Karnataka Weather Report August 14 2022: ರಾಜ್ಯದಲ್ಲಿ ಮಳೆಯ (Rainfall) ಪ್ರಮಾಣ ಕೊಂಚ ಇಳಿಕೆಯಾಗಿದ್ದು, ಅಲ್ಲಲ್ಲಿ ಮಳೆ ಬೀಳಲಿದೆ. ಕೊಡಗು, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ. ಇನ್ನುಳಿದಂತೆ ಉತ್ತರ ಕರ್ನಾಟಕದಲ್ಲಿ (North Karnataka) ಮಳೆ ತಗ್ಗಿದ್ದು, ಮೋಡ ಕವಿದ ವಾತಾವರಣದ (Cloudy Weather) ಜೊತೆ ಜೋರು ಗಾಳಿ ಬೀಸುತ್ತಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷ್ಣೆ ಮತ್ತು ಭೀಮೆಯ (Krishna And Bhima River) ಅಬ್ಬರ ಹೆಚ್ಚಾಗುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆ ಜಲಾಶಯಗಳಿಂದ (Dams) ಹೆಚ್ಚು ನೀರು ಬಿಡಲಾಗುತ್ತಿದ್ದು, ಹಲವೆಡೆ ಮುಳುಗಡೆ ಭೀತಿ ಎದುರಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಬರದಿ ಪ್ರಕಾರ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರೂ ಸಹ ಕೆಲ ಪ್ರದೇಶಗಳಲ್ಲಿ ಎಂದಿನಂತೆ ಮಳೆ ಸುರಿಯಲಿದ್ದು, ಪ್ರವಾಹ, ನೆರೆ ಭೀತಿ ಎದುರಾಗಲಿದೆ. ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು ಸಹ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಭಾಗಗಳಲ್ಲಿ ಇಂದು ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹಾಗೆಯೇ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಜಿಲ್ಲೆಗಳಲ್ಲಿ ಸಹ ಇಂದು ಮಳೆ ಮುಂದುವರೆಯಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ಸಮಯಕ್ಕೆ ಮಳೆಯಾಗುವ ನಿರೀಕ್ಷೆ ಇದೆ.
ರಾಜ್ಯದ ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ , ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು: 27-19, ಶಿವಮೊಗ್ಗ: 27-21, ಬೆಳಗಾವಿ: 24-20,ಮಂಡ್ಯ: 29-20
ಕೊಡಗು: 23-17, ರಾಮನಗರ: 29-20, ಹಾಸನ: 26-18, ಮಂಗಳೂರು: 29-24, ಮೈಸೂರು: 28-19, ಚಾಮರಾಜನಗರ: 29-20, ದಾವಣಗೆರೆ: 27-21, ಬಳ್ಳಾರಿ: 30-23
ಗದಗ: 27-21, ಬೀದರ್: 26-21, ಕಲಬುರಗಿ: 29-22, ಚಿಕ್ಕಬಳ್ಳಾಪುರ: 28-19, ಉಡುಪಿ: 29-24,
ಚಿಕ್ಕಮಗಳೂರು: 24-18, ಚಿತ್ರದುರ್ಗ: 27-20, ಹಾವೇರಿ: 27-21, ಕೊಪ್ಪಳ: 28-22, ಕೋಲಾರ: 39-21, ತುಮಕೂರು: 28-19, ರಾಯಚೂರು: 31-23, ಯಾದಗಿರಿ: 27-22
ವಿಜಯಪುರ: 28-21, ಬಾಗಲಕೋಟೆ: 29-22
ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಹಾರಾಡೋ ಧ್ವಜ ತಯಾರಾಗೋದು ನಮ್ಮ ಕರ್ನಾಟಕದಲ್ಲಿ! ವಿಶೇಷ ಏನು ನೋಡಿ
ದೇಶದ ವಿವಿಧ ಭಾಗಗಳಲ್ಲಿ ಸಹ ಭಾರಿ ಮಳೆಯ ನಿರೀಕ್ಷೆ
ಮುಂದಿನ 24 ಗಂಟೆಗಳಲ್ಲಿ, ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಆಗ್ನೇಯ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಉಳಿದ ಭಾಗ, ಜಾರ್ಖಂಡ್, ಬಿಹಾರ, ಗುಜರಾತ್, ಕೊಂಕಣ ಮತ್ತು ಗೋವಾ, ಕರಾವಳಿ ಕರ್ನಾಟಕ, ಮರಾಠವಾಡ, ತೆಲಂಗಾಣದ ಕೆಲವು ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಭಾರಿ ಮಳೆಯ ನಿರೀಕ್ಷೆ ಇದೆ.
ಈಶಾನ್ಯ ಅರೇಬಿಯನ್ ಸಮುದ್ರದ ಮೇಲಿನ ಡಿಪ್ರೆಶನ್ ಪಶ್ಚಿಮ ದಿಕ್ಕಿನಲ್ಲಿ ಚಲಿಸಿದೆ ಮತ್ತು ಈಗ ಅದು ವಾಯುವ್ಯ ಮತ್ತು ಪಕ್ಕದ ಈಶಾನ್ಯ ಅರೇಬಿಯನ್ ಸಮುದ್ರದ ಮೇಲಿದೆ. ಇದು ದೂರ ಪಶ್ಚಿಮಕ್ಕೆ ಚಲಿಸುತ್ತಲೇ ಇರುತ್ತದೆ. ಹಾಗಾಗಿ ತೆಲಂಗಾಣದ ಉಳಿದ ಭಾಗಗಳು, ಆಂತರಿಕ ಕರ್ನಾಟಕದ ಉಳಿದ ಭಾಗಗಳಲ್ಲಿ ಈಶಾನ್ಯ ಭಾರತ ಮತ್ತು ಲಡಾಖ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಆಗಸ್ಟ್ 18ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ
ಮತ್ತೊಂದು ಪರಿಚಲನೆಯು ಈಶಾನ್ಯ ಬಂಗಾಳ ಕೊಲ್ಲಿಯಲ್ಲಿದೆ. ಇದರ ಪ್ರಭಾವದ ಅಡಿಯಲ್ಲಿ ಆಗಸ್ಟ್ 14 ರ ಸಂಜೆಯ ವೇಳೆಗೆ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ನಿರೀಕ್ಷೆಯಿದೆ. ಇದು ಆಗಸ್ಟ್ 15 ರ ವೇಳೆಗೆ ಭಾರಿ ಮಳೆಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ