Karnataka Weather Report: ವರುಣನ ಅಬ್ಬರ ಕೊಂಚ ಇಳಿಕೆಯಾದ್ರೂ, ಛತ್ರಿ ತೆಗೆದುಕೊಂಡು ಹೋಗೋದನ್ನ ಮರೆಯಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Karnataka Weather Report: ರಾಜ್ಯದಲ್ಲಿ ಮಳೆಯ (Karnataka Rainfall) ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ದಿಢೀರ್ ಅಂತ ಸುರಿಯುವ ಮಳೆ ಜನರನ್ನು ಸಂಕಷ್ಟಕ್ಕೆ ಸಿಲುಕುತ್ತಿದೆ. ಕೆಲವೊಮ್ಮೆ ಬಿಸಿಲು, ಮರುಕ್ಷಣವೇ ಮಳೆ ಸುರಿಯಲು ಪ್ರಾರಂಭಿಸಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಜಮೀನಿನಲ್ಲೇ ತರಕಾರಿ (Vegetables) ಕೊಳೆತ ಹೋಗಿದೆ. ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ (Vegetable Price Hike) ದುಪ್ಪಟ್ಟು ಆಗಿದೆ. ಇಂದು ಸಹ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಉತ್ತರ ಕರ್ನಾಟಕ  ಭಾಗದಲ್ಲಿ ಮಳೆರಾಯ ಜೂಜಾಟ ಆಡುತ್ತಿದ್ದಾನೆ. ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗ್ತಿದೆ. ನಿನ್ನೆಯಿಂದ ಬೆಂಗಳೂರಿನಲ್ಲಿ ವರುಣನ (Bengaluru Rains) ಅಬ್ಬರ ತಗ್ಗಿದೆ.

  ಗದಗ, ಧಾರವಾಡ, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಮತ್ತು ಬೀದರ್​ ಗಳಲ್ಲಿಯೂ ಇಂದು ಮಳೆಯಾಗುವ ನಿರೀಕ್ಷೆಗಳಿವೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

  ಬೆಂಗಳೂರು 29-21, ಮೈಸೂರು 30-21, ಚಾಮರಾಜನಗರ 30-21, ರಾಮನಗರ 31-22, ಮಂಡ್ಯ 31-21, ಬೆಂಗಳೂರು ಗ್ರಾಮಾಂತರ 29-21, ಚಿಕ್ಕಬಳ್ಳಾಪುರ 29-20, ಕೋಲಾರ 29-21, ಹಾಸನ 28-19, ಚಿತ್ರದುರ್ಗ 30-18, ಚಿಕ್ಕಮಗಳೂರು 27-19, ದಾವಣಗೆರೆ 30-22, ಶಿವಮೊಗ್ಗ 30-21, ಕೊಡಗು 26-18, ತುಮಕೂರು 29-21

  ಉಡುಪಿ 29-24, ಮಂಗಳೂರು 29-24, ಉತ್ತರ ಕನ್ನಡ 30-21, ಧಾರವಾಡ 29-21, ಹಾವೇರಿ 31-22, ಹುಬ್ಬಳ್ಳಿ 30-21, ಬೆಳಗಾವಿ 28-21, ಗದಗ 31-22, ಕೊಪ್ಪಳ 32-23, ವಿಜಯಪುರ 32-23, ಬಾಗಲಕೋಟ 32-23, ಕಲಬುರಗಿ 32-24, ಬೀದರ್ 31-23, ಯಾದಗಿರಿ 33-24, ರಾಯಚೂರ 34-24 ಮತ್ತು ಬಳ್ಳಾರಿ 33-23

  ಇದನ್ನೂ ಓದಿ:  Bengaluru Rain: ಬೆಂಗಳೂರಿನಲ್ಲಿ ಮಳೆ ಬಂದ್ರೆ ಪರಿಸ್ಥಿತಿ ಹರೋಹರ! ಓಡಾಡೋಕೆ ಇಷ್ಟೊಂದು ಸಮಯ ಬೇಕಾ?

  ಜಲಾಶಯಗಳು ಭರ್ತಿ

  ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

  Karnataka Weather Report 3rd september 2022 mrq
  ಚಿಕ್ಕಮಗಳೂರು ಮಳೆ


  ಸಿಡಿಲಿಗೆ ಇಬ್ಬರು ಬಲಿ!

  ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಶೋಕ ಊಫ್‌ರ್‍ ಈಶ್ವರಯ್ಯ ಈರಯ್ಯ ಶಿವಪ್ಪಯನಮಠ(56), ಚಿಕ್ಕನರಗುಂದ ಗ್ರಾಮದ ಮಾಲಾ ಮಲ್ಲಿಕಾರ್ಜುನ ಕೋನಣ್ಣವರ(31) ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ಲ ಗ್ರಾಮದಲ್ಲಿ ಗ್ರಾಪಂ ಸದಸ್ಯ ವಿರೂಪಾಕ್ಷಪ್ಪ ದ್ಯಾಮಪ್ಪ ಧಾರವಾಡ (48) ಸಿಡಿಲಿಗೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

  ಶಾಲೆಗೆ ನುಗ್ಗಿದ ನೀರು

  ಗದಗದಲ್ಲಿ (Gadaga) ಮಳೆಗೆ ಅವಾಂತರವೇ ಸೃಷ್ಠಿಯಾಗ್ತಿದೆ. ವರುಣ ಆರ್ಭಟಕ್ಕೆ ತರಗತಿ (Classroom) ನಡೆಯುತ್ತಿದ್ದಾಗಲೇ ಶಾಲೆಗೆ (School) ನೀರು ನುಗ್ಗಿದೆ. ಏಕಾಏಕಿ ಶಾಲೆಗೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು, ಶಿಕ್ಷಕರು (Students Teachers) ಪರದಾಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ವಿದ್ಯಾರ್ಥಿಗಳ ಕೊಠಡಿಗಳಿಗೆ ಮಳೆ ನೀರು ನುಗ್ಗಿದೆ. ತರಗತಿ ನಡೆಯುತ್ತಿರುವ ವೇಳೆ ಏಕಾಏಕಿ ಶಾಲೆಗೆ ನೀರು ನುಗ್ಗಿದ ಪರಿಣಾಮ ಒಂದು ಬಾರಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ರು.

  Karnataka Weather Report 3rd september 2022 mrq
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ:  Drinking Water: ಬೆಂಗಳೂರಿನಲ್ಲಿರುವ ಕೆರೆಗಳ ನೀರು ಕುಡಿಯಲು ಯೋಗ್ಯವೇ? ಏನ್ ಹೇಳ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ?

  3 ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಗದಗದ ಜನತೆ ಹೈರಾಣಾಗಿ ಹೋಗಿದ್ದಾರೆ. ಭಾರೀ ಮಳೆಗೆ ಶಾಲೆಗೆ ನೀರು ನುಗ್ಗಿದೆ. ಪರಿಣಾಮ ಶಾಲೆಯಲ್ಲಿದ್ದ ದಾಖಲೆ ಪತ್ರಗಳು ಹಾನಿಯಾಗಿದೆ. ಶಾಲೆಯ ಅಡುಗೆ ಕೊಠಡಿಯಲ್ಲಿದ್ದ ಬಿಸಿಯೂಟದ ರೇಷನ್ ಕೂಡ ನೀರುಪಾಲಾಗಿದೆ.
  Published by:Mahmadrafik K
  First published: