Karnataka Weather Report: ವರುಣನ ಅಬ್ಬರಕ್ಕೆ ದಕ್ಷಿಣ ಕರ್ನಾಟಕ ತತ್ತರ; ಎಲ್ಲಿ ನೋಡಿದ್ರೂ ನೀರು, ಶಾಲೆಗಳಿಗೆ ರಜೆ

ಮಹಾಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರುನಿಂತ ಪರಿಣಾಮ ಹಲವು ವಾಹನಗಳು ಮುಳುಗಡೆಯಾಗಿದ್ದು ಬೆಂಗಳೂರು-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಬೆಳೆ 259 ಹೆಕ್ಟೇರ್ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳು 221 ಹೆಕ್ಟೇರ್ ಹಾಳಾಗಿದೆ.

ಮಳೆ

ಮಳೆ

  • Share this:
ರಾಜ್ಯದಲ್ಲಿ ಮಳೆ (Karnataka Rains) ಅಬ್ಬರ ನಿಲ್ಲುತ್ತಿಲ್ಲ. ಮೈಸೂರು (Mysuru Karnataka) ಭಾಗದ ಜನರು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ (Rain Predicts) ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದವು, ರಸ್ತೆಗಳ ಮೇಲೆ ನದಿಗಳಂತೆ ನೀರು ಹರಿಯುತ್ತಿದೆ. ಮಳೆ ಹಿನ್ನೆಲೆ ಬೆಂಗಳೂರು- ಮೈಸೂರು (Bengaluru-Mysuru) ಮಾರ್ಗವಾಗಿ ಪ್ರಯಾಣಿಸುವವರು ಪ್ರಯಾಣ ಮುಂದೂಡುವುದು ಒಳಿತು. ತುರ್ತು ಪರಿಸ್ಥಿತಿ ಇದ್ರೆ ಬದಲಿ ಮಾರ್ಗದಲ್ಲಿ ಪ್ರಯಾಣ ಬೆಳೆಸಲು ರಾಮನಗರ (Ramanagara) ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊಡಗು (Kodagu) ಭಾಗದಲ್ಲಿ ಜಲಸ್ಫೋಟವಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಕಾರಣ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಕೊಯಿಕ್ಕೊಡ ಭಾಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಇಂದು ಸಹ ಬೆಂಗಳೂರಿನಲ್ಲಿ ಮಳೆ ಸುರಿಯುವ ಕಾರಣಗಳಿಂದ ಶಾಲೆಗಳಿಗೆ (School Holiday) ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 28-21, ಮೈಸೂರು 29-21, ಚಾಮರಾಜನಗರ 29-21, ರಾಮನಗರ 29-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 28-21, ಚಿಕ್ಕಬಳ್ಳಾಪುರ 28-20, ಕೋಲಾರ 29-21, ಹಾಸನ 27-21, ಚಿತ್ರದುರ್ಗ 29-21, ಚಿಕ್ಕಮಗಳೂರು 26-19, ದಾವಣಗೆರೆ 29-22, ಶಿವಮೊಗ್ಗ 29-22, ಕೊಡಗು 24-18

ತುಮಕೂರು 28-21, ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 28-21, ಧಾರವಾಡ 28-21, ಹಾವೇರಿ 29-22, ಹುಬ್ಬಳ್ಳಿ 29-22, ಬೆಳಗಾವಿ 27-21, ಗದಗ 30-22, ಕೊಪ್ಪಳ 31-23, ವಿಜಯಪುರ 30-23, ಬಾಗಲಕೋಟ 31-23 , ಕಲಬುರಗಿ 32-23, ಬೀದರ್ 30-22, ಯಾದಗಿರಿ 32-24, ರಾಯಚೂರ 32-23 ಮತ್ತು ಬಳ್ಳಾರಿ 32-23

Heavy rains in Ramanagara Peoples lives are disrupted across the district vehicles submerged rain damage observed by CM Minister
ರಾಮನಗರದಲ್ಲಿ ಮಳೆ


ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ

ಮತ್ತೊಂದೆಡೆ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಭಗಂಡೇಶ್ವರ ದೇವಾಲಯದ ಆವರಣದವರೆಗೆ ನೀರು ಪ್ರವೇಶಿಸಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಭಾಗಮಂಡಲ ಮಡಿಕೇರಿ ರಸ್ತೆಯ ಮೇಲೆಯೂ ನೀರು ಹರಿಯುತ್ತಿದೆ.

ಇದನ್ನೂ ಓದಿ :  Bengaluru Rains: ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚನ್ನಪಟ್ಟಣದಲ್ಲಿ ಮುಂದುವರಿದ ಮಳೆ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿಯೂ ಮಳೆ ಮುಂದುವರಿದಿದೆ. ನಗರದ ಶೇರು ಹೋಟೆಲ್ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಜಲಾವೃತ ರಸ್ತೆಯಲ್ಲಿಯೇ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ನಸುಕಿನ ಜಾವದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು, ಹಬ್ಬಕ್ಕೆ ಊರಿಗೆ ತೆರಳುತ್ತಿದ್ದವರು ನಡುರಸ್ತೆಯಲ್ಲಿಯೇ ಸಿಲುಕಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿರುವವರು ತಮ್ಮ ಪ್ರಯಾಣ ಮುಂದೂಡುವುದು ಒಳ್ಳೆಯದು.

Heavy rains in Ramanagara Peoples lives are disrupted across the district vehicles submerged rain damage observed by CM Minister
ರಾಮನಗರದಲ್ಲಿ ಪ್ರವಾಹ


ಕೋಡಿ ಬಿದ್ದ ಕೆರೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆಗ್ತಿದೆ. ಮಂಚೇನಹಳ್ಳಿಯ ಕೆರೆಯ ಕೋಡಿ ಬಿದ್ದ ಪರಿಣಾಮ ಮಂಚೇನಹಳ್ಳಿ- ನಾಮಗೊಂಡ್ಲು ಮಾರ್ಗದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮಳೆರಾಯನ ಅಬ್ಬರಕ್ಕೆ ಕೆರೆ ಕುಂಟೆಗಳು ತುಂಬಿದ್ದವು, ಯುವಕರು ಮೀನು ಹಿಡಿಯುವ ದೃಶ್ಯಗಳು ಕಂಡು ಬಂದಿವೆ.

ಯಾದಗಿರಿಯಲ್ಲಿ ಕೆಳ ಹಂತದ ಸೇತುವೆಗಳು ಜಲಾವೃತ

ಯಾದಗಿರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದ್ದು, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಶಹಾಪುರನಲ್ಲಿ 10 ಕ್ಕೂ ಹೆಚ್ಚು ಅಂಗಡಿಯೊಳಗೆ ಮಳೆ ನೀರು ನುಗ್ಗಿದ ಪರಿಣಾಮ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚರಂಡಿಯನ್ನು ಸ್ವಚ್ಛತೆ ಮಾಡದ ಕಾರಣ ನೀರು ಅಂಗಡಿಯೊಳಗೆ ನುಗ್ಗಿದೆ. ನಗರಸಭೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:  Ramanagara: ಈ ಕಡೆ ಬಾ ಕುಮಾರಣ್ಣ, ಮಳೆ ಹಾನಿ ಪರಿಶೀಲನೆ ವೇಳೆ ಮುನಿಸು ಮರೆತು ಒಂದಾದ ಜನನಾಯಕರು!

ರಸ್ತೆಯಲ್ಲಿ ಮುಳುಗಿ ನಿಂತ ವಾಹನಗಳು

ಮಹಾಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರುನಿಂತ ಪರಿಣಾಮ ಹಲವು ವಾಹನಗಳು ಮುಳುಗಡೆಯಾಗಿದ್ದು ಬೆಂಗಳೂರು-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಬೆಳೆ 259 ಹೆಕ್ಟೇರ್ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳು 221 ಹೆಕ್ಟೇರ್ ಹಾಳಾಗಿದೆ.
Published by:Mahmadrafik K
First published: