ರಾಜ್ಯದಲ್ಲಿ ಆಕಾಶಕ್ಕೆ ರಂಧ್ರ ಬಿದ್ದಂತೆ ಆಗಿದ್ದು, ಮಳೆ ಸುರಿಯುತ್ತಿದೆ. ಇಂದು ಸಹ ಮಳೆ (Rainfall ) ಮುಂದುವರಿಯಲಿದೆ. ಈಗಾಗಲೇ 20 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದ್ದು, ಮಳೆಯಾಗಲಿದೆ. ಇನ್ನು ನಿರಂತರ ಮಳೆಯಿಂದಾಗಿ ಸೇತುವೆಗಳು ಜಲಾವೃತಗೊಳ್ಳುತ್ತಿವೆ. ಭೂಕುಸಿತ (Landslide) ಸಹ ಉಂಟಾಗಿದ್ದು, ಸಾವಿನ ವರದಿಗಳು ಬರುತ್ತಿವೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆ (Rain Alert) ನೀಡಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಸಾಯಿ ಲೇಔಟ್ (Sai Layout, Bengaluru) ಮತ್ತೊಮ್ಮೆ ಜಲಾವೃತಗೊಂಡಿದೆ.
ಎರಡು ತಿಂಗಳ ಹಿಂದೆಯೂ ಸಾಯಿ ಲೇಔಟ್ ಜಲಾವೃತಗೊಂಡಿತ್ತು. ರಾತ್ರಿ ಸುರಿದ ಮಳೆಯಿಂದ ಸಾಯಿ ಲೇಔಟ್ ಒಳಗೆ ನೀರು ನುಗ್ಗಿದ್ದು, ಬಹುತೇಕ ನೆಲಮಹಡಿಗಳು (Ground Floor Houses) ಜಲಾವೃತಗೊಂಡಿವೆ. ಪದೇ ಪದೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಹುತೇಕರು ನೆಲ ಮಹಡಿ ಖಾಲಿ ಮಾಡಿಕೊಂಡು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇಂದು ಸಹ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
‘ಇದನ್ನೂ ಓದಿ: Basavaraj Bommai: ಮಳೆಯಿಂದಾದ ಮನೆ ಹಾನಿಗೆ ತಕ್ಷಣ ಪರಿಹಾರ ನೀಡಿ: ಸಿಎಂ ಬೊಮ್ಮಾಯಿ ಸೂಚನೆ
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 26-20, ಮೈಸೂರು 26-21, ಚಾಮರಾಜನಗರ 26-21, ರಾಮನಗರ 27-21, ಮಂಡ್ಯ 26-20, ಬೆಂಗಳೂರು ಗ್ರಾಮಾಂತರ 26-20, ಚಿಕ್ಕಬಳ್ಳಾಪುರ 25-19, ಕೋಲಾರ 27-19, ಹಾಸನ 25-19, ಚಿತ್ರದುರ್ಗ 27-21, ಚಿಕ್ಕಮಗಳೂರು 23-18, ದಾವಣಗೆರೆ 28-22, ಶಿವಮೊಗ್ಗ 27-21, ಕೊಡಗು 21-18, ತುಮಕೂರು 26-21
ಉಡುಪಿ 28-24, ಮಂಗಳೂರು 27-24, ಉತ್ತರ ಕನ್ನಡ 26-22, ಧಾರವಾಡ 27-21, ಹಾವೇರಿ 28-22, ಹುಬ್ಬಳ್ಳಿ 28-22, ಬೆಳಗಾವಿ 27-21, ಗದಗ 28-22, ಕೊಪ್ಪಳ 29-23, ವಿಜಯಪುರ 29-22, ಬಾಗಲಕೋಟ 29-23,. ಕಲಬುರಗಿ 29-22, ಬೀದರ್ 27-21, ಯಾದಗಿರಿ 31-23, ರಾಯಚೂರ 31-23 ಮತ್ತು ಬಳ್ಳಾರಿ 29-23
ಹಿಂದೆಂದೂ ಕಾರಣ ಪ್ರವಾಹ ಕಂಡ ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಿಂದೆಂದೂ ಕಂಡು ಕಾಣರಿಯದ ಪ್ರವಾಹಕ್ಕೆ ತುತ್ತಾಗಿದೆ. ಪ್ರವಾಹ ಅಂದ್ರೆ ಏನು ನೋಡದ ಭಟ್ಕಳ ಜನ ಇವತ್ತು ಪ್ರವಾಹದ ನರಕ ಸದೃಶ್ಯ ನೋಡಿ ಪರದಾಡುತ್ತಿದ್ದಾರೆ.
ಭಟ್ಕಳದ ಪಟ್ಟಣ ಸೇರಿ ಭಟ್ಕಳದ ಮುಂಡಳ್ಳಿ, ಮುಟ್ಟಳ್ಳಿ, ಬೇಂಗ್ರೆ, ಚೌಥನಿ, ಮಣ್ಣಕುಳ್ಳಿ, ಮೂಡಭಟ್ಕಳ ಸೇರಿ ಇನ್ನಷ್ಟು ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಮನೆ ಮೇಲೆ ಕುಸಿದ ಗುಡ್ಡ
ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ನಾಲ್ವರು ಧಾರುಣವಾಗಿ ಸಾವು ಕಂಡಿದ್ದಾರೆ. ಮೃತರು ನಾರಾಯಣ್ ನಾಯ್ಕ್ (60), ಮಗಳು ಲಕ್ಷ್ಮೀ ನಾರಾಯಣ್ ನಾಯ್ಕ್ (45), ಮಗ ಅನಂತ ನಾರಾಯಣ್ ನಾಯ್ಕ್ (38), ಇವರ ಸಂಬಂಧಿ ಪ್ರವೀಣ್ ರಾಮಕೃಷ್ಣ ನಾಯ್ಕ್ (16) ಸಾವು ಕಂಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು,ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸಿದೆ.
ಇದನ್ನೂ ಓದಿ: Yadagiri: ವರುಣನ ಅಬ್ಬರಕ್ಕೆ ಜನ ತತ್ತರ! ಹಬ್ಬದ ಸಂಭ್ರಮ ಕಸಿದ ಮಳೆ
ಕಲ್ಮಕಾರು,ಕಡಮಕಲ್ಲು ಮೊದಲಾದ ಬೆಟ್ಟಗಳಲ್ಲಿ ಉಂಟಾದ ಭಾರೀ ಮೇಘಸ್ಪೋಟದಿಂದಾಗಿ ಈ ಭಾಗದ ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ