• Home
  • »
  • News
  • »
  • state
  • »
  • Karnataka Weather Report: ರಾಜ್ಯದಲ್ಲಿ ಇಂದು & ನಾಳೆ ಮಳೆ; ಇಂದಿನ ಹವಾಮಾನ ವರದಿ ಇಲ್ಲಿದೆ

Karnataka Weather Report: ರಾಜ್ಯದಲ್ಲಿ ಇಂದು & ನಾಳೆ ಮಳೆ; ಇಂದಿನ ಹವಾಮಾನ ವರದಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಮುಂದೆ ಓದಿ ...
  • Share this:

Karnataka Rains: ಬಂಗಾಳಕೊಲ್ಲಿಯ (Bay of Bengal) ಮೇಲ್ಮ್ಮೈಯಲ್ಲಿ ಉಂಟಾಗಿರುವ ಸುಳಿಗಾಳಿ ಹಿನ್ನೆಲೆ ಇಂದು ಮತ್ತು ನಾಳೆ ಮಳೆಯಾಗುವ (Rain Prediction) ಸಾಧ್ಯತೆಗಳಿವೆ. ಆಂಧ್ರ ಪ್ರದೇಶ (Andhra Pradesh), ತಮಿಳುನಾಡು (Tamilnadu) ಕರಾವಳಿಯಲ್ಲಿ ಕೊಂಚ ಅಧಿಕವಾಗಿ ಮಳೆಯಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru Weather) ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಹಗುರವಾದ ಮಳೆ ಬೀಳಲಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಉತ್ತರ ಒಳನಾಡು ಭಾಗದಲ್ಲಿಯೂ ಮಳೆ ಬೀಳಲಿದೆ.


ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.


ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾ ಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ. ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು: 27-19, ಮಂಗಳೂರು: 28-24, ಬೆಂಗಳೂರು ಗ್ರಾಮಾಂತರ: 27-19, ಚಿಕ್ಕಬಳ್ಳಾಪುರ: 24-18, ಕೋಲಾರ: 27-20, ಮೈಸೂರು: 28-19, ದಾವಣಗೆರೆ: 29-21, ಕಾರವಾರ: 29-24, ಚಿತ್ರದುರ್ಗ: 28-20, ಹಾವೇರಿ: 29-21, ಚಾಮರಾಜನಗರ: 29-20, ಶಿವಮೊಗ್ಗ: 28-21, ಬೆಳಗಾವಿ: 27-20, ಚಿಕ್ಕಮಗಳೂರು: 26-18, ಬಳ್ಳಾರಿ: 28-22, ಗದಗ: 29-21, ತುಮಕೂರು: 27-19, ಉಡುಪಿ: 28-24, ರಾಯಚೂರು: 28-23


ಕೊಪ್ಪಳ: 29-22, ವಿಜಯಪುರ: 29-22, ಬೀದರ್: 25-21, ಮಡಿಕೇರಿ: 23-16, ರಾಮನಗರ: 28-19, ಹಾಸನ: 27-18, ಕಲಬುರಗಿ: 28-22, ಮಂಡ್ಯ: 30-20, ಯಾದಗಿರಿ: 28-23 ಮತ್ತು ಬಾಗಲಕೋಟೆ: 30-22


Karnataka Weather Report 6th October 2022 mrq
ಸಾಂದರ್ಭಿಕ ಚಿತ್ರ


ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಭಾರೀ ಮಳೆ ಸಾಧ್ಯತೆ


ಅಕ್ಟೋಬರ್ 8ರವರೆಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಅತಿ ಮಳೆ ಬೀಳುವ ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಇನ್ನು ಮುಂದಿನ ಮೂರು ದಿನ ಒಡಿಶಾ, ಆಂಧ್ರಪ್ರದೇಶದ ಕರಾವಳಿಯಲ್ಲಿ ವರುಣ ಅಬ್ಬರಿಸಲಿದ್ದಾನೆ. ಇದರ ಜೊತೆ ಛತ್ತೀಸ್​​ಗಢ ಮತ್ತು ಮಧ್ಯ ಪ್ರದೇಶದಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇವೆ.


ಇದನ್ನೂ ಓದಿ:  Bengaluru: ದುರ್ಗಾ ದೇವಿ ವಿಗ್ರಹ ವಿಸರ್ಜನೆಗೆ ತೆರಳಿದ್ದ ಇಬ್ಬರು ನೀರು ಪಾಲು


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುತ್ತಿರುವ ಹಿನ್ನೆಲೆ ಮುಂದಿನ ಕೆಲವು ಗಂಟೆಗಳ ಕಾಲ ಮಳೆಯಾಗಲಿದೆ. ನಂತರ ಮೋಡಗಳು ಪಶ್ಚಿಮ ಮತ್ತು ವಾಯುವ್ಯ ಮಾರ್ಗವಾಹಿ ಚಲಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.


ಶೇ.20ರಷ್ಟು ಅಧಿಕ ಮಳೆ


ಮುಂಗಾರು ರಾಜ್ಯದಲ್ಲಿ ಚುರುಕಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಕರ್ನಾಟಕದಲ್ಲಿ ಶೇ. 20ರಷ್ಟು ಅಧಿಕ ಮಳೆ ಸುರಿದಿದೆ. ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ.ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Karnataka Weather Report 6th October 2022 mrq
ಸಾಂದರ್ಭಿಕ ಚಿತ್ರ

ಇದನ್ನೂ ಓದಿ:  Rahul Gandhi: ಗಾಯಗೊಂಡ ಆನೆ ಕಂಡು ಮರುಗಿತು ರಾಹುಲ್ ಗಾಂಧಿ ಹೃದಯ; ಸಿಎಂ ಬೊಮ್ಮಾಯಿಗೆ 'ರಾಗಾ' ಪತ್ರ


ದಾವಣಗೆರೆಯಲ್ಲಿ ಮಳೆ ಜಮೀನಿಗೆ ನುಗ್ಗಿದ ನೀರು


ದಾವಣಗೆರೆ  ಜಿಲ್ಲೆಯಲ್ಲಿ ಭಾರೀ ಮಳೆ ಆಗಿದೆ. ಹಲವು ಕಡೆ ಕೆರೆ- ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು, ಜಮೀನಿಗೆ ನೀರು ನುಗ್ಗಿದೆ. ಹೆಬ್ಬಾಳು ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಹಿನ್ನೆಲೆ ಗ್ರಾಮಕ್ಕೆ ಹಾಗೂ ಕೆಲ ತೋಟಗಳಿಗೆ ನೀರು ನುಗ್ಗಿದೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ನೂರಾರು ಎಕರೆ ಮೆಕ್ಕೆಜೋಳ ಬೆಳೆ ನಾಶವಾಗಿದೆ.

Published by:Mahmadrafik K
First published: