• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Report: ಮಳೆ ನಿಂತ್ರೂ ಅವಾಂತರ ನಿಲ್ತಿಲ್ಲ; ಇಂದು, ನಾಳೆ ಸಹ ಅಬ್ಬರಿಸಲಿದ್ದಾನೆ ವರುಣದೇವ

Karnataka Weather Report: ಮಳೆ ನಿಂತ್ರೂ ಅವಾಂತರ ನಿಲ್ತಿಲ್ಲ; ಇಂದು, ನಾಳೆ ಸಹ ಅಬ್ಬರಿಸಲಿದ್ದಾನೆ ವರುಣದೇವ

ಬೆಂಗಳೂರು ಮಳೆ

ಬೆಂಗಳೂರು ಮಳೆ

ನಿರಂತರ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಂಡರ್​ಪಾಸ್​ಗಳು ಜಲಾವೃತಗೊಳ್ಳುತ್ತಿರುವ ಹಿನ್ನೆಲೆ ವಾಹನ ಸವಾರರು ಸುತ್ತಿ ಬಳಸಿ ಮನೆ, ಕಚೇರಿ ತಲುಪುವಂತಾಗಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ.

ಮುಂದೆ ಓದಿ ...
  • Share this:

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ (Karnataka Rainfall) ಮುಂದುವರಿದಿದೆ. ರಾಜಧಾನಿ ಬೆಂಗಳೂರು (Bengaluru Weather) ಹವಾಮಾನ ಅಂದಾಜಿಸಲು ಸಾಧ್ಯವಾಗದಷ್ಟು ಕ್ಷಣಕ್ಕೊಮ್ಮೆ ಬದಲಾಗುತ್ತಿದೆ. ಇಂದು ಸಹ ಮೋಡ ಮುಸುಕಿದ ವಾತಾವರಣದ (Cloudy Weather) ಜೊತೆ ಬಿಸಿಲು ಸಹ ಇರಲಿದೆ. ಭಾನುವಾರ ರಾತ್ರಿ ಸುರಿದಿದ್ದ ಮಳೆಗೆ (Bengaluru Rains) ಬೆಂಗಳೂರು ನಗರ ತತ್ತರಿಸಿತ್ತು. ಆದ್ರೆ ಸೋಮವಾರ ಬೆಳಗ್ಗೆ ಬಿಸಿಲು ಜನರಿಗೆ ಚುರುಕು ಮುಟ್ಟಿಸುತ್ತಿತ್ತು. ಸಂಜೆ ಆಗುತ್ತಿದ್ದಂತೆ ವಾತಾವರಣ ಬದಲಾಗಿ ಗುಡುಗು-ಮಿಂಚು ಸಹಿತ ಮಳೆಯಾಗಲು (Rains) ಆರಂಭಿಸಿತು. ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.


ಬೆಂಗಳೂರಿನ ಬೆಳ್ಳಂದೂರು, ಮಾರತ್​ಹಳ್ಳಿ, ಏರ್​ಪೋರ್ಟ್​ ರೋಡ್, ಮಹದೇವಪುರ ವ್ಯಾಪ್ತಿಯ ರಸ್ತೆಗಳಲ್ಲಿ ಎರಡರಿಂದ ಮೂರು ಅಡಿಗಳಷ್ಟು ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡು ನಡೆಸುವಂತಾಯ್ತು. ಇತ್ತ ನಿರಂತರ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಂಡರ್​ಪಾಸ್​ಗಳು ಜಲಾವೃತಗೊಳ್ಳುತ್ತಿರುವ ಹಿನ್ನೆಲೆ ವಾಹನ ಸವಾರರು ಸುತ್ತಿ ಬಳಸಿ ಮನೆ, ಕಚೇರಿ ತಲುಪುವಂತಾಗಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)


ಬೆಂಗಳೂರು 28-20, ಮೈಸೂರು 27-21, ಚಾಮರಾಜನಗರ 28-21, ರಾಮನಗರ 29-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 28-20, ಕೋಲಾರ 29-21, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 26-19, ದಾವಣಗೆರೆ 29-21, ಶಿವಮೊಗ್ಗ 28-22, ಕೊಡಗು 23-18, ತುಮಕೂರು 28-21, ಉಡುಪಿ 28-24, ಮಂಗಳೂರು 28-24


ಉತ್ತರ ಕನ್ನಡ 28-21, ಧಾರವಾಡ 28-21, ಹಾವೇರಿ 29-21, ಹುಬ್ಬಳ್ಳಿ 28-21, ಬೆಳಗಾವಿ 28-21, ಗದಗ 29-22, ಕೊಪ್ಪಳ 29-23, ವಿಜಯಪುರ 29-23, ಬಾಗಲಕೋಟ 30-23, ಕಲಬುರಗಿ 30-23, ಬೀದರ್ 28-22, ಯಾದಗಿರಿ 32-24, ರಾಯಚೂರ 32-23 ಮತ್ತು ಬಳ್ಳಾರಿ 31-23


ಇದನ್ನೂ ಓದಿ:  IT Companies: ಐಟಿ ಉದ್ಯೋಗಿಗಳು ಕೇವಲ ಟ್ರಾಫಿಕ್‌ನಲ್ಲಿ ಸಿಲುಕಿದ್ದಕ್ಕೆ ಕಂಪನಿಗಾದ ನಷ್ಟ ಅಷ್ಟಿಷ್ಟಲ್ಲ; ಬರೋಬ್ಬರಿ 225 ಕೋಟಿ ರೂ


ಎಲ್ಲೆಲ್ಲಿ ಮಳೆ ಸಾಧ್ಯತೆ?


ಬೆಂಗಳೂರು ನಗರ, ಬೆಂಗಳೂರು ಗ್ರಾ. ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರಮ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.


ಕೊಡಗು ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಆರೆಂಜ್ ಅಲರ್ಟ್, ಬೆಂಗಳೂರು ನಗರಕ್ಕೆ ಬುಧವಾರದವರೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.


ತೋಟದ ಮನೆಗಳು ಜಲಾವೃತ


ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದಲ್ಲಿ ತೋಟದ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಒತ್ತುವರಿಯಾಗಿರೋದರಿಂದ ನೀರನ್ನು ತಡೆಯಲು ಮರಳಿನ ಚೀಲಗಳನ್ನು ಇರಿಸಲಾಗಿತ್ತು.ಆದ್ರೆ ಮಳೆ ಹೆಚ್ಚಾದ ಹಿನ್ನೆಲೆ ಚಂದ್ರಶೇಖರ್ ಎಂಬವರಿಗೆ ಸೇರಿದ ಮನೆ ಜಲಾವೃತಗೊಂಡಿದೆ


ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ತುರ್ತು ಸಭೆ


ಬೆಂಗಳೂರಿನಲ್ಲಿ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಬೆಂಗಳೂರು ಸಚಿವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ಮಾಡ್ತಿದ್ದಾರೆ. ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಬೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ.


ವಾಹನಗಳನ್ನು ಬಿಟ್ಟು ನಡೆದುಕೊಂಡೇ ಹೋದ ಅಧಿಕಾರಿಗಳು


ಗೃಹ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಿಂದಾಗಿ ಟ್ರಾಫಿಕ್ ಹೆಚ್ಚಿದೆ. ಹಾಗಾಗಿ ಸಿಎಂ ಸಭೆಗೆ ಬರುವ ಅಧಿಕಾರಿಗಳಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಪರಿಣಾಮ ಅಧಿಕಾರಿಗಳು ವಾಹನಗಳನ್ನು ಬಿಟ್ಟು ನಡೆದುಕೊಂಡೇ ತೆರಳಿದರು.


ಕಳಪೆ ಮೂಲ ಸೌಕರ್ಯವು ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ


ORRCA ಅಧ್ಯಕ್ಷ ಮಾನಸ್ ದಾಸ್ ಮತ್ತು ಉಪಾಧ್ಯಕ್ಷೆ ಅರ್ಚನಾ ತಯಾಡೆ ಹೇಳುವಂತೆ ORR IT ವಾರ್ಷಿಕವಾಗಿ USD 22 ಶತಕೋಟಿ ಆದಾಯವನ್ನು ಗಳಿಸುತ್ತದೆ, ಇದು ಬೆಂಗಳೂರಿನ ಆದಾಯದ 32% ಆಗಿದೆ ಮತ್ತು ಇದು ಅತಿ ಹೆಚ್ಚಿನ ತೆರಿಗೆ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Heavy Rain: ಕಾಫಿನಾಡಿನ ಇತಿಹಾಸದಲ್ಲೇ ಒಂದು ಗಂಟೆಯಲ್ಲಿ 200 ಮಿಮೀ ಮಳೆ! ಚಿಕ್ಕಮಗಳೂರಿನ ಜನ ತತ್ತರ


ಔಟರ್ ರಿಂಗ್ ರೋಡ್‌ನಲ್ಲಿ ಮೂಲಸೌಕರ್ಯದ ಕೊರತೆಯು ಬಿಕ್ಕಟ್ಟಿನ ಮಟ್ಟವನ್ನು ತಲುಪಿದೆ. ಇಲ್ಲಿನ ಜನಸಂಖ್ಯೆಯ ಕೇವಲ 30% ದಷ್ಟು ಜನ ಕಚೇರಿಗೆ ಮರಳಿದ್ದರೂ ಮೂಲಸೌಕರ್ಯಗಳ ಕುಸಿತವು ಬೆಂಗಳೂರು ನಗರದ ಮತ್ತಷ್ಟು ಬೆಳವಣಿಗೆಯನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಜಾಗತಿಕ ಕಳವಳವನ್ನು ಉಂಟುಮಾಡಿದೆ ಎಂದು ಅಸೋಸಿಯೇಷನ್ ತಿಳಿಸಿದೆ.

First published: