Karnataka Weather Report: ರಾಜ್ಯದಲ್ಲಿ ವರುಣನ ಕಣ್ಣಾಮುಚ್ಚಾಲೆ; ಜಡಿ ಮಳೆಗೆ ಜನರು ಹೈರಾಣು

Karnataka Weather Report: ಕರಾವಳಿ, ಮಲೆನಾಡು ಮತ್ತು  ದಕ್ಷಿಣ ಒಳನಾಡಿನಲ್ಲಿ ಚದುರಿದ ರೀತಿಯ ಮಳೆಯಾಗುವ ಸಾಧ್ಯತೆ ಇದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿ ವರುಣದೇವ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಂದು ಕ್ಷಣ ಬಿಸಿಲು ಇದ್ರೆ, ಮರುಕ್ಷಣವೇ ಮಳೆ (Rain) ಆರಂಭವಾಗುತ್ತಿದೆ. ಬುಧವಾರ ಸಂಜೆ ರಾಜಧಾನಿ ಬೆಂಗಳೂರಿನಲ್ಲಿ (Bengaluru Rain) ಜೋರು ಮಳೆಯಾಗಿದೆ. ಮತ್ತೆ ರಾತ್ರಿ ಮಳೆ ಆರಂಭಗೊಂಡಿತ್ತು. ಇಂದು ಬೆಳಗ್ಗೆ ಬೆಂಗಳೂರಿನಲ್ಲಿಯೂ ಮೋಡ ಕವಿದ ವಾತಾವರಣ (Cloudy Weather )ಇರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇತ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆಯ ಸಿಂಚನ ಇರಲಿದೆ. ಕರಾವಳಿ, ಮಲೆನಾಡು ಮತ್ತು  ದಕ್ಷಿಣ ಒಳನಾಡಿನಲ್ಲಿ ಚದುರಿದ ರೀತಿಯ ಮಳೆಯಾಗುವ ಸಾಧ್ಯತೆ ಇದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-21, ಮೈಸೂರು 30-21, ಚಾಮರಾಜನಗರ 30-22, ರಾಮನಗರ 31-22, ಮಂಡ್ಯ 31-22, ಬೆಂಗಳೂರು ಗ್ರಾಮಾಂತರ 29-21, ಚಿಕ್ಕಬಳ್ಳಾಪುರ 29-21, ಕೋಲಾರ 30-21, ಹಾಸನ 28-20, ಚಿತ್ರದುರ್ಗ 29-22, ಚಿಕ್ಕಮಗಳೂರು 27-19, ದಾವಣಗೆರೆ 31-22, ಶಿವಮೊಗ್ಗ 30-22, ಕೊಡಗು 26-18, ತುಮಕೂರು 29-21, ಉಡುಪಿ 30-25

ಮಂಗಳೂರು 29-24, ಉತ್ತರ ಕನ್ನಡ 29-22, ಧಾರವಾಡ 29-22, ಹಾವೇರಿ 31-22, ಹುಬ್ಬಳ್ಳಿ 30-22, ಬೆಳಗಾವಿ 28-21, ಗದಗ 31-23, ಕೊಪ್ಪಳ 31-23, ವಿಜಯಪುರ 30-23, ಬಾಗಲಕೋಟ 31-23 , ಕಲಬುರಗಿ 31-24, ಬೀದರ್ 29-22, ಯಾದಗಿರಿ 32-24, ರಾಯಚೂರ 32-24 ಮತ್ತು ಬಳ್ಳಾರಿ 32-24

ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ   

ಮೋಡ ಮುಸುಕಿದ ವಾತಾವರಣ, ಬೆಳೆಗೆ ಹಳದಿ ರೋಗ

ಕಳೆದ 20 ದಿನಗಳಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಜೊತೆಗೆ ಜಿಟಿ ಜಿಟಿ ಮಳೆಯ ಸಿಂಚನ. 20 ದಿನಗಳಿಂದ ಸೂರ್ಯ ಕಿರಣವಿಲ್ಲದೇ ಬೆಳೆಗಳು ಸಮರ್ಪಕ ರೀತಿಯಲ್ಲಿ ಬೆಳವಣಿಗೆ ಕಂಡಿಲ್ಲ. ಜಿಲ್ಲೆಯಾದ್ಯಂತ ಸುಮಾರು 5% ರಿಂದ 10 ಪ್ರತಿಶತದಷ್ಟು ಹೆಸರು ಬೆಳೆ ನಷ್ಟವಾಗಿದೆ.

ತುಂತುರು ಮಳೆ, ಜೊತೆಗೆ ಮೋಡ ಮುಸುಕಿದ ವಾತಾವರಣದಿಂದಾಗಿ ಹೆಸರು ಬೆಳೆಗೆ ಹಳದಿ ರೋಗದ ಕಾಟ ಶುರುವಾಗಿದೆ. ಈಗಾಗ್ಲೆ ಹೆಸರು ಕಾಯಿ ಬಿಟ್ಟಿದೆ. ಆದ್ರೆ ಅದರೊಳಗಡೆ ಕಾಳುಗಳೆ ಆಗಿಲ್ಲ. ಅಲ್ಲದೇ ಹೆಸರು ಬೆಳೆ  ಸಂಪೂರ್ಣವಾಗಿ ಹಳದಿ ರೋಗಕ್ಕೆ ತುತ್ತಾಗಿ, ಕಪ್ಪು ಬಣ್ಣಕ್ಕೆ ತಿರುಗಿವೆ.

ಉತ್ತರ ಭಾರತದಲ್ಲಿ ಮುಂದಿನ ನಾಲ್ಕು ದಿನ ಮಳೆ ಅಬ್ಬರ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಉಪ ಹಿಮಾಲಯ ಪ್ರದೇಶ ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಮಣಿಪುರ, ಮಿಜೋರಾಂ ಭಾಗಗಳಲ್ಲಿ ಜುಲೈ 30ರವರೆಗೆ ಜೋರು ಮಳೆಯಾಗುವ ಸಾಧ್ಯತೆಗಳಿವೆ.

ಮಡಿಕೇರಿ-ಮಂಗಳೂರು ರಸ್ತೆ ಸಂಚಾರಕ್ಕೆ ಮುಕ್ತ

ಕಳೆದ ವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಉಬ್ಬಿದ ಪರಿಣಾಮ ಮಡಿಕೇರಿ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದರಿ ಬಂದ್ ಆಗಿತ್ತು. ಇದೀಗ ಬುಧವಾರದಿಂದ ಜಿಲ್ಲಾಡಳಿತ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ.

ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದೆಲ್ಲೆಡೆ ಮಳೆ (Heavy Rain) ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ (Falls) ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ ಬಾಗೀನ ಸಹ ಅರ್ಪಿಸಲಾಗುತ್ತಿದೆ. ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ.

ಇದನ್ನೂ ಓದಿ:  Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು ನಿತ್ಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿವೆ.
Published by:Mahmadrafik K
First published: