Karnataka Weather Report: ಕೊಂಚ ಇಳಿಕೆಯಾದ ವರುಣನ ಅಬ್ಬರ; ಎಲ್ಲಿ ನೋಡಿದ್ರೂ ಜಲರಾಶಿ

ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ. ಇನ್ನು ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ.  ಇಂದು ಮಳೆಯ ಪ್ರಮಾಣ ಕೊಂಚ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು ಪ್ರವಾಹ

ಬೆಂಗಳೂರು ಪ್ರವಾಹ

  • Share this:
Karnataka Weather: ರಾಜ್ಯದಲ್ಲಿಂದು ಸಹ ಮಳೆಯಾಗಲಿದೆ (Karnataka Rains) ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಕಳೆದೊಂದು ವಾರದಿಂದ ಸುರಿದ ಮಳೆಗೆ ಹಲವೆಡೆ ಅವಾಂತರಗಳಿಗೆ ಕಾರಣವಾಗಿದೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ ಭಾಗದಲ್ಲಿ ಮಳೆಯಾಗುವ (Rain Predicts) ನಿರೀಕ್ಷೆಗಳಿವೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ. ಇನ್ನು ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ.  ಇಂದು ಮಳೆಯ ಪ್ರಮಾಣ ಕೊಂಚ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ರೆ ಬೆಂಗಳೂರಿನ ಹವಾಮಾನ ಊಹೆಗೂ ಸಿಲುಕದಂತಾಗಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 27-19, ಮೈಸೂರು 26-21, ಚಾಮರಾಜನಗರ 27-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-20, ಕೋಲಾರ 28-21, ಹಾಸನ 25-19, ಚಿತ್ರದುರ್ಗ 28-21, ಚಿಕ್ಕಮಗಳೂರು 24-19, ದಾವಣಗೆರೆ 28-22, ಶಿವಮೊಗ್ಗ 27-21, ಕೊಡಗು 22-18, ತುಮಕೂರು 28-20, ಉಡುಪಿ 27-24

ಮಂಗಳೂರು 27-24, ಉತ್ತರ ಕನ್ನಡ 27-21, ಧಾರವಾಡ 27-21, ಹಾವೇರಿ 28-22, ಹುಬ್ಬಳ್ಳಿ 28-21, ಬೆಳಗಾವಿ 27-21, ಗದಗ 29-22, ಕೊಪ್ಪಳ 30-23, ವಿಜಯಪುರ 29-22, ಬಾಗಲಕೋಟ 30-22, ಕಲಬುರಗಿ 30-23, ಬೀದರ್ 28-22, ಯಾದಗಿರಿ 31-24, ರಾಯಚೂರ 31-23 ಮತ್ತು ಬಳ್ಳಾರಿ 31-23

Karnataka Weather Report 7th September 2022 mrq
ಜಲಾವೃತ


ಇದನ್ನೂ ಓದಿ:  Bengaluru Rains: ಬೆಂಗಳೂರನ್ನು ಅಪಹಾಸ್ಯ ಮಾಡಬೇಡಿ; ತೆಲಂಗಾಣ ಸಚಿವರ ಮನವಿ

ಕಾಫಿನಾಡಿನ ಇತಿಹಾಸದಲ್ಲೇ ಒಂದು ಗಂಟೆಯಲ್ಲಿ 200 ಮಿಮೀ ಮಳೆ

ಜಿಲ್ಲೆಯ ಇತಿಹಾಸದಲ್ಲೇ (in history) ದಾಖಲೆಯ ಮಳೆ (Rain) ಭಾನುವಾರ (ಸೆಪ್ಟೆಂಬರ್ 4) ರಾತ್ರಿ ಸುರಿದಿದೆ. ಕೇವಲ 1 ಗಂಟೆಯಲ್ಲಿ ಸಾರಗೋಡು ಗ್ರಾಮದಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು, ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬೆರಗಾದರು, ಸಾರಗೋಡಿ ಗ್ರಾಮದಲ್ಲಿ ಒಂದೇ ಗಂಟೆಯಲ್ಲಿ ಹಿಂದೆಂದೂ ಕಾಣದ  200 ಮಿಲಿಮೀಟರ್‌ಗೂ ಅಧಿಕ ವರ್ಷಧಾರೆಯಾಗಿದೆ, ಸಾರಗೋಡು, ಹುಯಿಗೆರೆ ಸುತ್ತಮುತ್ತ ಸಹಾ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ.

ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದ್ದು, ಕಾಂಪೌಂಡ್ ಗಳು ಕುಸಿತಗೊಂಡಿವೆ, ದಾಖಲೆ ಪ್ರಮಾಣದ ಮಳೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.

ಬೆಂಗಳೂರು ಮಳೆ

ಸರ್ಜಾಪುರ ರಸ್ತೆಯ  ದಿ ಕಂಟ್ರಿಸೈಡ್ ಲೇಔಟ್​​ಗೆ ರಾಜಕಾಲುವೆಯ ನೀರು ನುಗ್ಗಿದೆ. ಈ ಲೇಔಟ್​​ನಲ್ಲಿ ಸುಮಾರು 35 ಮನೆಗಳಿವೆ. ಮೊದಲ ಮಹಡಿಯಷ್ಟು ಮನೆಗಳು ಜಲಾವೃತಗೊಂಡಿದ್ರೆ, ಮನೆ ಮುಂಭಾಗ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ. ಹೆಚ್​​ಎಎಲ್​ ಬಳಿಯಲ್ಲಿ ಕಾಳಪ್ಪ ಲೇಔಟ್​ನಲ್ಲಿರುವ ಸುಮಾರು 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಲೇಔಟ್​​ನಲ್ಲಿರುವ ಎಲ್ಲಾ ರಸ್ತೆಗಳು ಜಲಾವೃತಗೊಂಡಿದ್ದು, ಜನರು ಜಲದಿಗ್ಬಂಧನದಲ್ಲಿದ್ದಾರೆ.  ಮನೆ ಮುಂಭಾಗ ನಿಲ್ಲಿಸಿದ ಕಾರ್, ಬೈಕ್​​ಗಳು ಜಲಾವೃತಗೊಂಡಿವೆ.

ಇದನ್ನೂ ಓದಿ:  Tejasvi Surya: ಬೆಂಗಳೂರು ಮಂದಿಗೆ ಮಳೆ ಟೆನ್ಶನ್​ ಆದ್ರೆ, ಈ ಸಂಸದರಿಗೆ ಬೆಣ್ಣೆ ಮಸಾಲೆ ದೋಸೆಯದ್ದೇ ಚಿಂತೆಯಂತೆ!

ಮನೆಯಿಂದ ಆಸ್ಪತ್ರೆಗೆ ಹೋಗಲಾಗದೇ ವ್ಯಕ್ತಿ ಸಾವು

ಮಳೆ ಬಂದಾಗಲೆಲ್ಲಾ ರೇನ್‌ಬೋ ಲೇಔಟ್‌ ಜನರ ಸ್ಥಿತಿ ಹೇಳತೀರದು. ಆಗಸ್ಟ್ 30ರಂದು ಬಂದ ಮಳೆಯ ಪರಿಣಾಮವಾಗಿ ಸರ್ಜಾಪುರ ರಸ್ತೆಯ ರೇನ್‌ಬೋ ಡ್ರೈವ್‌ನ ನಿವಾಸಿಯೊಬ್ಬರು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಸಾವನ್ನಪ್ಪಿದ್ದರು. ಇನ್ನೂ ಆಗಸ್ಟ್‌ 3 ರಂದು ಇಂತಹದ್ದೇ ಘಟನೆ ನಡೆದಿದ್ದು ಭಾರಿ ಮಳೆಯಿಂದಾಗಿ ಜನರು ತಮ್ಮ ಮನೆಯಿಂದ ಹೊರಬರಲು ಕಚೇರಿಗಳು ಮತ್ತು ಶಾಲೆಗಳನ್ನು ತಲುಪಲು ಟ್ರ್ಯಾಕ್ಟರ್‌ಗಳನ್ನು ಬಳಸಬೇಕಾಗಿತ್ತು.

ನಗರದಲ್ಲಿ ಈಗ ಎಲ್ಲೆಲ್ಲೂ ಪ್ರವಾಹ

ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಅಲ್ಲಿನ ನಿವಾಸಿಗಳು ಕಂಡುಕೇಳರಿಯದ ಮಳೆ ಸುರಿಯುತ್ತಿದೆ ಎನ್ನುತ್ತಿದ್ದಾರೆ. ಇತ್ತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಇತ್ತೀಚಿನ ಅಧ್ಯಯನವು ಬೆಂಗಳೂರಿನ ಮಳೆಯ ಸ್ವರೂಪವು ಬದಲಾಗುತ್ತಿದೆ ಮತ್ತು ಇದು ಹವಾಮಾನ ಬದಲಾವಣೆಯ ಸೂಚಕವಾಗಿದೆ ಎಂದು ತಿಳಿಸಿದೆ. ಐಎಂಡಿ ಮತ್ತು ಕೆಎಸ್‌ ಎನ ಡಿಎಂಸಿಯ ದತ್ತಾಂಶವು ಕಳೆದ ಕೆಲವು ದಶಕಗಳಲ್ಲಿ ವಾರ್ಷಿಕ ಮಳೆಯ ಪ್ರಮಾಣವು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ತೋರಿಸುತ್ತದೆ.
Published by:Mahmadrafik K
First published: