Karnataka Weather Report: ಎಚ್ಚರ ಎಚ್ಚರ ಕಡಿಮೆಯಾಗಿಲ್ಲ ಮಳೆ; ರಾತ್ರಿ ಸುರಿದ ಮಳೆಗೆ ಬೆಂಗಳೂರು ತತ್ತರ

ಭಾನುವಾರ ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ರಣಮಳೆಯಾಗಿದ್ದು, ತಗ್ಗು ಪ್ರದೇಶ, ಅಂಡರ್​ಪಾಸ್​​ಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಅಂಡರ್​ಪಾಸ್​ ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
Karnataka Weather Report: ಇಂದು ಸಹ ರಾಜ್ಯದಲ್ಲಿ ಮಳೆಯ (Rainfall) ಸಿಂಚನ ಇರಲಿದೆ. ಇಂದಿನಿಂದ ಮಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಗಳಿವೆ. ಮೈಸೂರು, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಮಹಾರಾಷ್ಟ್ರ (Maharashtra Rains) ಮತ್ತು ಬೆಳಗಾವಿ (Belagavi Rains) ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕ (North Karnataka) ಭಾಗದ ನದಿಗಳು (Rivers) ತುಂಬಿ ಹರಿಯುತ್ತಿದ್ದು, ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಭಾನುವಾರ ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ರಣಮಳೆಯಾಗಿದ್ದು, ತಗ್ಗು ಪ್ರದೇಶ, ಅಂಡರ್​ಪಾಸ್​​ಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಅಂಡರ್​ಪಾಸ್​ ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು.

ಜಿಲ್ಲಾವಾರು  ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​​ಗಳಲ್ಲಿ)

ಬೆಂಗಳೂರು 28-20, ಮೈಸೂರು 29-21, ಚಾಮರಾಜನಗರ 29-21, ರಾಮನಗರ 33-24, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 27-19, ಕೋಲಾರ 29-19, ಹಾಸನ 27-19, ಚಿತ್ರದುರ್ಗ 29-21, ಚಿಕ್ಕಮಗಳೂರು 27-19, ದಾವಣಗೆರೆ 29-22, ಶಿವಮೊಗ್ಗ 29-22, ಕೊಡಗು 24-18, ತುಮಕೂರು 29-21, ಉಡುಪಿ 29-24

ಮಂಗಳೂರು 28-24, ಉತ್ತರ ಕನ್ನಡ 28-22, ಧಾರವಾಡ 28-21, ಹಾವೇರಿ 29-22, ಹುಬ್ಬಳ್ಳಿ 29-22, ಬೆಳಗಾವಿ 27-21, ಗದಗ 29-22, ಕೊಪ್ಪಳ 30-23, ವಿಜಯಪುರ 29-23, ಬಾಗಲಕೋಟ 30-23, ಕಲಬುರಗಿ 29-23, ಬೀದರ್ 27-21, ಯಾದಗಿರಿ 31-24, ರಾಯಚೂರ 31-23 ಮತ್ತು ಬಳ್ಳಾರಿ 31-23

ಇದನ್ನೂ ಓದಿ:  Uttara Kannada: ಬಲಿಗಾಗಿ ಕಾದು ಕುಳಿತಿದೆ ತೂಗುಸೇತುವೆ! ಮಕ್ಕಳು, ಕಾರ್ಮಿಕರ ಸಾವಿನ ಸಂಚಾರ

ಮಳೆಯಿಂದ ನೂರಾರು ಎಕರೆ  ಬೆಳೆ ನಾಶ

ರಕ್ಕಸ ಮಳೆ ಅವಾಂತರಕ್ಕೆ ಗದಗ ತಾಲೂಕಿನ ಚಿಕ್ಕ ಹಂದಿಗೋಳ ಗ್ರಾಮದ ಅನ್ನದಾತರು ಹೈರಾಣು ಆಗಿದ್ದಾರೆ. ನಿರಂತರ ಮಳೆಯಿಂದಾಗಿ ಜಮೀನುಗಳು ಕೆರೆಗಳಾಗಿ ಬದಲಾಗಿದ್ದು, ನೀರು ಖಾಲಿಯಾಗುತ್ತಿಲ್ಲ. ಕೆರೆ ಕೋಡಿ ಬಿದ್ದು ರೈತರ ಜಮೀನುಗಳಿಗೆ ನೀರ ನುಗ್ಗಿದೆ. ಗೋವಿನ ಜೋಳ, ಶೇಂಗಾ ಸೇರಿ ನೂರಾರು ಎಕರೆ ‌ಬೆಳೆ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.ಮಲಪ್ರಭಾ ನದಿಗೆ ಹೆಚ್ಚಿನ ನೀರು

ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಗೋವನಕೊಪ್ಪ ಹಳೆ ಸೇತುವೆ ಜಲಾವೃತಗೊಂಡಿದೆ. ಸದ್ಯ ಜನರು ಹೊಸ ಸೇತುವೆ ಮೂಲಕ ಸಂಚಾರ ಮಾಡುತ್ತಿದ್ದಾರೆ. ನವಿಲು ತೀರ್ಥ ಜಲಾಶಯದಿಂದ 7 ಸಾವಿರ ಕ್ಯೂಸೆಕ್ಸಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ.

Karnataka Weather Report 5th September 2022 mrq
ಬೆಂಗಳೂರು ಮಳೆ (ಫೋಟೋ ಕೃಪೆ-ಟ್ವಿಟ್ಟರ್)


ಬೆಳೆಗಳು ಜಲಾವೃತ

ಅಕ್ಕಪಕ್ಕದ ಹೊಲ ಗದ್ದೆಗಳಿಗೆ  ನೀರು ನುಗ್ಗಿದ್ದು, ಗೋವಿನಜೋಳ, ಕಬ್ಬು, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿವೆ. ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ತಹಶೀಲ್ದಾರ ಜೆ.ಬಿ‌.ಮಜ್ಜಗಿ ಎಚ್ಚರಿಕೆ ನೀಡಿದ್ದಾರೆ.

ನದಿ ಪಾತ್ರದಲ್ಲಿನ ರೈತರು ಪಂಪಸೆಟ್, ಜಾನುವಾರು ಸೇರಿದಂತೆ ತಮ್ಮ ಸಲಕರಣೆಗಳನ್ನ ಬೇರೆ ಕಡೆ ಸಾಗಿಸುವಂತೆಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಮೈಸೂರು ಕಡೆ ಹೋಗುವ ಪ್ರಯಾಣಿಕರೇ ಎಚ್ಚರ

ದಕ್ಷಿಣ ಕರ್ನಾಟಕದಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೈಸೂರಿನಿಂದ ಬೆಂಗಳೂರು ಮತ್ತು ಬೆಂಗಳೂರಿನಿಂದ ಮೈಸೂರುವರೆಗೆ ಸಂಚರಿಸುವ ಪ್ರಯಾಣಿಕರು ಪ್ರಯಾಣ ಮುಂದೂಡುವುದು ಒಳ್ಳೆಯದು ಅಥವಾ ಪರ್ಯಾಯ ಮಾರ್ಗ ಬಳಸುವಂತೆ ರಾಮನಗರ ಎಸ್​​ಪಿ ಸೂಚನೆ ನೀಡಿದ್ದಾರೆ.

Karnataka Weather Report 5th September 2022 mrq
ಬೆಂಗಳೂರು ಮಳೆ (ಫೋಟೋ ಕೃಪೆ-ಟ್ವಿಟ್ಟರ್)


ಇದನ್ನೂ ಓದಿ:  Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

ಬದಲಿ ಮಾರ್ಗ ಅನಿವಾರ್ಯ

ಯಾವಾಗ ಹೆಚ್ಚು ಮಳೆ ಬರುತ್ತೆ, ಪ್ರವಾಹ ಆಗುತ್ತದೆ ಎಂದು ಅಂದಾಜಿಸೋದು ಕಷ್ಟ. ಹೆಚ್ಚು ಮಳೆಯಾಗಿ ಪ್ರವಾಹದ ಸ್ಥಿತಿ ಎದುರಾದರೆ ಬದಲಿ ಮಾರ್ಗ ಅನಿವಾರ್ಯ ಆಗಲಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ.
Published by:Mahmadrafik K
First published: