Karnataka Weather Report: ಬೆಳಗ್ಗೆಯೇ ಶುರುವಾದ ಮಳೆ, ಕೋಡಿ ಬೀಳ್ತಿರೋ ಕೆರೆಗಳು; ಜನರಿಗೆ ವರುಣಾಘಾತ

ಸೈಕಲ್ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕರ ಪೈಕಿ ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ನಡೆದಿದೆ. ನಂದೀಶ್ ಹರಿಜನ  (13) ಮೃತ ಬಾಲಕ.  ಮೃತ ನಂದೀಶ್ ಏಳನೇ ತರಗತಿಯಲ್ಲಿ ಓದುತ್ತಿದ್ದನು.

ಸೇತುವೆ ಮುಳುಗಡೆ ಭೀತಿ

ಸೇತುವೆ ಮುಳುಗಡೆ ಭೀತಿ

  • Share this:
Karnataka Weather Report: ಇಂದು ರಾಜ್ಯದಲ್ಲಿ ಬೆಳಗ್ಗೆಯಿಂದಲೇ ಮಳೆರಾಯನ (Rainfall) ಅಬ್ಬರ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ (Bengaluru Rains) ಮಳೆ ಶುರುವಾಗಿದೆ. ಇನ್ನುಳಿದಂತೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಬತ್ತಿ ಹೋಗಿದ್ದ ಎಷ್ಟೋ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಕೋಡಿ ಹರಿದ ಕಾರಣ ಕೃಷಿ ಜಮೀನು ಮತ್ತು ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೊಪ್ಪಳದಲ್ಲಿ (Koppal) ಬಾಲಕನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮಳೆ ಇರಲಿದ್ದು,  ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 27-20, ಮೈಸೂರು 27-21, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 25-19, ಕೋಲಾರ 27-19, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 25-19, ದಾವಣಗೆರೆ 28-22, ಶಿವಮೊಗ್ಗ 28-21, ಕೊಡಗು 24-18, ತುಮಕೂರು 27-21, ಉಡುಪಿ 29-24

ಮಂಗಳೂರು 28-24, ಉತ್ತರ ಕನ್ನಡ 29-22, ಧಾರವಾಡ 29-21, ಹಾವೇರಿ 29-22, ಹುಬ್ಬಳ್ಳಿ 29-21, ಬೆಳಗಾವಿ 28-21, ಗದಗ 29-22, ಕೊಪ್ಪಳ 26-20, ವಿಜಯಪುರ 31-23, ಬಾಗಲಕೋಟ 31-23 , ಕಲಬುರಗಿ 31-23, ಬೀದರ್ 29-22, ಯಾದಗಿರಿ 31-24, ರಾಯಚೂರ 31-23 ಮತ್ತು ಬಳ್ಳಾರಿ 30-23

ಇದನ್ನೂ ಓದಿ:  Jaggesh Tweet: ನಟ ಜಗ್ಗೇಶ್ ಮನೆ ಜಲಾವೃತ; ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ರಾಜ್ಯಸಭಾ ಸದಸ್ಯ

ಅಧಿಕಾರಿಗಳ ಜೊತೆ ಸಿಎಂ ಚರ್ಚೆ

ರಾಜ್ಯದಲ್ಲಿ ಮಳೆಯಿಂದಾಗಿ ಹಾನಿ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಅವರು ಗೃಹ ಕಚೇರಿ ಕೃಷ್ಣಾದಿಂದ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಡಿಸಿಗಳು, ಸಿಇಒ ಗಳು ಹಾಗೂ ಎಸ್​ಪಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಮಳೆ ಹೆಚ್ಚಾಗಿ ಸುರಿಯುತ್ತಿರುವ 15 ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆಯಿಂದಾಗಿ ಆಗಿರುವ ಅನಾಹುತ, ಅಧಿಕಾರಿಗಳು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು.

ಅನಿತಾ ಕುಮಾರಸ್ವಾಮಿ ಭೇಟಿ

ಕಳೆದ ಎರಡು ದಿನಗಳಿಂದ ರಾಮನಗರದಲ್ಲಿ ಮಳೆಯಾಗುತ್ತಿದೆ. ಟಿಪ್ಪು ನಗರ, ಆರ್ಕೇಶ್ವರ ಕಾಲೋನಿಗೆ ಶಾಸಕ ಅನಿತಾ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೀರಹಳ್ಳ ತುಂಬಿ ಟಿಪ್ಪುನಗರ, ಅರ್ಕಾವತಿ ಬಡಾವಣೆಗಳಿಗೆ ಮಳೆ ನೀರು ನುಗ್ಗಿತ್ತು.

ಹಳ್ಳಕ್ಕೆ ಬಿದ್ದು ಬಾಲಕ ಸಾವು

ಸೈಕಲ್ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕರ ಪೈಕಿ ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ನಡೆದಿದೆ. ನಂದೀಶ್ ಹರಿಜನ  (13) ಮೃತ ಬಾಲಕ.  ಮೃತ ನಂದೀಶ್ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಸೈಕಲ್​ನಲ್ಲಿದ್ದ ತಮ್ಮ ಮಲ್ಲಿಕಾರ್ಜುನ್ ಈಜಿ ದಡ ಸೇರಿದ್ದಾನೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಅಣ್ಣ ತಮ್ಮ ಜೊತೆಯಾಗಿ ಆಟ ಆಡಲು ಹಳ್ಳಕ್ಕೆ ಹೋಗಿದ್ದರು. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ನಂದೀಶ್ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕಾರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಡಿ ಬಿದ್ದ ಕೆರೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆಗ್ತಿದೆ. ಮಂಚೇನಹಳ್ಳಿಯ ಕೆರೆಯ ಕೋಡಿ ಬಿದ್ದ ಪರಿಣಾಮ ಮಂಚೇನಹಳ್ಳಿ- ನಾಮಗೊಂಡ್ಲು ಮಾರ್ಗದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮಳೆರಾಯನ ಅಬ್ಬರಕ್ಕೆ ಕೆರೆ ಕುಂಟೆಗಳು ತುಂಬಿದ್ದವು, ಯುವಕರು ಮೀನು ಹಿಡಿಯುವ ದೃಶ್ಯಗಳು ಕಂಡು ಬಂದಿವೆ.

ಯಾದಗಿರಿಯಲ್ಲಿ ಕೆಳ ಹಂತದ ಸೇತುವೆಗಳು ಜಲಾವೃತ

ಯಾದಗಿರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದ್ದು, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಶಹಾಪುರನಲ್ಲಿ 10 ಕ್ಕೂ ಹೆಚ್ಚು ಅಂಗಡಿಯೊಳಗೆ ಮಳೆ ನೀರು ನುಗ್ಗಿದ ಪರಿಣಾಮ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚರಂಡಿಯನ್ನು ಸ್ವಚ್ಛತೆ ಮಾಡದ ಕಾರಣ ನೀರು ಅಂಗಡಿಯೊಳಗೆ ನುಗ್ಗಿದೆ. ನಗರಸಭೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:  Rain Effect: ಕೋಲಾರದಲ್ಲಿ ಮಳೆ ಆರ್ಭಟಕ್ಕೆ ಫಾರಂನಲ್ಲಿದ್ದ 10 ಸಾವಿರ ಕೋಳಿ ನೀರುಪಾಲು!

ವೃದ್ಧೆ, ಬೈಕ್ ಸವಾರ ಬಚಾವ್

ಇನ್ನೂ ರಾಯಚೂರು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ರಕ್ಷಣೆ ಮಾಡಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗುಡದನಾಳದಲ್ಲಿ ಈ ಘಟನೆ ನಡೆದಿದೆ.
Published by:Mahmadrafik K
First published: