Karnataka Weather Report: ಮತ್ತೆ ಮಳೆ, ಪ್ರವಾಹ ಸಾಧ್ಯತೆ; ಬೆಂಗಳೂರು-ಮೈಸೂರು ಪ್ರಯಾಣಿಕರೇ ಎಚ್ಚರ

ಇನ್ನುಳಿದಂತೆ ಬೆಳಗಾವಿ, ಕಲಬುರಗಿ, ಧಾರವಾಡ, ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಶನಿವಾರ ಸಂಜೆ ಬೆಂಗಳೂರಿನ (Bengaluru Rains) ಕೆಲವು ಕಡೆ ಮಳೆಯಾಗಿದೆ. ಇಂದು ಸಹ ವರುಣನ ಸಿಂಚನ ಇರಲಿದೆ. ರಾಮನಗರ (Ramanagara Rains) ಭಾಗದಲ್ಲಿ ಎರಡು ಗಂಟೆಗಳಷ್ಟು ಮಳೆಯಾದ್ರೂ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಇಂದಿನಿಂದ ಬುಧವಾರದವರೆಗೆ ಮತ್ತೆ ಮಳೆಯಾಗುವ ಮಾಹಿತಿಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಇನ್ನುಳಿದಂತೆ ಬೆಳಗಾವಿ, ಕಲಬುರಗಿ, ಧಾರವಾಡ, ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಶನಿವಾರ ಸಂಜೆ ಬೆಂಗಳೂರಿನ (Bengaluru Rains) ಕೆಲವು ಕಡೆ ಮಳೆಯಾಗಿದೆ. ಇಂದು ಸಹ ವರುಣನ ಸಿಂಚನ ಇರಲಿದೆ. ರಾಮನಗರ (Ramanagara Rains) ಭಾಗದಲ್ಲಿ ಎರಡು ಗಂಟೆಗಳಷ್ಟು ಮಳೆಯಾದ್ರೂ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 29-20, ಮೈಸೂರು 31-21, ಚಾಮರಾಜನಗರ 31-21, ರಾಮನಗರ 31-21, ಮಂಡ್ಯ 31-21, ಬೆಂಗಳೂರು ಗ್ರಾಮಾಂತರ 29-20, ಚಿಕ್ಕಬಳ್ಳಾಪುರ 29-20, ಕೋಲಾರ 29-21, ಹಾಸನ 28-19, ಚಿತ್ರದುರ್ಗ 30-21, ಚಿಕ್ಕಮಗಳೂರು 27-19, ದಾವಣಗೆರೆ 30-22, ಶಿವಮೊಗ್ಗ 29-21, ಕೊಡಗು 26-18, ತುಮಕೂರು 29-21, ಉಡುಪಿ 30-24, ಮಂಗಳೂರು 29-24

ಉತ್ತರ ಕನ್ನಡ 29-22, ಧಾರವಾಡ 29-21, ಹಾವೇರಿ 30-22, ಹುಬ್ಬಳ್ಳಿ 30-22, ಬೆಳಗಾವಿ 28-21, ಗದಗ 31-22, ಕೊಪ್ಪಳ 32-22, ವಿಜಯಪುರ 31-23, ಬಾಗಲಕೋಟ 32-23, ಕಲಬುರಗಿ 32-23, ಬೀದರ್ 29-22, ಯಾದಗಿರಿ 33-23, ರಾಯಚೂರ 33-23 ಮತ್ತು ಬಳ್ಳಾರಿ 32-23

ಮೈಸೂರು ಕಡೆ ಹೋಗುವ ಪ್ರಯಾಣಿಕರೇ ಎಚ್ಚರ

ದಕ್ಷಿಣ ಕರ್ನಾಟಕದಲ್ಲಿ ಇಂದಿನಿಂದ ಬುಧವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೈಸೂರಿನಿಂದ ಬೆಂಗಳೂರು ಮತ್ತು ಬೆಂಗಳೂರಿನಿಂದ ಮೈಸೂರುವರೆಗೆ ಸಂಚರಿಸುವ ಪ್ರಯಾಣಿಕರು ಪ್ರಯಾಣ ಮುಂದೂಡುವುದು ಒಳ್ಳೆಯದು ಅಥವಾ ಪರ್ಯಾಯ ಮಾರ್ಗ ಬಳಸುವಂತೆ ರಾಮನಗರ ಎಸ್​​ಪಿ ಸೂಚನೆ ನೀಡಿದ್ದಾರೆ.

Karnataka Weather Report 4th September 2022 mrq
ಬೆಂಗಳೂರು ಮೈಸೂರು ಹೆದ್ದಾರಿ


ಇದನ್ನೂ ಓದಿ:  IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಕಳೆದು ಐದು ದಿನಗಳ ಹಿಂದೆ ಆಗಿದ್ದ ಪರಿಸ್ಥಿತಿಯೇ ಮತ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರುಕಳಿಸುವ ಸಾಧ್ಯತೆಗಳಿವೆ. ಇಂದಿನಿಂದ ರಾಮನಗರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು ಕಡೆ ಹೋಗುವ ಪ್ರಯಾಣಿಕರರಿಗೆ ರಾಮನಗರ ಎಸ್​ಪಿ ಎಚ್ಚರಿಕೆ ನೀಡಿದ್ದಾರೆ.

Karnataka Weather Report 4th September 2022 mrq
ರಾಮನಗರದಲ್ಲಿ ಮಳೆ


ಎರಡು ಗಂಟೆ ಮಳೆಯಾದ್ರೂ ಪ್ರವಾಹ ಸಾಧ್ಯತೆ

ಕಳೆದ ವಾರ ಹೆದ್ದಾರಿಯಲ್ಲಿ ಆಗಿದ್ದಂತಹ ಪರಿಸ್ಥಿತೆ ಮತ್ತೆ ಆಗಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ಮಾರ್ಗ ಮಾಡಬೇಕಾಗುತ್ತದೆ. ಸತತ ಎರಡು ಗಂಟೆ ಧಾರಾಕಾರ ಮಳೆ ಬಂದಿದ್ದೇ ಆದಲ್ಲಿ ಮತ್ತೆ ಪ್ರವಾಹ ಸಾಧ್ಯತೆ ಇದೆ. ಬೆಂಗಳೂರಿನಿಂದ ಬರುವವರು ಕನಕಪುರ ಹಾಗೂ ಕುಣಿಗಲ್ ಮಾರ್ಗ ಸಂಚರಿಸಬೇಕು. ಮೈಸೂರು ಕಡೆಯಿಂದ ಬರುವವರಿಗೆ ಮೈಸೂರು ಮತ್ತು ಮಂಡ್ಯ ಎಸ್​​ಪಿಯಿಂದ ಮಾಹಿತಿ ಪಡೆಯುತ್ತೇವೆ. ಮೂರು ಜಿಲ್ಲೆಗಳ ಎಸ್​ಪಿ ಕಚೇರಿ ಮಾಹಿತಿ ಮೇರೆ ಕ್ರಮ ವಹಿಸಲಾಗುತ್ತದೆ.

Karnataka Weather Report 4th September 2022 mrq
ಬೆಂಗಳೂರು ಮೈಸೂರು ಹೆದ್ದಾರಿ


ಬದಲಿ ಮಾರ್ಗ ಅನಿವಾರ್ಯ

ಯಾವಾಗ ಹೆಚ್ಚು ಮಳೆ ಬರುತ್ತೆ, ಪ್ರವಾಹ ಆಗುತ್ತದೆ ಎಂದು ಅಂದಾಜಿಸೋದು ಕಷ್ಟ. ಹೆಚ್ಚು ಮಳೆಯಾಗಿ ಪ್ರವಾಹದ ಸ್ಥಿತಿ ಎದುರಾದರೆ ಬದಲಿ ಮಾರ್ಗ ಅನಿವಾರ್ಯ ಆಗಲಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  Dakshina Kannada: ಭೂಮಿಯಿಂದ ಚಿಮ್ಮುತ್ತೆ ಬಿಸಿನೀರಿನ ತೀರ್ಥ, ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯ!

ಬ್ಯಾಂಕ್ ಆವರಣ ಜಲಾವೃತ, ಮರದ ತುಂಡುಗಳೇ ಸೇತುವೆ

ಬ್ಯಾಂಕ್​ಗೆ ತೆರಳಲು ಮರದ ತುಂಡುಗಳನ್ನೇ ಸೇತುವೆಯಾಗಿ ಸಾರ್ವಜನಿಕರು ಬಳಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಎಸ್​ಬಿಐ ಬ್ಯಾಂಕ್ ಆವರಣದಲ್ಲಿ ನಡೆದಿದೆ. ನಿರಂತರ ಮಳೆಯಿಂದಾಗಿ ಬ್ಯಾಂಕ್ ಮುಂಭಾಗದ ಆವರಣ ಜಲಾವೃತಗೊಂಡಿತ್ತು. ನಿರಂತರ ಮಳೆ ಜೊತೆಗೆ ಕೊಳಚೆ ನೀರು ಸೇರ್ಪಡೆಯಾಗಿ ಅಶುಚಿತ್ವದ ತಾಣವಾಗಿ ಬದಲಾಗಿದೆ. ಆದ್ದರಿಂದ ಬ್ಯಾಂಕ್​ಗೆ ಆಗಮಿಸುವ ಸಾರ್ವಜನಿಕರು ಮರದ ತುಂಡುಗಳನ್ನೇ ಸೇತುವೆಯನ್ನಾಗಿ ಬಳಕೆ ಮಾಡುತ್ತಿದ್ದಾರೆ. ವಾರದಿಂದ ಇದೇ ಪರಿಸ್ಥಿತಿಯಿದ್ದರೂ ಗ್ರಾ.ಪಂ. ಹಾಗೂ ಬ್ಯಾಂಕ್ ಆಡಳಿತ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
Published by:Mahmadrafik K
First published: