• Home
 • »
 • News
 • »
 • state
 • »
 • Karnataka Weather Report: ಮುಂಗಾರು ಅಂತ್ಯದಲ್ಲಿಯೂ ವರುಣನ ಅಬ್ಬರ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

Karnataka Weather Report: ಮುಂಗಾರು ಅಂತ್ಯದಲ್ಲಿಯೂ ವರುಣನ ಅಬ್ಬರ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗದಗ ಮತ್ತು ದಾವಣಗೆರೆ ಭಾಗದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಬೆಳೆಗಳು ಜಲಾವೃತವಾಗಿವೆ. ವಿಜಯಪುರ, ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಭಾಗದಲ್ಲಿಯ ಕೆಳ ಹಂತದ ಸೇತುವೆಗಳು ಮುಳುಗಡೆಯಾಗುವ ಹಂತಕ್ಕೆ ತಲುಪಿವೆ.

 • Share this:

  ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ (Karnataka Rains) ಭಾನುವಾರ ಕೊಂಚ ಬಿಡುವು ನೀಡಿತ್ತು. ಇಂದು ಸಹ ರಾಜ್ಯದಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಸದ್ಯ ಮುಂದಿನ ನಾಲ್ಕೈದು ದಿನ ಮಳೆಯ (Rainfall) ಪ್ರಮಾಣ ತಗ್ಗಲಿದ್ದು, ಈ ತಿಂಗಳ ಎರಡನೇ ವಾರದಲ್ಲಿ ಐದು ದಿನ ವರುಣರಾಯ ಅಬ್ಬರಿಸಲಿದ್ದಾರೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆಯನ್ನು ನೀಡಿದೆ. ಮಳೆ ಹೆಚ್ಚಾದ ಹಿನ್ನೆಲೆ ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ರೆ, ಬೆಳಗಾವಿಯಲ್ಲಿ ಗೋಡೆ ಕುಸಿದ ಪರಿಣಾಮ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇತ್ತ ಮಳೆಯ ಜೊತೆಗೆ ಸಿಡಿಲು ಕಾಣಿಸಿಕೊಳ್ಳುತ್ತಿದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ನಗರ ಭಾಗದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾದ್ರೆ, ಹುಬ್ಬಳ್ಳಿಯಲ್ಲಿ ಶೆಡ್​ಗೆ ನೀರು ನುಗ್ಗಿದ ಪರಿಣಾಮ ಅಲ್ಲಿ ಕಟ್ಟಲಾಗಿದ್ದ ನೂರಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.


  ಗದಗ ಮತ್ತು ದಾವಣಗೆರೆ ಭಾಗದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಬೆಳೆಗಳು ಜಲಾವೃತವಾಗಿವೆ. ವಿಜಯಪುರ, ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಭಾಗದಲ್ಲಿಯ ಕೆಳ ಹಂತದ ಸೇತುವೆಗಳು ಮುಳುಗಡೆಯಾಗುವ ಹಂತಕ್ಕೆ ತಲುಪಿವೆ.


  ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Rain) ಕೆಲ ಸಮಯ ಮೋಡಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ನಿರೀಕ್ಷೆಗಳಿವೆ. ಇಂದು ರಾಜಧಾನಿಯಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


  ಬೆಂಗಳೂರು 27-19, ಮೈಸೂರು 29-20, ಚಾಮರಾಜನಗರ 29-20, ರಾಮನಗರ 29-20, ಮಂಡ್ಯ 30-20, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-19, ಕೋಲಾರ 29-20, ಹಾಸನ 27-18, ಚಿತ್ರದುರ್ಗ 29-21, ಚಿಕ್ಕಮಗಳೂರು 26-18, ದಾವಣಗೆರೆ 30-21,, ಶಿವಮೊಗ್ಗ 29-21, ಕೊಡಗು 24-18, ತುಮಕೂರು 28-20, ಉಡುಪಿ 29-25


  ಮಂಗಳೂರು 29-24, ಉತ್ತರ ಕನ್ನಡ 29-21, ಧಾರವಾಡ 30-20, ಹಾವೇರಿ 31-21, ಹುಬ್ಬಳ್ಳಿ 31-21, ಬೆಳಗಾವಿ 29-21, ಗದಗ 31-21, ಕೊಪ್ಪಳ 31-22, ವಿಜಯಪುರ 31-22, ಬಾಗಲಕೋಟ 32-22 , ಕಲಬುರಗಿ 32-22, ಬೀದರ್ 30-21, ಯಾದಗಿರಿ 32-23, ರಾಯಚೂರ 32-23 ಮತ್ತು ಬಳ್ಳಾರಿ 32-23


  ಶೇ.20ರಷ್ಟು ಅಧಿಕ ಮಳೆ


  ಮುಂಗಾರು ರಾಜ್ಯದಲ್ಲಿ ಚುರುಕಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಕರ್ನಾಟಕದಲ್ಲಿ ಶೇ. 20ರಷ್ಟು ಅಧಿಕ ಮಳೆ ಸುರಿದಿದೆ. ಕರ್ನಾಟಕ ಸೇರಿದಂತೆ ಭಾರತದಲ್ಲಿ ಹಿಂಗಾರು ಮಳೆ ಅಕ್ಟೋಬರ್ 2ನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ.ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


  Karnataka Weather Report 3rd October 2022 mrq
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ:  Belagavi Politics: ಬೆಳಗಾವಿಯಲ್ಲಿ ನವರಾತ್ರಿ ಸಂಭ್ರಮ; ದಾಂಡಿಯಾ ಹೆಸರಿನಲ್ಲಿ ಇಬ್ಬರು ನಾಯಕರ ಪಾಲಿಟಿಕ್ಸ್!


  ನೆರೆಯ ರಾಜ್ಯಗಳಲ್ಲಿಯೂ ಮಳೆಯ ಅಲರ್ಟ್


  ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ಅಕ್ಟೋಬರ್​​ನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ ಮತ್ತು ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದೆ.ಇದರಿಂದಾಗಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.


  ದಾವಣಗೆರೆಯಲ್ಲಿ ಮಳೆ ಜಮೀನಿಗೆ ನುಗ್ಗಿದ ನೀರು


  ದಾವಣಗೆರೆ  ಜಿಲ್ಲೆಯಲ್ಲಿ ಭಾರೀ ಮಳೆ ಆಗಿದೆ. ಹಲವು ಕಡೆ ಕೆರೆ- ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು, ಜಮೀನಿಗೆ ನೀರು ನುಗ್ಗಿದೆ. ಹೆಬ್ಬಾಳು ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಹಿನ್ನೆಲೆ ಗ್ರಾಮಕ್ಕೆ ಹಾಗೂ ಕೆಲ ತೋಟಗಳಿಗೆ ನೀರು ನುಗ್ಗಿದೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ನೂರಾರು ಎಕರೆ ಮೆಕ್ಕೆಜೋಳ ಬೆಳೆ ನಾಶವಾಗಿದೆ.


  Karnataka Weather Report 3rd October 2022 mrq
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ:  Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್


  ಮಳೆ ಅಬ್ಬರ -ಸೇತುವೆ ಜಲಾವೃತ


  ಗದಗ ಜಿಲ್ಲೆಯಲ್ಲೂ ಮಳೆ ಅಬ್ಬರಿಸುತ್ತಿದೆ. ಮಳೆಯ ಅಬ್ಬರಕ್ಕೆ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಬಳಿಯ ಸೇತುವೆ ಜಲಾವೃತ ಆಗಿದೆ. ರೋಣ-ನರಗುಂದ ಸಂಪರ್ಕ ಕಡಿತ ಆಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

  Published by:Mahmadrafik K
  First published: