದೆ.  ಬೆಳಗಾವಿಯಲ್ಲಿ ಮಳೆಯಿಂದ (Belagavi Rains) ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯ ಅಬ್ಬರಿಸುತ್ತಿದ್ದು, ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.


ರಾಷ್ಟ್ರೀ ಯ ಹೆದ್ದಾರಿ ಬದಿಯ ಬೆಟ್ಟದಲ್ಲಿ ಬಿರುಕು


ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರ ಬದಿಯಲ್ಲಿ ಇರುವ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಮದೆನಾಡಿನಿಂದ ಸಂಪಾಜೆವರೆಗೆ ಎಲ್ಲಾ ವಾಹನಗಳಿಗೆ ರಾತ್ರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6.30 ರವರೆಗೆ ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ.


ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಬೆಟ್ಟದ ಸ್ಥಳದಲ್ಲೇ ಮತ್ತೆ ಭಾರೀ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೆಟ್ಟ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ.


ಚಿಕ್ಕಮಗಳೂರಿನಲ್ಲಿ ವರುಣ ಅಬ್ಬರಕ್ಕೆ ಜನರು ತತ್ತರ


ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಶ್ಲೇಷಮಳೆ ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದಾರೆ.


karnataka-weather-report-today-10th-august-2022-mrq
ಚಿಕ್ಕಮಗಳೂರು


ಇದನ್ನೂ ಓದಿ:  Uttara Kannada: ಉತ್ತರ ಕನ್ನಡದ ಹುಡುಗಿ ಕಾಮನ್​ವೆಲ್ತ್​ನಲ್ಲಿ! ಇವರೇ ನೋಡಿ ಕರುನಾಡ ಸಾಧಕಿ


ಸೋಮವಾರ ರಾತ್ರಿ ಸುರಿದ ಮಳೆಗೆ ಅನೇಕ ಅವಘಡಗಳು ಸಂಭವಿಸಿದ್ದು, ಮಂಗಳವಾರ ಬೆಳಗ್ಗೆ ಮಧ್ಯಾಹ್ನದ ವರೆಗೂ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಸಂಜೆ ವೇಳೆಗೆ ಬಿರುಸು ಪಡೆದುಕೊಂಡಿದೆ. ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಣ್ಣಾಮುಚ್ಚಾಲೇ ಆಡುತ್ತಿದೆ.

top videos
    First published: