Karnataka Weather Report: ರಾಜ್ಯದಲ್ಲಿ ಇಂದೂ ಸೇರಿದಂತೆ ಎರಡು ದಿನ ಜೋರು ಮಳೆ ಸುರಿಯಲಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳಲ್ಲಿ ಸೆಪ್ಟೆಂಬರ್ 3ರವರೆಗೂ ವರ್ಷಧಾರೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಳೆರಾಯ (Karnataka Rains) ಶಾಂತವಾಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವರುಣನ (Heavy Rainfall) ಅಬ್ಬರ ಹೆಚ್ಚಾಗುತ್ತಲೇ ಇದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜಲರಾಶಿಯೇ ಕಾಣುತ್ತಿದೆ. ಪರಿಣಾಮ ರಾಜ್ಯದ ಎಲ್ಲಾ ಜಲಾಶಯಗಳು (Dams) ಭರ್ತಿಯಾಗಿ, ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಅಂಡರ್ಪಾಸ್ಗಳು (Underpass) ಜಲಾವೃತಗೊಂಡಿವೆ. ಕೆರೆ (Lake) ಕೋಡಿಗಳು ಒಡೆದ ಪರಿಣಾಮ ಕೃಷಿ ಜಮೀನುಗಳು ಜಲಾವೃತಗೊಂಡು ಬೆಳೆಗಳು (Crops) ನಾಶವಾಗಿವೆ.
ಎಲ್ಲೆಲ್ಲಿ ಇಂದು ಭಾರೀ ಮಳೆ?
ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದೂ ಮಳೆ!
ಇನ್ನೂ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇ ಏನಿಲ್ಲ. ಈ ಬಾರಿ ಹೊಸ ಏರಿಯಾಗಳು ಜಲಾವೃತಗೊಂಡಿವೆ. ಈ ವರ್ಷ 209 ವಾರ್ಡ್ಗಳನ್ನು ಡೇಂಜರ್ ಝೋನ್ ಎಂದು ಬಿಬಿಎಂಪಿ ಗುರುತಿಸಿತ್ತು. ಆದ್ರೆ ಕೆರೆಯ ಕೋಡಿಗಳು ಬಿದ್ದ ಪರಿಣಾಮ ಪ್ರತಿಷ್ಠಿತ ಕಾಲೋನಿಗಳೆಲ್ಲಾ ಜಲಾವೃತಗೊಳ್ಳುತ್ತಿವೆ. ಬೆಂಗಳೂರಿನಲ್ಲಿ ಪ್ರವಾಹದ ಆತಂಕ ಇದೆ. ಈ ವಾರಾಂತ್ಯದವರೆಗೂ ಸಂಜೆಯ ಬಳಿಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ವರುಣನ ಒಂದೊಂದು ಹನಿಗೂ ಆತಂಕ, ಭಯದಲ್ಲಿ ಜನರು; 1998ರ ಬಳಿಕ ಬೆಂಗಳೂರಿನಲ್ಲಿ ದಾಖಲೆ ಮಳೆ
ಕರಾವಳಿಯಲ್ಲೂ ವರುಣನ ಅಬ್ಬರ
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು ಮತ್ತು ಮೈಸೂರಿನಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಸಿಡಿಲಿಗೆ ಇಬ್ಬರು ಬಲಿ!
ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಶೋಕ ಊಫ್‌ರ್ ಈಶ್ವರಯ್ಯ ಈರಯ್ಯ ಶಿವಪ್ಪಯನಮಠ(56), ಚಿಕ್ಕನರಗುಂದ ಗ್ರಾಮದ ಮಾಲಾ ಮಲ್ಲಿಕಾರ್ಜುನ ಕೋನಣ್ಣವರ(31) ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ಲ ಗ್ರಾಮದಲ್ಲಿ ಗ್ರಾಪಂ ಸದಸ್ಯ ವಿರೂಪಾಕ್ಷಪ್ಪ ದ್ಯಾಮಪ್ಪ ಧಾರವಾಡ (48) ಸಿಡಿಲಿಗೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಕ್ಲಾಸ್ ನಡೆಯುತ್ತಿದ್ದಾಗಲೇ ಶಾಲೆಗೆ ನುಗ್ಗಿದ ಮಳೆನೀರು, ವಿದ್ಯಾರ್ಥಿಗಳು ಶಿಕ್ಷಕರ ಪರದಾಟ!
ಜಿಲ್ಲಾವಾರು ಹವಾಮಾನ ವರದಿ
ಬೆಂಗಳೂರು 28-20, ಮಂಗಳೂರು 28-24, ಶಿವಮೊಗ್ಗ 29-21, ಬೆಳಗಾವಿ 29-21, ಮೈಸೂರು 29-21, ಮಂಡ್ಯ 29-21, ಕೊಡಗು 25-18, ರಾಮನಗರ 29-21,
, ಹಾಸನ 27-19, ಚಾಮರಾಜನಗರ 29-21, ಚಿಕ್ಕಬಳ್ಳಾಪುರ 28-20,
ಕೋಲಾರ 28-21, ತುಮಕೂರು 28-21, ಉಡುಪಿ: 29-24, ಕಾರವಾರ: 29-25,
ಚಿಕ್ಕಮಗಳೂರು 27-19, ದಾವಣಗೆರೆ 29-22, ಚಿತ್ರದುರ್ಗ 29-21, ಹಾವೇರಿ 30-22,
ಬಳ್ಳಾರಿ 32-23, ಗದಗ 30-22, ಕೊಪ್ಪಳ 31-23, ರಾಯಚೂರು 32-24, ಯಾದಗಿರಿ 32-24, ವಿಜಯಪುರ 31-23, ಬೀದರ್ 31-22, ಕಲಬುರಗಿ 32-23, ಬಾಗಲಕೋಟೆ 32-23.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ