Karnataka Weather Report: ನಿಮ್ಮ ಜಿಲ್ಲೆಯಲ್ಲಿಂದು ಮಳೆಯಾಗುತ್ತಾ? ಇಲ್ಲಿದೆ ಇವತ್ತಿನ ಹವಾಮಾನ ವರದಿ

ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ನೀಲಿ ಆಗಸ ಗೋಚರವಾಗಲಿದ್ದು, ಸಂಜೆ ವೇಳೆಗೆ ಚಿಕ್ಕದಾಗಿ ಮಳೆಯಾಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report:  ಇಂದು ಸಹ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ (Karnataka Rainfall) ಮುಂದುವರಿಯಲಿದೆ. ಬಹುತೇಕ ಕಡೆ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ನೀಲಿ ಆಗಸ ಗೋಚರವಾಗಲಿದ್ದು, ಸಂಜೆ ವೇಳೆಗೆ ಚಿಕ್ಕದಾಗಿ ಮಳೆಯಾಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ. ರಾಯಚೂರು ಮತ್ತು ಬಳ್ಳಾರಿಯಲ್ಲಿ ಬಿಸಿಲು ಪ್ರಖರವಾಗಲಿದೆ. ಮಳೆ ಪ್ರಮಾಣ ಕಡಿಮೆಯಾದರೂ ಕೃಷ್ಣಾ ನದಿ (Krishna River) ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-20, ಮೈಸೂರು 27-19, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 27-19, ಕೋಲಾರ 28-21, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 25-18, ದಾವಣಗೆರೆ 28-21, ಶಿವಮೊಗ್ಗ 27-21, ಕೊಡಗು 24-17, ತುಮಕೂರು 28-20

ಇದನ್ನೂ ಓದಿ: Shiradi Ghat: ಬೆಂಗಳೂರು ಟು ಮಂಗಳೂರು ಪ್ರಯಾಣಕ್ಕೆ ಶಿರಾಡಿ ಘಾಟ್ ಓಪನ್; ಈ ನಿಯಮ ಅನ್ವಯ

ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 27-21, ಧಾರವಾಡ 27-21, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 29-21, ಕೊಪ್ಪಳ 30-22, ವಿಜಯಪುರ 29-22, ಬಾಗಲಕೋಟ 30-22, ಕಲಬುರಗಿ 29-22, ಬೀದರ್ 26-21, ಯಾದಗಿರಿ 30-23, ರಾಯಚೂರ 30-23 ಮತ್ತು ಬಳ್ಳಾರಿ 31-23

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಏರಿಕೆ

ಕರ್ನಾಟಕ (Karnataka) ರಾಜ್ಯದಲ್ಲಿ ಮುಂಗಾರು (Monsoon) ಚುರುಕುಗೊಂಡಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ಕರಾವಳಿ (Coastal) ಹಾಗೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು ನದಿಗಳು ಮೈತುಂಬಿ ಹರಿಯುತ್ತಿವೆ. ಮಳೆಯ ಆಗಮನದೊಂದಿಗೆ ರೈತರ ಖುಷಿಯೂ ದುಪ್ಪಟ್ಟಾಗಿದೆ. ಇದರ ಜೊತೆಗೆ ಎಲ್ಲೆಡೆ ಭಾರೀ ಮಳೆಯಾಗಿದೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ.

ಯಾದಗಿರಿಯಲ್ಲಿ ಭಾರಿ ಮಳೆ

ಸೋಮವಾರ ಸಂಜೆಯಿಂದಲೇ ಯಾದಗಿರಿ ನಗರ ಸೇರಿದಂತೆ ಸುತ್ತಮುತ್ತಲಿಮನ ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಅಧಿಕ ಮಳೆಯಾಗಿದೆ. ಸಂಜೆ ಸುರಿದ ಮಳೆಗೆ ವ್ಯಾಪಾರಸ್ಥರು ಮತ್ತು ವಾಹನ ಸವಾರರು ಪರದಾಡುವಂತಾಯ್ತು. ದಿಢೀರ್ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಸಂಪರ್ಕ ಕಡಿತವಾಗಿತ್ತು. ಯಾದಗಿರಿಯಲ್ಲಿಂದೂ ಸಹ ಸಣ್ಣ ಪ್ರಮಾಣ ಮಳೆಯಾಗುವ ಸಾಧ್ಯತೆಗಳಿವೆ.

ಹೇಮಾವತಿ ಜಲಾಶಯ ಭರ್ತಿ

ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಭರ್ತಿಯಾಗಿದ ಹಿನ್ನೆಲೆ ಸೋಮವಾರ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಹೇಮಾವತಿ ನದಿಗೆ ಬಾಗಿನ ಆರ್ಪಿಸಿದರು. ಸಚಿವರಿಗೆ ಶಾಸಕರುಗಳಾದ ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು. ಆರು ಕ್ರಸ್ಟ್‌ಗಳ ಮೂಲಕ 11,300 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಈ ಭಾಗದಲ್ಲಿ ಮಳೆ ಸಾಧ್ಯತೆ

ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಈಶಾನ್ಯ ಭಾರತ ಮತ್ತು ಉಪ ಹಿಮಾಲಯದ ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇತ್ತ ಕರ್ನಾಟಕ, ಕೇರಳ, ಗೋವಾ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟದ ವಿವಾದ, ಮಂಡ್ಯ ಡಿಸಿಗೆ ಆಕ್ಷೇಪಣಾ ಪತ್ರ ಬರೆದ 'ರಾಜಮಾತೆ'

ಪೂರ್ವ ಭಾರತ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದ ರೀತಿಯಲ್ಲಿ ಮಳೆ ಆಗಲಿದೆ. ಮುಂದಿನ ಐದು ದಿನ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಗಳಿವೆ.
Published by:Mahmadrafik K
First published: