• Home
  • »
  • News
  • »
  • state
  • »
  • Karnataka Weather Report: ರಾಜ್ಯದ ಈ ಭಾಗದಲ್ಲಿ 2 ದಿನ ಯೆಲ್ಲೋ ಅಲರ್ಟ್; ಗುಡುಗು, ಸಿಡಿಲು ಸಹಿತ ಮಳೆ

Karnataka Weather Report: ರಾಜ್ಯದ ಈ ಭಾಗದಲ್ಲಿ 2 ದಿನ ಯೆಲ್ಲೋ ಅಲರ್ಟ್; ಗುಡುಗು, ಸಿಡಿಲು ಸಹಿತ ಮಳೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಪ್ಪಳ ಜಿಲ್ಲೆಯಲ್ಲಿ ವರಣನ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿತ್ತು. ಕೃಷಿ ಕೆಲಸಕ್ಕೆ ಹೋಗಿ ವಾಪಸ್‌ ಮನೆಗೆ ಮರಳುವಾಗ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಹೋಗಿದ್ದಾರೆ.

  • Share this:

Karnataka Weather Report: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ನಿನ್ನೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾದ್ರೆ (Rainfall), ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಗುಡುಗು-ಸಿಡಿಲು ಸಹಿತ (Thundering And Lighting) ವರುಣರಾಯ ಅಬ್ಬರಿಸಿದ್ದಾನೆ. ಕೆಲವು ಭಾಗಗಳಲ್ಲಿ ಪ್ರಾಣಹಾನಿ ಸಹ ಉಂಟಾಗಿದೆ. ಇಂದಿನಿಂದ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ (Yellow Alert) ಪ್ರಕಟಿಸಲಾಗಿದೆ. ಇನ್ನುಳಿದಂತೆ ಕರಾವಳಿ ವ್ಯಾಪ್ತಿ ಮತ್ತು ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಹಾವೇರಿ, ದಾವಣಗೆರೆ ಭಾಗದಲ್ಲಿ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಶನಿವಾರ ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದು, ವೀಕೆಂಡ್ ಮಜಾ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಬೆಂಗಳೂರಿಗರೇ ಮನೆಯಲ್ಲಿಯೇ ಬಂಧಿಯಾಗಿದ್ದರು .


ಇಂದು ಸಹ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿದ್ದು, ಮಳೆಯಾಗುವ ನಿರೀಕ್ಷೆಗಳಿವೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 24 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.


ಮೆಜೆಸ್ಟಿಕ್, ಕಾರ್ಪೋರೇಷನ್, ವಿಧಾನಸೌಧ, ಚಂದ್ರಾಲೇಔಟ್, ಆರ್ ಟಿ ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ರಾತ್ರಿ ಮನೆಗೆ ಹೋಗಲು ಜನ ಪರದಾಡಿದರು.


ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು: 24-19, ದಾವಣಗೆರೆ: 28-21, ಚಿತ್ರದುರ್ಗ: 28-20, ಮಂಗಳೂರು: 28-24, ಶಿವಮೊಗ್ಗ: 28-21, ಕಾರವಾರ: 29-25, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 26-19, ಕೋಲಾರ: 28-20, ಬಳ್ಳಾರಿ: 31-22, ಬೆಂಗಳೂರು ಗ್ರಾಮಾಂತರ: 24-19, ಗದಗ: 29-21, ತುಮಕೂರು: 27-19,


ಮೈಸೂರು: 28-20, ಮಂಡ್ಯ: 28-21, ಹಾಸನ: 26-19, ಉಡುಪಿ: 29-24, ಚಿಕ್ಕಮಗಳೂರು: 25-18, ಹಾವೇರಿ: 29-21, ಬೆಳಗಾವಿ: 27-20, ಮಡಿಕೇರಿ: 23-17, ರಾಮನಗರ: 31-22, ಕೊಪ್ಪಳ: 30-22, ಬಾಗಲಕೋಟೆ: 31-22, ಬೀದರ್: 29-21, ಕಲಬುರಗಿ: 32-22, ರಾಯಚೂರು: 32-23, ಯಾದಗಿರಿ: 33-23 ಮತ್ತು ವಿಜಯಪುರ: 31-22


Karnataka Weather Report 2nd October 2022 mrq
ಸಾಂದರ್ಭಿಕ ಚಿತ್ರ


ಮನೆ ಗೋಡೆ ಕುಸಿದು ತಾಯಿ ಮಗ ಸಾವು


ಬೆಳಗಾವಿಯಲ್ಲಿ ಭಾರೀ‌ ಮಳೆಗೆ ಮನೆ ಗೋಡೆ ಕುಸಿದು ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಪ್ರಜ್ವಲ್​ ಬಾಗಿಲದ, ಯಲ್ಲವ್ವ ಬಾಗಿಲದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.


ಇದನ್ನೂ ಓದಿ:  Belagavi: ಮಾನವೀಯತೆ ಮರೆತ ಉಪ ನೋಂದಣಾಧಿಕಾರಿ; ಸ್ಟ್ರೆಚರ್​ನಲ್ಲೇ ಕಚೇರಿಗೆ ಬಂದ ವೃದ್ಧೆ!


ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು!


ಕೊಪ್ಪಳ ಜಿಲ್ಲೆಯಲ್ಲಿ ವರಣನ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿತ್ತು. ಕೃಷಿ ಕೆಲಸಕ್ಕೆ ಹೋಗಿ ವಾಪಸ್‌ ಮನೆಗೆ ಮರಳುವಾಗ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಹೋಗಿದ್ದಾರೆ.


32 ವರ್ಷದ ಗಿರಿಜಾ ಮಾಲಿಪಾಟೀಲ್, 40 ವರ್ಷದ ಭುವನೇಶ್ವರಿ ಪೊಲೀಸ್ ಪಾಟೀಲ್ 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್ 19 ವರ್ಷದ ವೀಣಾ ಮಾಲಿಪಾಟೀಲ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.


Karnataka Weather Report 2nd October 2022 mrq
ಸಾಂದರ್ಭಿಕ ಚಿತ್ರ


ನಾಪತ್ತೆಯಾದವರ ಶೋಧಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆ ಬರುತ್ತಿರುವ ಕಾರಣ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ


ಲಕ್ಷ್ಮೇಶ್ವರ ತಾಲೂಕಿನಲ್ಲಿ ದೊಡ್ಡೂರು ಗ್ರಾಮದಲ್ಲಿ ಭಾರೀ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಚಾಲಕನೊಬ್ಬ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಚಾಲಕನ ಹುಚ್ಚು ಸಾಹಸಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ.


ಸಿಡಿಲ ಬಡಿದು 23 ವರ್ಷದ ಯುವಕ ಸಾವು


ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು 23 ವರ್ಷದ ಕೋಟ್ರೇಶ್ ಸಾವನ್ನಪ್ಪಿದ್ದಾನೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು,  ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಗಾಯಾಳು ಅನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.


ಇದನ್ನೂ ಓದಿ: Health Kiosks: ಉದ್ಘಾಟನೆ ಮಾಡಿದ್ದೊಂದೇ ಭಾಗ್ಯ, ಜನರ ಬಳಕೆಗೆ ಸಿಗದೇ ತುಕ್ಕು ಹಿಡಿಯುತ್ತಿವೆ ಹೆಲ್ತ್ ಘಟಕಗಳು!


ಯುವಕರು ನೀರುಪಾಲು


ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋಗಿದ್ದ ಇಬ್ಬರು ಯುವಕರು ಕಣ್ಮರೆಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂ ಬಳಿ  ರೀಲ್ಸ್ ಮಾಡಲು ಹೋಗಿ ಇಬ್ಬರು ಯುವಕರು ನೀರಲ್ಲಿ ಮುಳುಗಿದ್ದಾರೆ. 24 ವರ್ಷದ ಪ್ರಕಾಶ್ , 25 ವರ್ಷದ ಪವನ್ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನೀರಲ್ಲಿ ಯುವಕರು ಮುಳುಗಿದ್ರು. ಇವತ್ತು ಓರ್ವನ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಮತ್ತೊಂದು  ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.

Published by:Mahmadrafik K
First published: