• Home
  • »
  • News
  • »
  • state
  • »
  • Karnataka Weather Report: ರಾಜ್ಯದಲ್ಲಿ ಮೈಕೊರೆಯೋ ಚಳಿ, ಅವಧಿಗೂ ಮುನ್ನ ಎಂಟ್ರಿ ಕೊಟ್ಟ ಚಳಿಗೇನು ಕಾರಣ?

Karnataka Weather Report: ರಾಜ್ಯದಲ್ಲಿ ಮೈಕೊರೆಯೋ ಚಳಿ, ಅವಧಿಗೂ ಮುನ್ನ ಎಂಟ್ರಿ ಕೊಟ್ಟ ಚಳಿಗೇನು ಕಾರಣ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Weather Report 28 October 2022: ಬೆಂಗಳೂರು ದಾಖಲೆ ಮಟ್ಟದ ತಾಪಮಾನ ಕುಸಿತವನ್ನು ದಾಖಲಿಸಿದೆ. ಅಂದರೆ ಅಂದು ರಾತ್ರಿ ನಗರದ ತಾಪಮಾನವು 15.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಕಳೆದ ಎರಡು-ಮೂರು ದಿನಗಳಿಂದ ರಾಜ್ಯದಲ್ಲಿ (State) ಚಳಿಯ ಅನುಭವವಾಗತೊಡಗಿದ್ದು ಇದು ಚಳಿಗಾಲದ ಆರಂಭ ಎಂದೇ ಅನಿಸತೊಡಗಿದೆ. ಆದರೆ, ಇದು ಅಸಲಿ ಚಳಿಗಾಲ ಅಲ್ಲ, ಬದಲಿಗೆ ಒಂದು ರೀತಿಯ ಫಾಲ್ಸ್ ವಿಂಟರ್ (Winter) ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಜನರು ರಾತ್ರಿಯ ಹೊತ್ತಿನಲ್ಲಿ ತಾಪಮಾನದಲ್ಲಿ (Weather) ಭಾರಿ ಕುಸಿತವಾಗುತ್ತಿರುವುದನ್ನು ಅನುಭವಿಸುತ್ತಿದ್ದು ಇದು ಚಳಿಗಾಲದ ಆರಂಭವೆಂದೇ ಅಂದುಕೊಂಡಿದ್ದಾರೆ. ಆದರೆ, ಇದು ನಿಜಕ್ಕೂ ಆ ರೀತಿಯಲ್ಲ, ಬದಲಾಗಿ ಇದು 'ಫಾಲ್ಸ್ ವಿಂಟರ್' (Winter Fall) ಎಂದು ಹೇಳಿದ್ದಾರೆ.


ಅಕ್ಟೋಬರ್ 25, 2022 ರಂದು ಬೆಂಗಳೂರು ದಾಖಲೆ ಮಟ್ಟದ ತಾಪಮಾನ ಕುಸಿತವನ್ನು ದಾಖಲಿಸಿದೆ. ಅಂದರೆ ಅಂದು ರಾತ್ರಿ ನಗರದ ತಾಪಮಾನವು 15.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಅದೇ 26 ರಂದು ಈ ಪ್ರಮಾಣ 15.5 ಡಿಗ್ರಿ ಸೆಲ್ಶಿಯಸ್ ಇತ್ತು. ಇದೇ ಸಂದರ್ಭದಲ್ಲಿ ಬೆಂಗಳೂರಿನ HAL ಪ್ರದೇಶದಲ್ಲಿ ತಾಪಮಾನ 15 ಡಿಗ್ರಿ ಎಂದು ದಾಖಲಾಗಿದೆ. ಇತಿಹಾಸವನ್ನು ಗಮನಿಸಿದರೆ ಅಕ್ಟೋಬರ್ 31, 1974 ರಲ್ಲಿ ಬೆಂಗಳೂರಿನಲ್ಲಿ 13.2 ಡಿಗ್ರಿ ದಾಖಲಾಗಿತ್ತು. ಅದನ್ನು ಹೊರತುಪಡಿಸಿದರೆ ಅಕ್ಟೋಬರ್ 30, 2018 ರಂದು 16.6ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ, ಯೂ ಟರ್ನ್ ಹೊಡೆದ ಕುಟುಂಬ ಸದಸ್ಯರು!


ಅಂದರೆ, ಬಹು ಸಮಯದ ನಂತರ ಬೆಂಗಳೂರಿನಲ್ಲಿ ಈ ರೀತಿ ತಾಪಮಾನವು ಗಮನಾರ್ಹವಾಗಿ ಅಕ್ಟೋಬರ್ ಸಮಯದಲ್ಲೇ ಕುಸಿದಿರುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಭಾಗಗಳೂ ಸಹ ಕನಿಷ್ಠ ತಾಪಮಾನವನ್ನು ದಾಖಲು ಮಾಡಿದ್ದು ಬಾಗಲಕೋಟೆ ಹಾಗೂ ಬೀದರ್ ಗಳಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಶಿಯಸ್ ದಾಖಲಾಗಿರುವುದಾಗಿ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ಹವಾಮಾನ ಇಲಾಖೆಯ ಅಭಿಪ್ರಾಯ


ಈ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಲಯದ ನಿರ್ದೇಶಕರಾಗಿರುವ ಗೀತಾ ಅಗ್ನಿಹೋತ್ರಿ ಅವರು ಹೇಳುವಂತೆ, ಇದು ಚಳಿಗಾಲದ ಮುನ್ಸೂಚನೆ ಅಥವಾ ಆರಂಭವಲ್ಲ. ಬದಲಾಗಿ ಇದೊಂದು ಹಾವಾಮಾನ ವೈಪರಿತ್ಯದ ತಾತ್ಕಾಲಿಕ ಪರಿಣಾಮವಾಗಿದೆ. ಪ್ರಸ್ತುತ ಉದ್ಭವವಾಗಿರುವ ಸಿತ್ರಂಗ್ ಎಂಬ ಸೈಕ್ಲೊನ್ ವಾತಾವರಣದಲ್ಲಿರುವ ಆರ್ದ್ರತೆಯನ್ನು ಹೀರಿಕೊಳ್ಳುತ್ತಿರುವ ಪರಿಣಾಮದಿಂದಾಗಿ ಈ ಚಳಿಯ ಅನುಭವವಾಗುತ್ತಿರುವುದಾಗಿ ಅಗ್ನಿಹೋತ್ರಿ ಅವರು ದೃಢಪಡಿಸಿದ್ದಾರೆ.


ಇದನ್ನೂ ಓದಿ: ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಆಯ್ಕೆ!


ಮುಂದುವರೆಯುತ್ತ ಅವರು, ಈ ಸೈಕ್ಲೋನ್ ಕಾರಣದಿಂದಾಗಿಯೇ ಜನರು ಕಳೆದ ಎರಡ್ಮೂರು ದಿನಗಳಿಂದ ರಾತ್ರಿಯ ಸಮಯದಲ್ಲಿ ವಿಪರೀತ ಚಳಿ ಅನುಭವಿಸುತ್ತಿದ್ದು ದಿನದ ಸಮಯ ಹೆಚ್ಚಿನ ಉಷ್ಣಾಂಶ ಹಾಗೂ ಒಣತ್ವವನ್ನು ಅನುಭವಿಸುತ್ತಿರುವುದಾಗಿ ಗೀತಾ ಹೇಳಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದ ಹಲವು ಭಾಗಗಳು ಕಳೆದ ಒಂದು ವಾರದಿಂದ ರಾತ್ರಿಯ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಾಣುತ್ತಿದ್ದು ಹವಾಮಾನ ಇಲಾಖೆಯು ಈ ಸೈಕ್ಲೊನ್ ಪರಿಣಾಮದಿಂದಾಗಿ ನಾಲ್ಕು ದಿನಗಳ ನಂತರ ಹಲವೆಡೆ ಮಳೆಯಾಗುವ ಸಾಧ್ಯತೆಯನ್ನೂ ಸಹ ಸೂಚಿಸಿರುವುದಾಗಿ ಗೀತಾ ಹೇಳಿದ್ದಾರೆ.


ಸದ್ಯ ಮಳೆ ತರಿಸುವಂತಹ ಮೋಡಗಳ ರಚನಾ ವ್ಯವಸ್ಥೆಯು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿದ್ದು ತಮಿಳುನಾಡಿನಲ್ಲಿ ಈಗಾಗಲೇ ಮಳೆ ಆಗುತ್ತಿದೆ. ಹಾಗಾಗಿ ಅಕ್ಟೋಬರ್ 29 ರಿಂದ ಈಶಾನ್ಯ ಮಳೆ ಮಾರುತಗಳ ಆಗಮನವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಮತ್ತೆ ವರುಣನ ಆರ್ಭಟ ಉಂಟಾಗುವ ಎಲ್ಲ ಸಾಧ್ಯತೆಗಳು ಇವೆ ಎಂಬುದಾಗಿ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.


ಈಗಾಗಲೇ ಕರ್ನಾಟಕದಲ್ಲಿ ಈ ಬಾರಿ ವಾಡಿಕೆಗಿಂತ ತುಸು ಹೆಚ್ಚೇ ಮಳೆಯಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಹಿಂದೆಂದೂ ಕಂಡು ಕೇಳರಿಯದಂತಹ ಅಗಾಧ ಪ್ರಮಾಣದ ಮಳೆಯನ್ನನುಭವಿಸಿದ್ದು ಜನರು ಪರದಾಡಿದ್ದಾರೆ. ಈಗತಾನೇ ಎಲ್ಲವೂ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ಈ ನಕಲಿ ಚಳಿಗಾಲದ ಬಾಧೆ ಒಂದೆಡೆಯಾದರೆ ಮತ್ತೊಮ್ಮೆ ಮಳೆಯ ಕಾಟ ಅನುಭವಿಸಬೇಕಾದ ಸಂದರ್ಭ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ ಎಂದರೂ ತಪ್ಪಿಲ್ಲ.

First published: