• Home
  • »
  • News
  • »
  • state
  • »
  • Karnataka Weather Report: ಗಮನಿಸಿ, ಇಂದು ಸಹ ರಾಜ್ಯದಲ್ಲಿ ಮಳೆ; ಇಲ್ಲಿದೆ ಹವಾಮಾನ ವರದಿ

Karnataka Weather Report: ಗಮನಿಸಿ, ಇಂದು ಸಹ ರಾಜ್ಯದಲ್ಲಿ ಮಳೆ; ಇಲ್ಲಿದೆ ಹವಾಮಾನ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತ ರಾಯಚೂರು, ಬೀದರ್, ವಿಜಯಪುರದಲ್ಲಿ ಮಳೆಯಾಗಿದೆ. ಈ ಭಾಗದಲ್ಲಿಂದು ಸಹ ಮೋಡ ಕವಿದ ವಾತಾವರಣದ ಇರಲಿದ್ದು,  ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

  • Share this:

Karnataka Weather Report: ಮೂರು ವಾರದ ಬಳಿಕ ರಾಜ್ಯದಲ್ಲಿ ಮಳೆರಾಯ (Karnataka Rains) ಕಾಣಿಸಿಕೊಂಡಿದ್ದಾನೆ. ಮುಂಗಾರು ಅಂತ್ಯವಾಗುವ ಸಮಯ ಇದಾಗಿದ್ದರೂ, ರಾಜ್ಯದ ಹಲವು ಭಾಗಗಳಲ್ಲಿ ಮಳೆ  (Rainfall) ಸುರಿಯುತ್ತಿದೆ. ಇಂದು ಸಹ ಚಿತ್ರದುರ್ಗ (Chitradurga), ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur) ಮತ್ತು ಬೆಂಗಳೂರು (Bengaluru) ಸೇರಿದಂತೆ ಉತ್ತರ ಕರ್ನಾಟಕದ (North Karnataka) ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಸೋಮವಾರ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ (Bengaluru Rain). ಇತ್ತ ರಾಯಚೂರು, ಬೀದರ್, ವಿಜಯಪುರದಲ್ಲಿ ಮಳೆಯಾಗಿದೆ. ಈ ಭಾಗದಲ್ಲಿಂದು ಸಹ ಮೋಡ ಕವಿದ ವಾತಾವರಣದ ಇರಲಿದ್ದು,  ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಸೋಮವಾರ ಬೆಂಗಳೂರಿನ ಶಾಂತಿನಗರ, ಕಾರ್ಪೋರೇಷನ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಚಾಮರಾಜಪೇಟೆ, ವಿಧಾನಸೌಧದ ಸುತ್ತಮುತ್ತ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಸಂಜೆಯೂ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 28-20, ಮೈಸೂರು 31-20, ಚಾಮರಾಜನಗರ 31-20, ರಾಮನಗರ 30-21, ಮಂಡ್ಯ 31-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 27-18, ಕೋಲಾರ 29-21, ಹಾಸನ 29-18, ಚಿತ್ರದುರ್ಗ 29-20, ಚಿಕ್ಕಮಗಳೂರು 28-18, ದಾವಣಗೆರೆ 31-21, ಶಿವಮೊಗ್ಗ 31-21, ಕೊಡಗು 27-17,  ತುಮಕೂರು 29-20, ಉಡುಪಿ 30-24, ಮಂಗಳೂರು 30-24


ಉತ್ತರ ಕನ್ನಡ 31-20, ಧಾರವಾಡ 31-19, ಹಾವೇರಿ 31-20, ಹುಬ್ಬಳ್ಳಿ 31-20 , ಬೆಳಗಾವಿ 29-19, ಗದಗ 30-21, ಕೊಪ್ಪಳ 31-22, ವಿಜಯಪುರ 29-22, ಬಾಗಲಕೋಟ 31-22 , ಕಲಬುರಗಿ 29-22, ಬೀದರ್ 28-21, ಯಾದಗಿರಿ 31-22, ರಾಯಚೂರ 31-23 ಮತ್ತು  ಬಳ್ಳಾರಿ 31-23


Karnataka Weather Report 27 September 2022 mrq
ಸಾಂದರ್ಭಿಕ ಚಿತ್ರ


ಕೂಳೆ ರೋಗ, ಎರಡು ಎಕರೆ ಈರುಳ್ಳಿ ನಾಶ


ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಹೊನ್ನೆ ಗ್ರಾಮದ ಜಯ್ಯಪ್ಪ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ  ಈರುಳ್ಳಿ ಬೆಳೆಯನ್ನು ನಾಶ ಮಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುತ್ತಿರುವ ಹಿನ್ನೆಲೆ ಈರುಳ್ಳಿ ಬೆಳೆ ಇಳುವರಿ ಕುಂಠಿತವಾಗಿತ್ತು. ಇದರ ಜೊತೆಗೆ ಈರುಳ್ಳಿ ಕೊಳೆ ರೋಗಕ್ಕೆ ತುತ್ತಾಗಿದ್ರಿಂದ ಸಂಪೂರ್ಣ ಬೆಳೆಯನ್ನು ನಾಶಗೊಳಿಸಿದ್ದಾರೆ.


ಇದನ್ನೂ ಓದಿ:  ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಬೆಳಗಾವಿಗೆ 10ನೇ Rank; ನವದೆಹಲಿಯಲ್ಲಿ ಸನ್ಮಾನ ಸ್ವೀಕರಿಸಿದ ಜಿಲ್ಲಾಧಿಕಾರಿ


ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಇದೀಗ ಕಟಾವು ಮಾಡಲು ಆರಂಭಿಸಿದ್ರೆ ಮತ್ತೆ 15 ರಿಂದ 20 ಸಾವಿರ ಹಣ ಬೇಕಾಗುತ್ತದೆ. ಈರುಳ್ಳಿ ಗಾತ್ರವೂ ಚಿಕ್ಕದಾಗಿರುವ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗೋದು ಅನುಮಾನ. ಆದ್ದರಿಂದ ಬೆಳೆ ನಾಶ ಮಾಡಿದ್ದೇನೆ ಎಂದು ರೈತ ಜಯ್ಯಪ್ಪ ಹೇಳುತ್ತಾರೆ.


Karnataka Weather Report 27 September 2022 mrq
ಬೆಂಗಳೂರು ಮಳೆ


ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಜೋರು ಮಳೆ


ಸೋಮವಾರ ರಾಯಚೂರು (Raichur Rains) ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಗಳಿಂದ ಮಳೆರಾಯ ರಾಯಚೂರು ಜಿಲ್ಲೆಯಲ್ಲಿ ಬ್ರೇಕ್ ನೀಡಿತ್ತು. ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದಾಗಿ ನಗರ ಭಾಗದ ಜನರ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ಮಾರುಕಟ್ಟೆಯಲ್ಲಿಯೂ ವ್ಯಾಪಾರಿಗಳು ಪರದಾಡುವಂತಾಗಿದೆ.


ಇದನ್ನೂ ಓದಿ:  Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 


ನದಿ ತೀರಕ್ಕೆ ತೆರಳಬೇಡಿ ಜಿಲ್ಲಾಡಳಿತ ಸೂಚನೆ


ಇನ್ನುಳಿದಂತೆ ವಿಜಯಪುರ, ಕಲಬುರಗಿ, ಬೀದರ್, ಚಿತ್ರದುರ್ಗ ಭಾಗದಲ್ಲಿಯೂ ಮಳೆಯಾಗಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಇವತ್ತು ನಿಗಧಿತ ಪ್ರಮಾಣಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆಗಳಿವೆ.  ಈ ಹಿನ್ನೆಲೆ ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ. ಇತ್ತ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣ ನದಿಯ ಒಳಹರಿವು ಪ್ರಮಾಣ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿದೆ.

Published by:Mahmadrafik K
First published: