ಇಂದು ವೀಕೆಂಡ್ ಅಂತ ಮನೆಯಿಂದ ಹೊರಗೆ ಹೋಗಲು ಪ್ಲಾನ್ (Weekend Plan) ಮಾಡಿಕೊಂಡಿದ್ದರೆ ಕ್ಯಾನ್ಸಲ್ ಮಾಡಿಕೊಳ್ಳಿ. ಕಾರಣನ ವರುಣನ ಅಬ್ಬರ. ಇಂದು ಸಹ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆರಾಯ (Rainfall) ಅಬ್ಬರಿಸಲಿದ್ದಾನೆ. ಇಂದು ಹಾಗೂ ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದೆ (Rain Alert) ಎಂದು ಹವಾಮಾನ ಇಲಾಖೆ ಹೇಳಿದೆ. ಇತ್ತ ಆಂಧ್ರ ಪ್ರದೇಶ (Andhra Pradesh), ಕೇರಳ (Kerala), ತಮಿಳುನಾಡು (Tamilnadu) ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲ ಪ್ರದೇಶಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಣೆ ಮಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು,ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗೆ ಮಳೆ ಮುಂದುವರಿದರೆ ಬೆಳೆಗಳು ಹಳದಿ ರೋಗಕ್ಕೆ ತುತ್ತಾಗಲಿದೆ ಎಂದು ರೈತಾಪಿ ವರ್ಗ (Farmers) ಆತಂಕದಲ್ಲಿದೆ.
ಮಲೆನಾಡು ಭಾಗಕ್ಕೆ ಪ್ರವಾಸಕ್ಕೆ ತೆರಳುವರು ತಮ್ಮ ಪ್ಲಾನ್ ಮಂದೂಡಿಕೆ ಮಾಡಿಕೊಳ್ಳೋದು ಉತ್ತಮ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 25 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆಯ ಜತೆ ಸುಳಿಗಾಳಿ ವೇಗ ಪಡೆದುಕೊಳ್ಳು ತ್ತಿರುವ ಕಾರಣ ನಗರಲ್ಲಿ ಚಳಿಯ ಪ್ರಮಾಣ ಏರಿಕೆ ಆಗ್ತಿದೆ.
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 25-20, ಮೈಸೂರು 25-21, ಚಾಮರಾಜನಗರ 26-21, ರಾಮನಗರ 25-21, ಮಂಡ್ಯ 26-21, ಬೆಂಗಳೂರು ಗ್ರಾಮಾಂತರ 25-2, ಚಿಕ್ಕಬಳ್ಳಾಪುರ 25-20, ಕೋಲಾರ 26-21, ಹಾಸನ 22-19, ಚಿತ್ರದುರ್ಗ 26-21, ಚಿಕ್ಕಮಗಳೂರು 22-18, ದಾವಣಗೆರೆ 26-22, ಶಿವಮೊಗ್ಗ 25-21, ಕೊಡಗು 20-17, ತುಮಕೂರು 25-21
ಇದನ್ನೂ ಓದಿ: Belagavi: ಮಗನ ಮೇಲೆ ಚಿರತೆ ದಾಳಿಯ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು
ಉಡುಪಿ 27-24, ಮಂಗಳೂರು 27-24, ಉತ್ತರ ಕನ್ನಡ 24-21, ಧಾರವಾಡ 24-21, ಹಾವೇರಿ 26-21, ಹುಬ್ಬಳ್ಳಿ 25-21, ಬೆಳಗಾವಿ 23-21, ಗದಗ 26-21, ಕೊಪ್ಪಳ 27-23, ವಿಜಯಪುರ 27-22, ಬಾಗಲಕೋಟ 28-23 . ಕಲಬುರಗಿ 28-22, ಬೀದರ್ 26-21, ಯಾದಗಿರಿ 29-23, ರಾಯಚೂರ 29-23 ಮತ್ತು ಬಳ್ಳಾರಿ 28-23
ಬಿರುಗಾಳಿ ಸಹಿತ ಮಳೆ
ಮೂಡಿಗೆರೆ ತಾಲ್ಲೂಕು ಬಣಕಲ್ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದ್ದು, ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿ ಸಿದ್ದು ಕೇರಳ ಮೂಲದ ಕಾರು ಎಂದು ಗುರುತಿಸಲಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿಕೊಂ ಡಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಕೃಷಿ ಕಾರ್ಯಕ್ಕೆ ಮಳೆ ಅಡ್ಡಿ
ಭತ್ತದ ನಾಟಿ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಅಡಿಕೆ, ಕಾಳುಮೆಣಸು ಮತ್ತು ಕಾಫಿಗೆ ಕೊಳೆ ರೋಗದ ಭೀತಿ ಎದುರಾಗಿದೆ. ಎಡಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೋಡ ಕವಿದ ವಾತವರಣದೊಂದಿಗೆ ಮಳೆಯಾಗುತ್ತಿದೆ.
ನದಿ ತೀರದ ಜನತೆಗೆ ಎಚ್ಚರಿಕೆ
ನಿರಂತರ ಮಳೆಯಿಂದಾಗಿ (Karnataka Rainfall) ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಜಲಾಶಯಗಳ (Dams) ಸಹ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ಹೊರ ಹರಿವು ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದ್ರಿಂದ ನದಿ ತೀರಕ್ಕೆ ತೆರಳದಂತೆ ಗ್ರಾಮಗಳಲ್ಲಿ ಡಂಗೂರ್ ಮೂಲಕ ಎಚ್ಚರಿಕೆ ನೀಡಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಸುರಿದ ಮಳೆಗೆ ಜಾಲಿಬೆಂಚಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹಬ್ಬಕ್ಕೆ ತಂದಿಟ್ಟಿದ ಸಾಮಾಗ್ರಿಗಳೆಲ್ಲಾ ನೀರುಪಾಲಾಗಿದೆ. ಮೈಸೂರಲ್ಲಿ ಮಳೆಗೆ ರೈತರು ಕಂಗಾಲಾಗಿದ್ದಾರೆ. ಹುಣಸೂರಿನ ಕೆಬ್ಬೆ ಕೊಪ್ಪಲು ಗ್ರಾಮದಲ್ಲಿ 2 ಮನೆಗಳು ಧರಾಶಾಹಿಯಾಗಿದೆ. ನದಿಯಂತೆ ನೀರು ಹರಿದು ಬಂದು ಮನೆಯೆಲ್ಲಾ ದ್ವೀಪದಂತಾಗಿದೆ. ಅಂಗಡಿಗಳಿಗೂ ನೀರು ನುಗ್ಗಿದೆ.
ಇದನ್ನೂ ಓದಿ: KSRTC: ಖಾಸಗೀಕರಣದ ಮೊದಲ ಹೆಜ್ಜೆ: ಚಾಲಕರನ್ನು ಪೂರೈಸಲು ಖಾಸಗಿ ಏಜೆನ್ಸಿಗಳನ್ನು ನೇಮಿಸಿಕೊಂಡ ಕೆಎಸ್ಆರ್‌ಟಿಸಿ
ನೂರಾರು ಎಕರೆ ಬೆಳೆ ಹಾನಿ
ಯಾದಗಿರಿಯಲ್ಲಿ ಭೀಮಾನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಭೀಮಾ ನದಿ ತೀರದಲ್ಲಿ ಆತಂಕ ಎದುರಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣಾವತಿ, ಚಿಕ್ಕಹೊಳೆ ಜೋಡಿ ಜಲಾಶಯಗಳಿಂದ ಅಧಿಕ ನೀರು ರಿಲೀಸ್ ಮಾಡಲಾಗಿದೆ. ಪರಿಣಾಮ ನೂರಾರು ಎಕರೆ ಕಬ್ಬು, ಟೊಮ್ಯಾಟೊ, ಬಾಳೆ ಅರಿಶಿನ ಬೆಳೆ ಹಾನಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ