ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ (Rain) ಮುಂದುವರಿಯಲಿದ್ದು, ಕರಾವಳಿ ಪ್ರದೇಶಗಳ (Coastal Area) ಜನರು ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಿರುಗಾಳಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (BengaluruWeather) ಇಂದು ಮತ್ತು ನಾಳೆ ಮೋಡ ಮುಸುಕಿದ ವಾತಾವರಣ (Cloudy Weather) ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶಿವಮೊಗ್ಗದ ಮೂರು ತಾಲೂಕು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮೂರು ತಾಲೂಕುಗಳ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರ, ಹೊಸನಗರ ಹಾಗು ತೀರ್ಥಹಳ್ಳಿಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ.
ದುರ್ಗಾ ಪರಮೇಶ್ವರಿ ಗರ್ಭಗುಡಿ ಪ್ರವೇಶಿಸಿದ ಕುಬ್ಜಾ ನದಿ
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ಕುಂದಾಪುರದ ಕಮಲಶಿಲೆಯ ದುರ್ಗಾ ಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯವರೆಗೂ ಕುಬ್ಜಾ ನದಿ ನೀರು ಹರಿದು ಬಂದಿದೆ. ಪ್ರತಿವರ್ಷ ಮಳೆಗಾಲದಲ್ಲಿ ದೇಗುಲದೊಳಗೆ ನದಿಯ ನೀರು ಪ್ರವೇಶಿಸುತ್ತದೆ. ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ದೇವಿಗೆ ಆರತಿ ಮಾಡುವ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಉಡುಪಿಯಲ್ಲಿಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿಯೂ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಇಂದಿನಿಂದ ಜುಲೈ 9ರವರೆಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: Ancient Building: ರಾಮನಗರದಲ್ಲಿ ಪತ್ತೆಯಾಗಿದೆ ಟಿಪ್ಪು ಕಾಲದ ನೆಲಮಾಳಿಗೆ
ದಕ್ಷಿಣ ಕನ್ನಡದಲ್ಲಿ ಶಾಲೆ ಕಾಲೇಜು ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಇಂದು ಸಹ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೂಡಬಿದ್ರೆಯಲ್ಲಿ ಮೈಟ್ ಕಾಲೇಜ್ ಕಾಂಪೌಂಡ್ ಕುಸಿದ ಪರಿಣಾಮ ಮೂರು ಕಾರುಗಳಿಗೆ ಹಾನಿಯುಂಟಾಗಿದೆ. ಕಾರಿನಲ್ಲಿ ಯಾರೂ ಇಲ್ಲದಿರೋದ್ರಿಂದ ಭಾರೀ ದುರಂತ ತಪ್ಪಿದೆ.
ಶಹಪುರದಲ್ಲಿ ಅಂಗಡಿಗಳಿಗೆ ನುಗ್ಗಿದ ನೀರು
ಯಾದಗಿರಿ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದು, ಶಹಾಪುರ ನಗರದಲ್ಲಿರುವ ಬಸವೇಶ್ವರ ವೃತ್ತದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿರುವ 6 ಅಂಗಡಿಗಳಿಗೆ ನುಗ್ಗಿದ್ದ ಮಳೆ ನೀರು ನುಗ್ಗಿದೆ. ಮಳೆ ನೀರು ಹರಿದುಕೊಂಡು ಹೋಗಲು ನಗರಸಭೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಶಹಾಪುರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 24-19, ಮೈಸೂರು 25-20, ಚಾಮರಾಜನಗರ 26-21, ರಾಮನಗರ 26-20, ಮಂಡ್ಯ 26-21, ಬೆಂಗಳೂರು ಗ್ರಾಮಾಂತರ 25-20, ಚಿಕ್ಕಬಳ್ಳಾಪುರ 24-19, ಕೋಲಾರ 25-20, ಹಾಸನ 23-19, ಚಿಕ್ಕಮಗಳೂರು 22-18, ದಾವಣಗೆರೆ 25-19, ಶಿವಮೊಗ್ಗ 24-19, ಕೊಡಗು 21-18
ಇದನ್ನೂ ಓದಿ: Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಭೀತಿ; ವರುಣನ ಆರ್ಭಟಕ್ಕೆ ತತ್ತರಿಸಿದ ಜನ
ತುಮಕೂರು 26-28, ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 24-21, ಧಾರವಾಡ 25-21, ಹಾವೇರಿ 28-21, ಹುಬ್ಬಳ್ಳಿ 26-22, ಬೆಳಗಾವಿ 24-21, ಗದಗ 26-21, ಕೊಪ್ಪಳ 27-22, ವಿಜಯಪುರ 27-22, ಬಾಗಲಕೋಟ 27-21, ಕಲಬುರಗಿ 28-23, ಬೀದರ್ 26-22, ಯಾದಗಿರಿ 28-23, ರಾಯಚೂರ 29-23 ಮತ್ತು ಬಳ್ಳಾರಿ 28-23
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ