Karnataka Weather Report: ಇಂದು ಎಲ್ಲೆಲ್ಲಿ ಮಳೆ ಸುರಿಯಲಿದೆ? ಹೇಗಿರಲಿದೆ ನಿಮ್ಮೂರ ಹವಾಮಾನ?

ಲೇಔಟ್ ಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಒಟ್ಟು 35 ವಿಲ್ಲಾಗಳಿರುವ ಕಂಟ್ರಿ ಸೈಡ್ ಲೇಔಟ್​ನಲ್ಲಿ ಓರ್ವ ನಿವಾಸಿ ಹೊರತುಪಡಿಸಿ ಮಿಕ್ಕೆಲ್ಲರೂ ಬೇರೆಡೆ ಶಿಫ್ಟ್ ಆಗಿದ್ದಾರೆ. 

ಬೆಂಗಳೂರು ಪ್ರವಾಹ

ಬೆಂಗಳೂರು ಪ್ರವಾಹ

  • Share this:
    ಕರ್ನಾಟಕದಲ್ಲಿ ಮಳೆ ಸದ್ಯ (Karnataka Rains) ನಿಲ್ಲುವ ಸೂಚನೆ ನೀಡುತ್ತಿಲ್ಲ. ಇಂದೂ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಇಂದೂ ಸಹ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.  ಬೆಂಗಳೂರಿನಲ್ಲಿ (Bengaluru Rains) ಇಂದೂ ಮಳೆಯಾಗಲಿದೆ. ಉತ್ತರ ಒಳನಾಡಿಗೆ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿಗೆ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ (Coastal Karnataka) ಮತ್ತು ದಕ್ಷಿಣ ಒಳನಾಡಿನ ಎಲ್ಲ ಭಾಗದಲ್ಲೂ ಮುಂದಿನ 3 ದಿನ  ಅಂದರೆ ಸೆಪ್ಟೆಂಬರ್ 11 ರವರೆಗೆ  ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ (Karnataka Weather Report)  ಮುನ್ಸೂಚನೆ ನೀಡಿದೆ.

    ಮಲೆನಾಡು ಭಾಗದಲ್ಲಿ, ಕೊಡಗು (Kodagu Rain), ಹಾಸನ, ಚಿಕ್ಕಮಗಳೂರು (Chikmagalur Rain) ಮತ್ತು ಶಿವಮೊಗ್ಗ (Shivamogga Rain), ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ (Udupi Rain) ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆ ಸುರಿಯುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿದೆ. ಬೆಂಗಳೂರಿನಲ್ಲಿಯೂ ಮಳೆ ಸುರಿಯುವ ಸಾಧ್ಯತೆಯಿದೆ.

    ಇಡೀ ಲೇಔಟ್ ಖಾಲಿ! ನಿವಾಸಿಗಳೆಲ್ಲ ಹೊಟೇಲ್​ನಲ್ಲಿ!
    ಬೆಂಗಳೂರಿನಲ್ಲಿ ಮಳೆ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆಗಳು ಮುಂದುವರೆದಿವೆ. ಮಳೆ ಅಬ್ಬರಕ್ಕೆ ಸರ್ಜಾಪುರ ಮುಖ್ಯರಸ್ತೆಯಲ್ಲೆ ಇರುವ ದಿ ಕಂಟ್ರಿ ಸೈಡ್ ಲೇಔಟ್ ಖಾಲಿಯಾಗಿದೆ. ಲೇಔಟ್ ಗೆ ನೀರು ನುಗ್ಗಿದ್ದರಿಂದ  ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಒಟ್ಟು 35 ವಿಲ್ಲಾಗಳಿರುವ ಕಂಟ್ರಿ ಸೈಡ್ ಲೇಔಟ್​ನಲ್ಲಿ ಓರ್ವ ನಿವಾಸಿ ಹೊರತುಪಡಿಸಿ ಮಿಕ್ಕೆಲ್ಲರೂ ಬೇರೆಡೆ ಶಿಫ್ಟ್ ಆಗಿದ್ದಾರೆ. ಸದ್ಯ ಲೇಔಟ್​ನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ನೀರು ಖಾಲಿಯಾದರೂ ನಿವಾಸಿಗಳು ಇನ್ನೂ ಮನೆಗಳ ಕಡೆ ಸುಳಿದಿಲ್ಲ.

    ಇದನ್ನೂ ಓದಿ: Bengaluru Rains: ಮೂರು ದಶಕಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ನದಿ; ಜನರು ಮರೆತೇ ಬಿಟ್ಟಿದ್ರು!

    ಬೆಸ್ಕಾಂ ಸಿಬ್ಬಂದಿಯಿಂದ ಪರಿಶೀಲನೆ
    ಮನೆ ಮುಂಭಾಗದಲ್ಲಿ ನಿಲ್ಲಿಸಿದ ಕಾರು, ಬೈಕ್ ಸಂಪೂರ್ಣ ಹಾನಿಯಾಗಿದೆ ಇಂದು ಬೆಳಗ್ಗೆ ಲೇಔಟ್ ಅಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ಬಗ್ಗೆ ಬೆಸ್ಕಾಂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಲೇಔಟ್​ನ ನಿವಾಸಿಗಳು ಹೊಟೇಲ್, ಸಂಬಂಧಿಗಳ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

    ಕರ್ನಾಟಕದ ಜಿಲ್ಲೆಗಳ ಇಂದಿನ ಹವಾಮಾನ ವರದಿ ಇಲ್ಲಿದೆ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

    ಬೆಂಗಳೂರು: 27-20, ಮಂಗಳೂರು: 27-25, ಶಿವಮೊಗ್ಗ: 27-22, ಬೆಳಗಾವಿ: 27-21, ಮೈಸೂರು: 28-21, ಮಂಡ್ಯ: 28-21, ಕೊಡಗು: 23-19, ರಾಮನಗರ: 28-21, ಹಾಸನ: 24-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 27-20, ಕೋಲಾರ: 28-21, ತುಮಕೂರು: 27-21, ಉಡುಪಿ: 27-25, ಕಾರವಾರ: 28-26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಇದನ್ನೂ ಓದಿ: Bengaluru Rains: ಬೆಂಗಳೂರು ಜನರ ನೆರವಿಗೆ ಧಾವಿಸಿದ ಹೈಕೋರ್ಟ್

    ಚಿಕ್ಕಮಗಳೂರು: 24-19, ದಾವಣಗೆರೆ: 28-22, ಚಿತ್ರದುರ್ಗ: 27-21, ಹಾವೇರಿ: 27-22, ಬಳ್ಳಾರಿ: 29-23, ಗದಗ: 28-22, ಕೊಪ್ಪಳ: 29-23, ರಾಯಚೂರು: 29-23, ಯಾದಗಿರಿ: 29-23, ವಿಜಯಪುರ: 28-22, ಬೀದರ್: 27-21, ಕಲಬುರಗಿ: 28-23, ಬಾಗಲಕೋಟೆ: 29-23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನ ಜನಕ್ಕೆ ನದಿ ನೀಡಿದ ಆಶ್ಚರ್ಯ!
    ಬೆಂಗಳೂರು ಜನರು ಮರೆತು ಹೋಗಿದ್ದ ನದಿಯೊಂದು ಮೂರು ದಶಕಗಳ ಬಳಿಕ ಹರಿಯಲಾರಂಭಿಸಿದೆ. ನದಿ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ. ಇಲ್ಲೊಂದು ನದಿ ಇತ್ತಾ ಎಂದು ಬೆಂಗಳೂರಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

    ಮೂರು ದಶಕಗಳಿಂದ ಬತ್ತಿ ಹೋಗಿದ್ದ ದಕ್ಷಿಣ ಪಿನಾಕಿನಿ ನದಿ (Dakshina Pinakini River) ಹರಿಯಲು ಆರಂಭಿಸಿದೆ. ನಿರಂತರ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ. ಚನ್ನಸಂದ್ರ ಮುಖ್ಯರಸ್ತೆಯ ಬಳಿಯ ಟೆಕ್ ಕಾರಿಡಾರ್ ಜಲಾವೃತವಾಗಿದೆ. ರಸ್ತೆಯ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ಹರಿದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
    Published by:guruganesh bhat
    First published: