• Home
  • »
  • News
  • »
  • state
  • »
  • Karnataka Weather: ಇಂದು ಗುಡುಗು ಸಹಿತ ಮಳೆ; ಈ ಜಲ್ಲೆಗಳಲ್ಲಿ ಆರೆಂಜ್ ಅಲರ್ಟ್

Karnataka Weather: ಇಂದು ಗುಡುಗು ಸಹಿತ ಮಳೆ; ಈ ಜಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶುಕ್ರವಾರ ರಾತ್ರಿ ಬೆಂಗಳೂರಿನ (Bengaluru Rains) ಹಲವು ಭಾಗಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ಇದು ಇಂದು ಸಹ ಮುಂದುವರಿಯಲಿದೆ.

  • Share this:

Karnataka Weather Report: ರಾಜ್ಯದಲ್ಲಿ ಇಂದು ಕರಾವಳಿ, ಮಲೆನಾಡು ಮತ್ತು  ಉತ್ತರ  ಒಳನಾಡಿಲ್ಲಿ ಗುಡುಗು ಸಹಿತ(Thundering) ಮಳೆಯಾಗುವ (Rainfall) ಸಾಧ್ಯತೆಗಳಿವೆ. ಶುಕ್ರವಾರ ರಾತ್ರಿ ಬೆಂಗಳೂರಿನ (Bengaluru Rains) ಹಲವು ಭಾಗಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ಇದು ಇಂದು ಸಹ ಮುಂದುವರಿಯಲಿದೆ. ಸೋಮವಾರ ಸಾಧಾರಣ ಮಳೆಯಾದ್ರೆ, ಮಂಗಳವಾರ ಜೋರು ಆಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೂಡ ಆರೆಂಜ್ ಅಲರ್ಟ್ (Orange Alert) ನೀಡಲಾಗಿದೆ ಎಂದಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ  19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 29-20, ಮೈಸೂರು 29-21, ಚಾಮರಾಜನಗರ 30-21, ರಾಮನಗರ 30-21, ಮಂಡ್ಯ 31-22, ಬೆಂಗಳೂರು ಗ್ರಾಮಾಂತರ 29-20, ಚಿಕ್ಕಬಳ್ಳಾಪುರ 29-21, ಕೋಲಾರ 30-21, ಹಾಸನ 28-20, ಚಿತ್ರದುರ್ಗ 29-21, ಚಿಕ್ಕಮಗಳೂರು 27-19, ದಾವಣಗೆರೆ 30-22, ಶಿವಮೊಗ್ಗ 30-22, ಕೊಡಗು 26-18, ತುಮಕೂರು 30-21, ಉಡುಪಿ 29-25


ಇದನ್ನೂ ಓದಿ:  Deceased Marriage: 30 ವರ್ಷದ ಹಿಂದೆ ಸಾವನ್ನಪ್ಪಿದ್ದ ವಧು-ವರ ಮೊನ್ನೆ ರಾತ್ರಿ ಮದುವೆ ಆದ್ರು!


ಮಂಗಳೂರು 29-24, ಉತ್ತರ ಕನ್ನಡ 29-22, ಧಾರವಾಡ 29-21, ಹಾವೇರಿ 31-22, ಹುಬ್ಬಳ್ಳಿ 30-22, ಬೆಳಗಾವಿ 28-21, ಗದಗ 29-22, ಕೊಪ್ಪಳ 31-22, ವಿಜಯಪುರ 29-23, ಬಾಗಲಕೋಟ 30-22 , ಕಲಬುರಗಿ 31-23, ಬೀದರ್ 28-22, ಯಾದಗಿರಿ 32-24, ರಾಯಚೂರ 32-23 ಮತ್ತು ಬಳ್ಳಾರಿ 32-23


ಗುಡುಗು ಸಹಿತ ಮಳೆ


ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿತ್ರದುರ್ಗ, ತುಮಕೂರು,  ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಯಾದಗಿರಿ, ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ಬೀದರ್‌ ಈ ಭಾಗದಲ್ಲಿ ಗುಡುಗ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.


ರಾಜ್ಯದ ಜಲಾಶಯಗಳು ಭರ್ತಿ


ರಾಜ್ಯದೆಲ್ಲೆಡೆ ಮಳೆ (Heavy Rain) ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ (Falls) ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ ಬಾಗೀನ ಸಹ ಅರ್ಪಿಸಲಾಗುತ್ತಿದೆ. ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ.


ಕೈ ಬೀಸಿ ಕರೆಯುತ್ತಿದೆ ಮಿನಿ ನಯಾಗರ


ಕೊಡಗಿನಲ್ಲಿ ಮುಂಗಾರು (Monsoon) ಆರಂಭವಾದ್ರೆ ಸಾಕು ಜಿಲ್ಲೆಯಲ್ಲಿ ಹಲವು ಜಲಧಾರೆಗಳು ಹೊಳೆಗಳು ಜೀವ ಪಡೆದುಕೊಳ್ಳುತ್ತವೆ. ಅದರಲ್ಲಿ ಪ್ರಮುಖವಾಗಿ ಚಿಕ್ಲಿಹೊಳೆ (Chiklihole) ತುಂಬಿ ಹರಿಯಿತ್ತೆಂದರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಡುತ್ತದೆ. ಸತತವಾಗಿ ಸುರಿದ ಮಳೆಯಿಂದಾಗಿ ಸಹಜ ಪ್ರಕೃತಿ ಸೌಂದರ್ಯದ (Beautiful Nature) ನಡುವೆ ಮೈತುಂಬಿ ಹರಿಯುತ್ತಿರುವ ಈ ಹೊಳೆಯನ್ನ ಪ್ರೇಕ್ಷಕರು ಮಿನಿ ನಯಾಗರ ಫಾಲ್ಸ್ (Falls) ಎಂದೇ ಕರೆಯುತ್ತಿದ್ದಾರೆ. ಈ ಮಿನಿ ನಯಾಗರ ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ.


ಅಡಿಕೆ ತೋಟಗಳಲ್ಲಿ ಕೊಳೆರೋಗ


ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಸರಿಯಾದ ಸಮಯದಲ್ಲಿ ಬೋಡೋ ದ್ರಾವಣವನ್ನು ಸಿಂಪಡಿಸಲಾಗದೇ ಇದ್ದ ಕಾರಣ ಇದೀಗ ಗಿಡಗಳ ಹಿಂಗಾರ ಕರಟಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಸಣ್ಣ ಅಡಿಕೆಗಳು ಉದುರಲಾರಂಭಿಸಿದೆ


ಇದನ್ನೂ ಓದಿ:  Bengaluru: ಹೆಂಡತಿ ಅತಿ ಸುಂದರಿ ಎಂದು ಆ್ಯಸಿಡ್ ಹಾಕಿದ ಗಂಡ; ಆರೋಪಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್


ಉತ್ತರ ಭಾರತದ ರಾಜ್ಯಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

Published by:Mahmadrafik K
First published: