Karnataka Weather Report: ಇಂದು ತುಂತುರು ಮಳೆ ಸಾಧ್ಯತೆ; ಜಲಾಶಯಗಳು ಭಾಗಶಃ ಭರ್ತಿ

ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಂಗಳವಾರ ರಾತ್ರಿ ಸಹ ಬೆಂಗಳೂರಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿಂದು ಸಹ ಬಿಟ್ಟು ಬಿಟ್ಟು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಬೆಳಗ್ಗೆಯಿಂದಲೇ ಮಳೆ ಆರಂಭವಾಗುವ ಸಾಧ್ಯತೆಗಳಿದ್ದು, ಇಂದು ಭಾಗಶಃ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದೆ. ರಾಜ್ಯದ ಇನ್ನುಳಿದ ಭಾಗಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಜೊತೆ ಬಿಸಿಲು ಸಹ ಇರಲಿದೆ. ಇನ್ನೂ ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಬಿಸಿಲು ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಂಗಳವಾರ ರಾತ್ರಿ ಸಹ ಬೆಂಗಳೂರಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ )

ಬೆಂಗಳೂರು 28-20,  ಮೈಸೂರು 28-21, ಚಾಮರಾಜನಗರ 28-21, ರಾಮನಗರ 29-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 28-19, ಕೋಲಾರ 28-21, ಹಾಸನ 27-19, ಚಿತ್ರದುರ್ಗ 29-21, ಚಿಕ್ಕಮಗಳೂರು 26-18, ದಾವಣಗೆರೆ 29-22, ಶಿವಮೊಗ್ಗ 29-21, ಕೊಡಗು 25-18, ತುಮಕೂರು 28-21, ಉಡುಪಿ 29-24

ಮಂಗಳೂರು 28-24, ಉತ್ತರ ಕನ್ನಡ 28-21, ಧಾರವಾಡ 28-21, ಹಾವೇರಿ 29-21, ಹುಬ್ಬಳ್ಳಿ 29-21, ಬೆಳಗಾವಿ 27-20, ಗದಗ 29-22, ಕೊಪ್ಪಳ 30-23, ವಿಜಯಪುರ 29-22, ಬಾಗಲಕೋಟ 27-21 , ಕಲಬುರಗಿ 28-23, ಬೀದರ್ 27-22, ಯಾದಗಿರಿ 30-23, ರಾಯಚೂರ 31-23 ಮತ್ತು ಬಳ್ಳಾರಿ 31-23

ಇದನ್ನೂ ಓದಿ:  Houses Damaged: ಮಳೆಯಿಂದ ಕುಸಿದ ಮನೆಗಳು, ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿ ಜನ

ನೀರಿನಲ್ಲಿ ಕೊಚ್ಚಿ ಹೋಗಿದ್ದವ ದಿಢೀರ್ ಪ್ರತ್ಯಕ್ಷ

ಇತ್ತೀಚೆಗೆ ಸುರಿದ ಭಾರೀ ಮಳೆಗೆ (Heavy Rain) ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ನಂಬಲಾಗಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಚಿಂದಿಯ ಆಯಲು ಹೋಗಿ ರಾಜಕಾಲುವೆಯಲ್ಲಿ (Rajkaluve) ಕೊಚ್ಚಿ ಹೋಗಿದ್ದ ವ್ಯಕ್ತಿ ಚಿಕ್ಕಮಗಳೂರು (Chikkamagaluru) ನಗರದಲ್ಲಿ ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ಕೊಚ್ಚಿ ಹೋಗಿದ್ದ ವ್ಯಕ್ತಿ ನಗರದ ಐಜಿ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತಿರುವುದನ್ನ ಕಂಡು ಅಧಿಕಾರಿಗಳು ದಂಗಾಗಿದ್ದಾರೆ.

ಕೈ ಬೀಸಿ ಕರೆಯುತ್ತಿದೆ ಮಿನಿ ನಯಾಗರ

ಕೊಡಗಿನಲ್ಲಿ ಮುಂಗಾರು (Monsoon) ಆರಂಭವಾದ್ರೆ ಸಾಕು ಜಿಲ್ಲೆಯಲ್ಲಿ ಹಲವು ಜಲಧಾರೆಗಳು ಹೊಳೆಗಳು ಜೀವ ಪಡೆದುಕೊಳ್ಳುತ್ತವೆ. ಅದರಲ್ಲಿ ಪ್ರಮುಖವಾಗಿ ಚಿಕ್ಲಿಹೊಳೆ (Chiklihole) ತುಂಬಿ ಹರಿಯಿತ್ತೆಂದರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಡುತ್ತದೆ. ಸತತವಾಗಿ ಸುರಿದ ಮಳೆಯಿಂದಾಗಿ ಸಹಜ ಪ್ರಕೃತಿ ಸೌಂದರ್ಯದ (Beautiful Nature) ನಡುವೆ ಮೈತುಂಬಿ ಹರಿಯುತ್ತಿರುವ ಈ ಹೊಳೆಯನ್ನ ಪ್ರೇಕ್ಷಕರು ಮಿನಿ ನಯಾಗರ ಫಾಲ್ಸ್ (Falls) ಎಂದೇ ಕರೆಯುತ್ತಿದ್ದಾರೆ. ಈ ಮಿನಿ ನಯಾಗರ ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ.

ಅಡಿಕೆ ತೋಟಗಳಲ್ಲಿ ಕೊಳೆರೋಗ

ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಸರಿಯಾದ ಸಮಯದಲ್ಲಿ ಬೋಡೋ ದ್ರಾವಣವನ್ನು ಸಿಂಪಡಿಸಲಾಗದೇ ಇದ್ದ ಕಾರಣ ಇದೀಗ ಗಿಡಗಳ ಹಿಂಗಾರ ಕರಟಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಸಣ್ಣ ಅಡಿಕೆಗಳು ಉದುರಲಾರಂಭಿಸಿದೆ.

ಇದನ್ನೂ ಓದಿ:  Railways: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಪ್ರಾರಂಭಿಸಲು ನಿರ್ಧರಿಸಿದ ರೈಲ್ವೆ ಇಲಾಖೆ

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಏರಿಕೆ

ಕರ್ನಾಟಕ (Karnataka) ರಾಜ್ಯದಲ್ಲಿ ಮುಂಗಾರು (Monsoon) ಚುರುಕುಗೊಂಡಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ಕರಾವಳಿ (Coastal) ಹಾಗೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು ನದಿಗಳು ಮೈತುಂಬಿ ಹರಿಯುತ್ತಿವೆ. ಮಳೆಯ ಆಗಮನದೊಂದಿಗೆ ರೈತರ ಖುಷಿಯೂ ದುಪ್ಪಟ್ಟಾಗಿದೆ. ಇದರ ಜೊತೆಗೆ ಎಲ್ಲೆಡೆ ಭಾರೀ ಮಳೆಯಾಗಿದೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ.
Published by:Mahmadrafik K
First published: