Karnataka Weather Report: ಹೆಚ್ಚಾಗಲಿದೆ ಮಳೆಯ ಆರ್ಭಟ, ಕರಾವಳಿ ಭಾಗಗಳಲ್ಲಿ ಎಲ್ಲೋ ಅಲರ್ಟ್​ ಘೋಷಣೆ

Karnataka Weather Repot Today: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.34220 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಕಾರಣ ಸಮಸ್ಯೆ ತಲೆದೋರಿದೆ.  ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕೊಳ್ಳೂರು ಸೇತುವೆ ಕೆಳಭಾಗದಲ್ಲಿ ಅಂಟಿಕೊಂಡು  ನೀರು  ಹರಿಯುತ್ತಿದ್ದು, ಇದೀಗ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿದ್ದ ಮಳೆ ಪ್ರಮಾಣ (Rainfall) ಸ್ವಲ್ಪ ಕಡಿಮೆಯಾಗಿದ್ದು, ನದಿಗಳು (Rivers) ಶಾಂತವಾಗಿವೆ. ಮಲೆನಾಡು (Malnadu) ಮತ್ತು ಕರಾವಳಿ ಭಾಗದಲ್ಲಿ (Coastal Area) ಜನರು ಪರದಾಡುವ ಪರಿಸ್ಥಿತಿ ಇದೀಗ ಕಡಿಮೆಯಾಗಿದ್ದು, ಆದರೂ ಹಲವು ಭಾಗಗಳಲ್ಲಿ ಮಳೆ ಆರ್ಭಟಿಸುತ್ತಿದೆ.  ಆದರೆ ಇದೀಗ ಸೂರ್ಯ (Sun) ದರ್ಶನ ನೀಡುತ್ತಿದ್ದು, ರೈತಾಪಿ (Farmers) ವರ್ಗದಲ್ಲಿ ಸಂತಸ ಮನೆ ಮಾಡಿದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಇಂದಿನಿಂದ ಕೆಲ ದಿನಗಳ ಕಾಲ ಪ್ರವಾಹ ಹಾಗೂ ನೆರೆ ಭೀತಿ ಎದುರಾಗಲಿದೆ. ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದ್ದು,  ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ 

ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಇಂದು ಹೆಚ್ಚಿನ ಮಳೆ ನಿರೀಕ್ಷೆ ಇದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್)

ಬೆಂಗಳೂರು: 28-19, ಬೆಳಗಾವಿ: 24-20, ಮೈಸೂರು: 28-19, ಹಾಸನ: 26-18,
ಚಾಮರಾಜನಗರ: 29-20, ತುಮಕೂರು: 28-19, ಉಡುಪಿ: 28-24, ಮಂಗಳೂರು: 28-24,
ಶಿವಮೊಗ್ಗ: 27-21, ಹಾವೇರಿ: 27-21, ಬಳ್ಳಾರಿ: 31-23, ಕಲಬುರಗಿ: 31-22, ರಾಯಚೂರು: 32-23, ಯಾದಗಿರಿ: 30-23, ಬಾಗಲಕೋಟೆ: 30-22, ದಾವಣಗೆರೆ: 28-21
ಚಿತ್ರದುರ್ಗ: 27-20.

ಮಂಡ್ಯ: 29-20, ಕೊಡಗು: 23-17, ಗದಗ: 28-21, ಕೊಪ್ಪಳ: 29-22, ವಿಜಯಪುರ: 29-22
ಬೀದರ್: 28-21,  ರಾಮನಗರ: 29-20, ಚಿಕ್ಕಬಳ್ಳಾಪುರ: 28-19, ಕೋಲಾರ: 39-20, ಚಿಕ್ಕಮಗಳೂರು: 23-18.

ಇದನ್ನೂ ಓದಿ: ಡಿಕೆಶಿ ಹೋದಲ್ಲೆಲ್ಲಾ ಮುಂದಿನ ಸಿಎಂ ಘೋಷಣೆ!

ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಯ ಕೊರತೆಯಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಹುದಿನಗಳ ಬಳಿಕ ಸೂರ್ಯದೇವ ದರ್ಶನ ನೀಡಿದ್ದಾನೆ. ಮಳೆಯ ಪ್ರಮಾಣ ಕಡಿಮೆಯಾದರೂ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಇಂದು ಹಲವೆಡೆ ಮಳೆಯಾಗುವ ನಿರೀಕ್ಷೆ ಇದೆ.

ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಬೆಳಗಾವಿಯಲ್ಲಿ ಮಳೆ ಇಳಿಕೆಯಾಗಿದೆ. ಪಶ್ಚಿಮಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣೆ, ಭೀಮೆ ಸೇರಿದಂತೆ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.

ಮಲೆನಾಡು ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತ 

ಮಲೆನಾಡು ಭಾಗದಲ್ಲಿ ನಿರಂತರ ವರ್ಷಧಾರೆಯಾಗುತ್ತಿದ್ದು, ಹಲವಾರು ಮನೆಗಳು, ಮನೆ ಗೋಡೆಗಳು. ಶಿಥಿಲಗೊಂಡಿದ್ದು, ಇದೀಗ ಕೆಲ ಮನೆಗಳು ನೆಲೆಸಮವಾಗಿದೆ. ಆಗುಂಬೆಯ ಬಿದರಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಜನರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: ವಿವಿ ಪುರದಲ್ಲಿ ವಿದೇಶಾಂಗ ಸಚಿವ! ಫುಡ್ ಸ್ಟ್ರೀಟ್​ನಲ್ಲಿ ನಾನಾ ತಿಂಡಿ ಸವಿದ ಎಸ್ ಜೈಶಂಕರ್

ಇನ್ನು ಮಳೆ ಹೆಚ್ಚಾದ ಕಾರಣ ಕೃಷ್ಣಾ ನದಿಯ ಅಬ್ಬರ ಸಹ ಹೆಚ್ಚಾಗಿದ್ದು,  ಕೊಳ್ಳೂರು ಎಂ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಎಂ ಸೇತುವೆಯನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆಯಾಗಿ ನಿರ್ಮಿಸಲಾಗಿದ್ದು, ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.34220 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಕಾರಣ ಸಮಸ್ಯೆ ತಲೆದೋರಿದೆ.  ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕೊಳ್ಳೂರು ಸೇತುವೆ ಕೆಳಭಾಗದಲ್ಲಿ ಅಂಟಿಕೊಂಡು  ನೀರು  ಹರಿಯುತ್ತಿದ್ದು, ಇದೀಗ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ.
Published by:Sandhya M
First published: