• Home
  • »
  • News
  • »
  • state
  • »
  • Karnataka Weather Report: ರಾಜ್ಯದಲ್ಲಿಂದು ಹಗುರವಾದ ಮಳೆ ಸಾಧ್ಯತೆ; ಇಂದಿನ ಹವಾಮಾನ ವರದಿ ಇಲ್ಲಿದೆ

Karnataka Weather Report: ರಾಜ್ಯದಲ್ಲಿಂದು ಹಗುರವಾದ ಮಳೆ ಸಾಧ್ಯತೆ; ಇಂದಿನ ಹವಾಮಾನ ವರದಿ ಇಲ್ಲಿದೆ

ಬೆಂಗಳೂರು ಮಳೆ

ಬೆಂಗಳೂರು ಮಳೆ

ಇವತ್ತು ಬೆಂಗಳೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನುಳಿದಂತೆ ಬಳ್ಳಾರಿಯಲ್ಲಿ ಅತಿ ಹೆಚ್ಚು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

  • Share this:

Karnataka Weather: ರಾಜ್ಯದಲ್ಲಿ ಇಂದಿನಿಂದ ಎರಡು ದಿನ ಮೋಡ ಕವಿದ ವಾತಾವರಣ (Cloudy Weather ) ಇರಲಿದ್ದು, ಚದುರಿದ ರೀತಿಯಲ್ಲಿ ಮಳೆಯಾಗುವ (Rain fall) ನಿರೀಕ್ಷೆಗಳಿವೆ. ಕಳೆದ ತಿಂಗಳು ಅವಾಂತರ ಸೃಷ್ಟಿಸಿದ್ದ ಬೀದರ್ (Bidar Rains) ಜಿಲ್ಲೆಯಲ್ಲಿಂದು ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ರಾಜಧಾನಿಗೆ (Bengaluru Rains) ಎರಡು ವಾರ ಬಿಡುವು ನೀಡಿದ್ದ ವರುಣರಾಯ ನಿನ್ನೆ ಸಂಜೆ ನಗರಕ್ಕೆ ಎಂಟ್ರಿ ನೀಡಿದ್ದಾರೆ. ಶನಿವಾರ ಸಂಜೆ ಮೆಜೆಸ್ಟಿಕ್, ಮಲ್ಲೇಶ್ವರಂ, ಲಾಲ್ ಬಾಗ್, ಕಾರ್ಪೋರೇಷನ್, ಶಾಂತಿ ನಗರ, ಎಂಜಿ ರಸ್ತೆ‌ ಸೇರಿದಂತೆ‌ ಹಲವೆಡೆ ಹಗುರವಾದ ಮಳೆಯಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯಾಗಿಲ್ಲ. ಇನ್ನುಳಿದಂತೆ ನಗರದ ಹಲವೆಡೆ ಹಗುರವಾದ ಮಳೆಯಾಗಿದೆ. ರಾಜ್ಯದಾದ್ಯಂತ ಹಗುರ ಮಳೆಯಾಗುವ ಸೂಚನೆ‌ಯನ್ನು ಹವಾಮಾನ‌ ಇಲಾಖೆ ನೀಡಿದೆ.


ಇವತ್ತು ಬೆಂಗಳೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನುಳಿದಂತೆ ಬಳ್ಳಾರಿಯಲ್ಲಿ ಅತಿ ಹೆಚ್ಚು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 29-19, ಮೈಸೂರು 31-19, ಚಾಮರಾಜನಗರ 31-20, ರಾಮನಗರ 31-19, ಮಂಡ್ಯ 31-19, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 28-17, ಕೋಲಾರ 31-20, ಹಾಸನ 29-17, ಚಿತ್ರದುರ್ಗ 29-19, ಚಿಕ್ಕಮಗಳೂರು 26-19, ದಾವಣಗೆರೆ 31-19, ಶಿವಮೊಗ್ಗ 31-19, ಕೊಡಗು 27-16ತುಮಕೂರು 30-19, , ಉಡುಪಿ 30-23


ಮಂಗಳೂರು 30-23, ಉತ್ತರ ಕನ್ನಡ 30-19, ಧಾರವಾಡ 29-18, ಹಾವೇರಿ 31-19, ಹುಬ್ಬಳ್ಳಿ 30-18, ಬೆಳಗಾವಿ 26-18, ಗದಗ 31-19, ಕೊಪ್ಪಳ 32-21, ವಿಜಯಪುರ 31-19, ಬಾಗಲಕೋಟ 32-21, ಕಲಬುರಗಿ 31-22, ಬೀದರ್ 28-20, ಯಾದಗಿರಿ 32-23, ರಾಯಚೂರ 32-23 ಮತ್ತು ಬಳ್ಳಾರಿ 33-22


Karnataka Weather Report 25 September 2022 mrq
ಸಾಂದರ್ಭಿಕ ಚಿತ್ರ


ಎರಡು ದಿನ ಮಳೆ


ನಗರದಲ್ಲಿ ಸುರಿದ ಮಳೆಯಿಂದ ಬೈಕ್ ಸವಾರರು, ಪಾದಚಾರಿಗಳು ಪರದಾಡುವಂತೆ ಆಗಿದೆ. ನೈಋತ್ಯ ಮುಂಗಾರು ದುರ್ಬಲವಾಗಿರುವ ಹಿನ್ನೆಲೆ ರಾಜ್ಯದಲ್ಲಿ 2 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಮತ್ತು ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಸಾಧ್ಯತೆ ಎನ್ನಲಾಗುತ್ತಿದೆ.


ಇದನ್ನೂ ಓದಿ: C M Bipin: ಪ್ರಾಜೆಕ್ಟ್ ಚೀತಾ ಕೋರ್ ತಂಡದಲ್ಲಿ ಕೊಡಗಿನ ಕನ್ನಡಿಗ ವನ್ಯಜೀವಿ ಜೀವಶಾಸ್ತ್ರಜ್ಞ ಬಿಪಿನ್‌


ಬೆಂಗಳೂರಿನಲ್ಲಿ ಮುಂದಿನ 24 ಗಂಟೆ ಮೋಡ ಕವಿದ ವಾತಾವರಣವಿದ್ದು, ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆ ಬಗ್ಗೆ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಕಳೆದ ತಿಂಗಳು ಸುರಿದ ಮಳೆಯಿಂದ ಬೆಂಗಳೂರು ಪ್ರವಾಹ ಜಾಗತೀಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ  ಸಣ್ಣ ಮಳೆಗೂ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ.


ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ


ಒಂದೆಡೆ ಮುಂಗಾರು ಹಂಗಾಮಿನ ಅಂತ್ಯ ಸಮೀಪಿಸುತ್ತಿದ್ದರೆ, ಮಳೆ ನಿರಂತರವಾಗಿ ಸುರಿಯುತ್ತಿದೆ. ಹವಾಮಾನ ಇಲಾಖೆ (ಐಎಂಡಿ) ಹಲವು ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಇಂದು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.


Karnataka Weather Report 25 September 2022 mrq
ಬೆಂಗಳೂರು ಮಳೆ


ಹವಾಮಾನ ಮುನ್ಸೂಚನೆಯಂತೆ ಛತ್ತೀಸ್ಗಢ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇನ್ನು 2 ದಿನ ಮಳೆಯಾಗಲಿದೆ


ಚಿಕ್ಕಮಗಳೂರು; ಈರುಳ್ಳಿ ನಾಶ


ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಜಮೀನಿನಲ್ಲಿ ಕೊಳೆಯುವಂತಾಗಿವೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪಟ್ಟಣದ ರೈತ ಮಂಜುನಾಥ್, 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಮಳೆಯಿಂದ ಈರುಳ್ಳಿ ಸಂಪೂರ್ಣ ನಾಶವಾಗಿದೆ.


ಇದನ್ನೂ ಓದಿ:  Mysuru Dasara 2022: ಯುವ ದಸರಾ ಕಾರ್ಯಕ್ರಮಕ್ಕೆ ಬರಲ್ವಂತೆ ನಟ ಕಿಚ್ಚ ಸುದೀಪ್​


ಈರುಳ್ಳಿ ಬೆಳ್ಳುಳ್ಳಿ ಗಾತ್ರದಲ್ಲಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕಲ್ಲ. ಆದ್ದರಿಂದ ಈರುಳ್ಳಿ ನಾಶ ಮಾಡಬೇಕಾಗುವ ಸಮಯ ಬಂದಿದೆ ಎಂದು ರೈತ ಮಂಜುನಾಥ್ ಹೇಳುತ್ತಾರೆ. ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ಮಂಜುನಾಥ್ ಈರುಳ್ಳಿ ಬೆಳೆದಿದ್ದರು.

Published by:Mahmadrafik K
First published: