• Home
  • »
  • News
  • »
  • state
  • »
  • Karnataka Weather Report: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ; ಇಲ್ಲಿದೆ ಇವತ್ತಿನ ಹವಾಮಾನ ವರದಿ

Karnataka Weather Report: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ; ಇಲ್ಲಿದೆ ಇವತ್ತಿನ ಹವಾಮಾನ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ಬೆಳಗ್ಗೆಯಿಂದಲೇ ರಾಯಚೂರು (Raichur Rains) ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಕಳೆದ ಒಂದು ಗಂಟೆಯಿಂದ ಮಳೆಯಾಗುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

  • Share this:

Karnataka Weather: ರಾಜ್ಯದಲ್ಲಿ ಮತ್ತೆ ಎರಡು ದಿನಗಳಿಂದ ಮಳೆ (Rains) ಆರಂಭಗೊಂಡಿದೆ. ಇಂದು ಸಹ ಉತ್ತರ ಕರ್ನಾಟಕ (North Karnataka) ಭಾಗದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇಂದು ಸಂಜೆ ವೇಳೆಗೆ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಭಾಗಶಃ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ಕಳೆದ ಮೂರು ತಿಂಗಳಿನಿಂದ ಸುರಿದ ಮಳೆಯಿಂದಾಗಿ ರಾಜ್ಯದ ನದಿ, ಕೆರೆ ಕಟ್ಟೆಗಳು ತುಂಬಿವೆ. ಒಂದು ವೇಳೆ ಮಳೆಯ ಪ್ರಮಾಣ ಹೆಚ್ಚಾದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)


ಬೆಂಗಳೂರು 27-19, ಮೈಸೂರು 30-19, ಚಾಮರಾಜನಗರ 29-2, ರಾಮನಗರ 29-20, ಮಂಡ್ಯ 30-20, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 26-18, ಕೋಲಾರ 28-21, ಹಾಸನ 27-18, ಚಿತ್ರದುರ್ಗ 27-20, ಚಿಕ್ಕಮಗಳೂರು 26-18, ದಾವಣಗೆರೆ 28-21, ಶಿವಮೊಗ್ಗ 29-20, ಕೊಡಗು 26-17, ತುಮಕೂರು 28-20, ಉಡುಪಿ 30-24, ಮಂಗಳೂರು 29-24


ಉತ್ತರ ಕನ್ನಡ 29-21, ಧಾರವಾಡ 27-19, ಹಾವೇರಿ 29-21, ಹುಬ್ಬಳ್ಳಿ 28-19, ಬೆಳಗಾವಿ 28-18, ಗದಗ 28-21, ಕೊಪ್ಪಳ 28-22, ವಿಜಯಪುರ 27-21, ಬಾಗಲಕೋಟ 28-22, ಕಲಬುರಗಿ 28-22, ಬೀದರ್ 28-21, ಯಾದಗಿರಿ 29-22, ರಾಯಚೂರ 31-23 ಮತ್ತು ಬಳ್ಳಾರಿ 30-23


ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಜೋರು ಮಳೆ


ಇಂದು ಬೆಳಗ್ಗೆಯಿಂದಲೇ ರಾಯಚೂರು (Raichur Rains) ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಕಳೆದ ಒಂದು ಗಂಟೆಯಿಂದ ಮಳೆಯಾಗುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಗಳಿಂದ ಮಳೆರಾಯ ರಾಯಚೂರು ಜಿಲ್ಲೆಯಲ್ಲಿ ಬ್ರೇಕ್ ನೀಡಿದೆ. ಇಂದು ಬೆಳ್ಳಂಬೆಳಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ಭಾಗದ ಜನರ ಜೀವನ ಅಸ್ತವ್ಯಸ್ತ ಉಂಟಾಗಿದೆ. ಮಾರುಕಟ್ಟೆಯಲ್ಲಿಯೂ ವ್ಯಾಪಾರಿಗಳು ಪರದಾಡುವಂತಾಗಿದೆ.


Karnataka Weather Report 26 September 2022 mrq
ಸಾಂದರ್ಭಿಕ ಚಿತ್ರ


ಇನ್ನುಳಿದಂತೆ ವಿಜಯಪುರ, ಕಲಬುರಗಿ, ಬೀದರ್, ಚಿತ್ರದುರ್ಗ ಭಾಗದಲ್ಲಿಯೂ ಮಳೆಯಾಗಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಇವತ್ತು ನಿಗಧಿತ ಪ್ರಮಾಣಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆಗಳಿವೆ.  ಈ ಹಿನ್ನೆಲೆ ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ.


ಇದನ್ನೂ ಓದಿ:  Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?


ರಾಜ್ಯದ ಇನ್ನುಳಿದ ಭಾಗದಲ್ಲಿ ಹಗುರವಾದ ಮಳೆ ಸಾಧ್ಯತೆ


ಶನಿವಾರ ಸಂಜೆ ಮೆಜೆಸ್ಟಿಕ್, ಮಲ್ಲೇಶ್ವರಂ, ಲಾಲ್ ಬಾಗ್, ಕಾರ್ಪೋರೇಷನ್, ಶಾಂತಿ ನಗರ, ಎಂಜಿ ರಸ್ತೆ‌ ಸೇರಿದಂತೆ‌ ಹಲವೆಡೆ ಹಗುರವಾದ ಮಳೆಯಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯಾಗಿಲ್ಲ. ಇನ್ನುಳಿದಂತೆ ನಗರದ ಹಲವೆಡೆ ಹಗುರವಾದ ಮಳೆಯಾಗಿದೆ. ರಾಜ್ಯದಾದ್ಯಂತ ಹಗುರ ಮಳೆಯಾಗುವ ಸೂಚನೆ‌ಯನ್ನು ಹವಾಮಾನ‌ ಇಲಾಖೆ ನೀಡಿದೆ.


ಇನ್ನುಳಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.


Karnataka Weather Report 26 September 2022 mrq
ಸಾಂದರ್ಭಿಕ ಚಿತ್ರ


ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ


ಒಂದೆಡೆ ಮುಂಗಾರು ಹಂಗಾಮಿನ ಅಂತ್ಯ ಸಮೀಪಿಸುತ್ತಿದ್ದರೆ, ಮಳೆ ನಿರಂತರವಾಗಿ ಸುರಿಯುತ್ತಿದೆ. ಹವಾಮಾನ ಇಲಾಖೆ (ಐಎಂಡಿ) ಹಲವು ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಇಂದು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ:  Shivamogga: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು; ಮೊದಲ ಹುಟ್ಟುಹಬ್ಬಕ್ಕೆ ಕಾದಿತ್ತು ಆಘಾತ


ಹವಾಮಾನ ಮುನ್ಸೂಚನೆಯಂತೆ ಛತ್ತೀಸ್ಗಢ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇನ್ನು 2 ದಿನ ಮಳೆಯಾಗಲಿದೆ

Published by:Mahmadrafik K
First published: