Karnataka Weather Report: ಮುಂದುವರಿದ ಮಳೆ, ತಗ್ಗು ಪ್ರದೇಶಗಳಿಗೆ ನೀರು; ಇಂದಿನ ಹವಾಮಾನ ವರದಿ ಇಲ್ಲಿದೆ

ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ  ಯಾವುದೇ ಆಲರ್ಟ್​ ಘೋಷಣೆ ಮಾಡಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಒಂದು ಕಡೆ ಮಳೆಯಾಗುತ್ತಿದ್ರೆ (Karnataka Rains), ಮತ್ತೊಂದು ಕಡೆ ಬೇಸಿಗೆಯ (Summer Weather) ವಾತಾವರಣವಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದಿದ್ದ ಮಳೆ (Rainfall) ಆಗಸ್ಟ್ ಮೊದಲ ಮತ್ತು ಎರಡನೇ ವಾರ ಕೊಂಚ ಬ್ರೇಕ್ ನೀಡಿತ್ತು. ಇದೀಗ ಮಳೆ ಮತ್ತೆ ಶುರುವಾಗಿದ್ದು, ಜನರು ಹೈರಾಣು ಆಗುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ  ಶುಕ್ರವಾರ ಬೆಳಗ್ಗೆ ಆರಂಭವಾಗಿದ್ದ ಮಳೆ (Bengaluru Rains), ಕಚೇರಿಗೆ ಹೊರಟಿದ್ದ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗ್ತಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸೂರ್ಯನ ಪ್ರಖರತೆ ಹೆಚ್ಚಿದೆ. ಮಲೆನಾಡು (Malnadu) ಮತ್ತು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ (Western Hills Rains) ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯದ ನದಿಗಳು (Rivers) ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇಂದು ಸಹ ರಾಜ್ಯದಲ್ಲಿ ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ  ಯಾವುದೇ ಆಲರ್ಟ್​ ಘೋಷಣೆ ಮಾಡಿಲ್ಲ. ಇನ್ನು ಬೆಂಗಳೂರಿನ ಸುತ್ತಮುತ್ತ ದೇವನಹಳ್ಳಿ, ನೆಲಮಂಗಲ, ಸರ್ಜಾಪುರ, ಮಾಗಡಿಯಲ್ಲಿಯೂ ಮಳೆ ಸುರಿಯುತ್ತಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 26-19, ಮೈಸೂರು 26-20, ಚಾಮರಾಜನಗರ 26-20, ರಾಮನಗರ 33-26, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 26-19, ಚಿಕ್ಕಬಳ್ಳಾಪುರ 24-18, ಕೋಲಾರ 27-21, ಹಾಸನ 24-19, ಚಿತ್ರದುರ್ಗ 27-21, ಚಿಕ್ಕಮಗಳೂರು 24-19, ದಾವಣಗೆರೆ 28-21, ಶಿವಮೊಗ್ಗ 27-21, ಕೊಡಗು 22-18, ತುಮಕೂರು 27- 20, ಉಡುಪಿ 28-24, ಮಂಗಳೂರು 28-24

ಉತ್ತರ ಕನ್ನಡ 28-21, ಧಾರವಾಡ 28-20, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 22-20, ಗದಗ 28-21, ಕೊಪ್ಪಳ 28-22, ವಿಜಯಪುರ 29-22, ಬಾಗಲಕೋಟ 29-21 , ಕಲಬುರಗಿ 29-23, ಬೀದರ್ 29-22, ಯಾದಗಿರಿ 29-23, ರಾಯಚೂರ 30-23 ಮತ್ತು ಬಳ್ಳಾರಿ 28-22

Karnataka Weather Report 27th August 2022 mrq
ಬಸವಸಾಗರ ಡ್ಯಾಂ


ಇದನ್ನೂ ಓದಿ:  Bhima River: ನದಿಯೊಡಲು ಮಲಿನಗೊಳಿಸುತ್ತಿರುವ ನಗರಸಭೆ: ಚರಂಡಿ ನೀರು ಭೀಮಾನದಿಗೆ!

ಬೆಳಗಾವಿಯ ಕಿತ್ತೂರಿನಲ್ಲಿ ಮಳೆ

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣ, ಸುತ್ತಮುತ್ತ ಜೋರು ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ತಗ್ಗು  ಪ್ರದೇಶಗಳಿಗೆ ನೀರು ನುಗ್ಗಿದೆ.  ಪಟ್ಟಣದ ಮುಸ್ಲಿಂ ಗಲ್ಲಿಯಲ್ಲಿರುವ ಇರ್ಷಾದ್ ತಾಳಿಕೋಟಿ ಎಂಬವರ ನಿವಾಸಕ್ಕೆ ಮಳೆ ನೀರು ನುಗ್ಗಿದೆ. ಪೀಠೋಪಕರಣ ಸೇರಿದಂತೆ ಮನೆಯ ವಸ್ತುಗಳೆಲ್ಲಾ ಜಲಾವೃತಗೊಂಡಿವೆ. ಮಳೆ ನೀರು ಹೊರ ಹಾಕಲು ಇರ್ಷಾದ್ ಕುಟುಂಬಸ್ಥರು ಹರಸಾಹಸಪಟ್ಟರು.

15 ಸಾವಿರ ಕೋಳಿಗಳು ನೀರುಪಾಲು

ಕೆರೆ ಕೋಡಿ ಹರಿದು ಕೋಳಿ ಫಾರ್ಮ್​ಗೆ ನೀರು ನುಗ್ಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು 15 ಸಾವಿರಕ್ಕೂ ಅಧಿಕ ಕೋಳಿಗಳು ನೀರುಪಾಲಾಗಿದೆ.  ರಾಜಕಾಲುವೆಗಳು ಒತ್ತುವರಿಯಾಗಿರುವವ ರೈತರ ಜಮೀನುಗಳಲ್ಲಿ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಜಲಾಶಯಗಳು ಭರ್ತಿ

ಈ ಬಾರಿ ರಾಜ್ಯದಲ್ಲಿ ಮಳೆ (Rainfall) ಸಾಕಷ್ಟು ಸುರಿದಿದ್ದು ಪ್ರಮುಖ ಜಲಾಶಯಗಳಲ್ಲಿ (Dams) ನೀರು ಸಮೃದ್ಧವಾಗಿ ಸಂಗ್ರಹಣೆಗೊಂಡಿದೆ. ಅಲ್ಲದೆ, ಕೆಲ ಜಲಾಶಯಗಳಿಂದ ಹೆಚ್ಚುವರಿಯಾದ ನೀರನ್ನು ಈಗ ಹೊರಬಿಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಕೆಲ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು.

Karnataka Weather Report 27th August 2022 mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Parameshwar Great Escape: ಮಳೆಯಿಂದ ಕುಸಿದ ಸೇತುವೆ, ಪರಮೇಶ್ವರ್ ಜಸ್ಟ್​ ಮಿಸ್!

ಆದರೆ, ಈಗ ಎಲ್ಲೆಡೆ ಮಳೆ ಕಡಿಮೆಯಾಗಿದ್ದು ಅದರಂತೆ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಆದಾಗ್ಯೂ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ (Agricultural Activities) ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ.
Published by:Mahmadrafik K
First published: