• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ

Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ.

  • Share this:

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸುಸ್ತಾಗಿರುವ ಕರಾವಳಿ ಜಿಲ್ಲೆಗಳಿಗೆ (Costal District) ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ (Heavy Rainfall) ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಾದ  ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಕನ್ನಡಕ್ಕೆ (Uttara Kannada) ರೆಡ್ ಅಲರ್ಟ್ (Red Alert) ಘೋಷಣೆ ಮಾಡಲಾಗಿದೆ. ರೆಡ್ ಅಲರ್ಟ್ ಎಂದರೆ 204 mm ಗಿಂತ ಅಧಿಕ ಮಳೆಯಾಗುವ ಮುನ್ಸೂಚನೆ  ಇದೆ ಎಂದರ್ಥ. ಇನ್ನೂ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೂಚನೆ ನೀಡಲಾಗಿದೆ. ಆರೆಂಜ್ ಅಲರ್ಟ್ ಅಂದರೆ 115.6 mm ಇಂದ 204.4 mm ಮಳೆಯಾಗುವ ಸಾಧ್ಯತೆಗಳು ಇರುತ್ತವೆ.


ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 26-19, ಮೈಸೂರು 25-20, ಚಾಮರಾಜನಗರ 26-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 26-19, ಚಿಕ್ಕಬಳ್ಳಾಪುರ 26-19, ಕೋಲಾರ 27-21, ಹಾಸನ 23-19, ಚಿಕ್ಕಮಗಳೂರು 22-19, ದಾವಣಗೆರೆ 25-19, ಶಿವಮೊಗ್ಗ 24-21, ಕೊಡಗು 21-17, ತುಮಕೂರು 26-20, ಉಡುಪಿ 27-24, ಮಂಗಳೂರು 27-24, ಉತ್ತರ ಕನ್ನಡ 24-21, ಧಾರವಾಡ 24-20


ಹಾವೇರಿ 25-21, ಹುಬ್ಬಳ್ಳಿ 25-21, ಬೆಳಗಾವಿ 23-20, ಗದಗ 26-21, ಕೊಪ್ಪಳ 27-22, ವಿಜಯಪುರ 27-22, ಬಾಗಲಕೋಟ 27-22, ಕಲಬುರಗಿ 28-22, ಬೀದರ್ 26-21, ಯಾದಗಿರಿ 29-23, ರಾಯಚೂರ 29-23 ಮತ್ತು ಬಳ್ಳಾರಿ 28-23


ಇದನ್ನೂ ಓದಿ:  Chamundi Hill: ಚಾಮುಂಡಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣವಿಲ್ಲ, ಜನರನ್ನು ಒಕ್ಕಲೆಬ್ಬಿಸೋದಿಲ್ಲ ಎಂದ ಸರ್ಕಾರ


ರಾಯಚೂರು ಮತ್ತು ಯಾದಗಿರಿಯಲ್ಲಿ ಗರಿಷ್ಠ ತಾಪಮಾನ


ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಮೂರು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ


ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಂದ ಪದವಿ ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರಜೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.


ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಹೊರನಾಡು, ಚಾರ್ಮಾಡಿಘಾಟಿ, ಕೊಪ್ಪ, ಶೃಂಗೇರಿ, ಬಾಳೆ ಹೊನ್ನೂರು, ನರಸಿಂಹರಾಜಪುರ ಸುತ್ತಮುತ್ತ ಮಳೆಯಾಗುತ್ತಿದ್ದು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು ತರೀಕೆರೆ ಭಾಗದಲ್ಲೂ ನಿರಂತರ ಸಾಧಾ ರಣ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿದ್ದು, ಹಳ್ಳ ಕೊಳ್ಳಗಳು ಅಬ್ಬರಿಸಿ ಹರಿಯುತ್ತಿವೆ.


ಯಾದಗಿರಿಯಲ್ಲಿ ಮಳೆಗಾಗಿ ಪ್ರಾರ್ಥನೆ


ಯಾದಗಿರಿ (Yadagiri) ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಯಾದಗಿರಿ ಜನರು ಮಳೆಗಾಗಿ ಈಗ ದೇವರ (God) ಮೊರೆ ಹೋಗಿದ್ದಾರೆ. ಸುರಪುರ, ಹುಣಸಗಿ ತಾಲೂಕುಗಳು  ಹೊರತು ಪಡಿಸಿ ಉಳಿದ ನಾಲ್ಕು  ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ.


ವಡಗೇರಾ, ಯಾದಗಿರಿ, ಗುರುಮಿಠಕಲ್, ಶಹಾಪುರ ತಾಲೂಕಿನಲ್ಲಿ ಮಳೆ‌ ಕೊರತೆಯಾಗಿದೆ.ಜೂನ್ 1 ರಿಂದ ಜೂಲೈ 6 ರವರಗೆ ವಾಡಿಕೆ ಮಳೆ 115 ಎಂಎಂ ಮಳೆ ಬರಬೇಕಿತ್ತು,ಆದರೆ,105 ಎಂಎಂ ಮಳೆ ಬಂದಿದೆ.


ಇದನ್ನೂ ಓದಿ:  Cat Death: ನಾಯಿ ದಾಳಿಗೆ ಪ್ರಾಣ ತೆತ್ತ ಬೆಕ್ಕು, 'ಅಮ್ಮು' ಕಳೆದುಕೊಂಡು ಊಟ-ತಿಂಡಿ ಬಿಟ್ಟು ಮನೆಯವರ ಕಣ್ಣೀರು!


ಮುಂಚಿತವಾಗಿಯೇ ಮಾನ್ಸೂನ ಪ್ರವೇಶ

top videos


    ಕರಾವಳಿಯಾದ್ಯಂತ ಈ ವಾರಾಂತ್ಯದವರೆಗೂ ಭಾರೀ ಮಳೆ ನಿರೀಕ್ಷಿಸಲಾಗಿದೆ. ಸಮುದ್ರ, ನದಿ, ಕೆರೆಗಳಿಗೆ ಇಳಿಯದಂತೆ ಆಯಾಯ ಜಿಲ್ಲಾಡಳಿತವು ಎಚ್ಚರಿಸಿದೆ ಸಾಮಾನ್ಯವಾಗಿ ಜೂನ್‌ನಲ್ಲಿ ಭಾರತದ ಸರಾಸರಿ ಮಳೆಯ ಪ್ರಮಾಣ 16.53 ಸೆಂ.ಮೀ. ಆಗಬೇಕಿತ್ತು. ಮಾನ್ಸೂನ್ ಮುಂಚಿತವಾಗಿ ಪ್ರವೇಶಿಸಿದರೂ ಈ ಭಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವುದು ರೈತರಲ್ಲಿ ಕೊಂಚ ಆತಂಕಕ್ಕೀಡು ಮಾಡಿದೆ.

    First published: