Karnataka Weather Report: ಗಮನಿಸಿ, ರಾಜ್ಯದ ಬಹುತೇಕ ಕಡೆ ಮಳೆ ಸಾಧ್ಯತೆ

ಕರಾವಳಿ , ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶದಲ್ಲಿಯ ಮಳೆ (rainfall) ಮುಂದುವರಿಯಲಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru Weather) ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದ್ದು, ಮಳೆಯಾಗುವ ನಿರೀಕ್ಷೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather: ಬುಧವಾರ ಸಂಜೆ ರಾಜ್ಯದ ಬಹುತೇಕ ಕಡೆ ಜೋರು ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ (Karnataka Rains) ಜನರು ಹೈರಾಣಾದರು. ಇಂದು ಸಂಜೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದೆ. ಕರಾವಳಿ , ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶದಲ್ಲಿಯ ಮಳೆ (rainfall) ಮುಂದುವರಿಯಲಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru Weather) ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದ್ದು, ಮಳೆಯಾಗುವ ನಿರೀಕ್ಷೆಗಳಿವೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 26-20, ಮೈಸೂರು 26-20, ಚಾಮರಾಜನಗರ 27-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 26-20, ಚಿಕ್ಕಬಳ್ಳಾಪುರ 27-19, ಕೋಲಾರ 28-21, ಹಾಸನ 24-19, ಚಿತ್ರದುರ್ಗ 27-20, ಚಿಕ್ಕಮಗಳೂರು 23-18, ದಾವಣಗೆರೆ 27-21, ಶಿವಮೊಗ್ಗ 27-21, ಕೊಡಗು 22-17, ತುಮಕೂರು 26-20, ಉಡುಪಿ 28-24

ಮಂಗಳೂರು 27-24, ಉತ್ತರ ಕನ್ನಡ 27-21, ಧಾರವಾಡ 27-20, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 26-20, ಗದಗ 29-21, ಕೊಪ್ಪಳ 30-22, ವಿಜಯಪುರ 31-22, ಬಾಗಲಕೋಟ 31-22 , ಕಲಬುರಗಿ 32-23, ಬೀದರ್ 29-21, ಯಾದಗಿರಿ 32-23, ರಾಯಚೂರ 32-23, ಬಳ್ಳಾರಿ 32-23

ಇದನ್ನೂ ಓದಿ:  40% Commission: ಬಿಜೆಪಿ ಸರ್ಕಾರದಲ್ಲಿ ಶರವೇಗದ ಕಮಿಷನ್; ಸಿದ್ದರಾಮಯ್ಯ ಆಕ್ರೋಶ, ತನಿಖೆಗೆ ಆಗ್ರಹ

ಬುಧವಾರ ಸಂಜೆ ರಾಜ್ಯದ ಹಲವೆಡೆ ಜೋರು ಮಳೆ

ಬುಧವಾರ ಸಂಜೆ ಕೊಪ್ಪಳ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ. 15 ದಿನಗಳ ಬಳಿಕ ಮಳೆ ಅಬ್ಬರಿಸಿದೆ. ದಿಢೀರ್ ಸುರಿದ ಮಳೆಗೆ ಜನರು, ರಸ್ತೆ ಬದಿ  ವ್ಯಾಪಾರಿಗಳು ಹೈರಾಣಾದ್ರು. ಮಂಡ್ಯದಲ್ಲಿಯೂ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದರಿಂದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದವು.

Karnataka Weather Report 25 August 2022 mrq
ಯರಗೋಳ ಜಲಾಶಯ


ಇನ್ನು ಬೆಂಗಳೂರಿನ ಕಾರ್ಪೊರೇಷನ್,ಮಲ್ಲೇಶ್ವರಂ, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಯಶವಂತಪುರ, ಬಸವನಗುಡಿ, ಜಾಲಹಳ್ಳಿ, ರಾಜಾಜಿನಗರ, ಶಿವಾಜಿ ನಗರ, ಆರ್ ಟಿ ನಗರ  ಸೇರಿದಂತೆ ನಗರದ ಬಹುತೇಕ ಕಡೆ ಮಳೆಯಾಗಿದೆ.

ಉತ್ತರ ಒಳನಾಡು ಭಾಗದಲ್ಲಿ ಒಣ ಹವೆ ಜೊತೆಗೆ ಬಿಸಿಲಿನ (Sun Light) ಪ್ರಮಾಣ ಏರಿಕೆಯಾಗಿದೆ. ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು ಭಾಗದ ಜನರಿಗೆ ಮಧ್ಯಾಹ್ನ ಆಗ್ತಿದ್ದಂತೆ ಬೇಸಿಗೆಯ (Summer) ಅನುಭವ ಆಗ್ತಿದೆ.

ಯಾದಗಿರಿ ಜಿಲ್ಲೆಯ ಹತ್ತಿಕುಣಿ ಜಲಾಶಯ ಭರ್ತಿ

ಯಾದಗಿರಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ಹತ್ತಿಕುಣಿ ಜಲಾಶಯವು ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನೆಲೆ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರು ಅವರು ಹತ್ತಿಕುಣಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು.

ಯಾದಗಿರಿ ತಾಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿಯಾಗಿದೆ.ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ವಿಶೇಷ ಗಂಗಾ ಪೂಜೆಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ನೆರವೇರಿಸಿದರು.

Karnataka Weather Report 25 August 2022 mrq
ಸಾಂದರ್ಭಿಕ ಚಿತ್ರ


ರಾಜ್ಯದ ಜಲಾಶಯಗಳು ಭರ್ತಿ

ಈ ಬಾರಿ ರಾಜ್ಯದಲ್ಲಿ ಮಳೆ (Rainfall) ಸಾಕಷ್ಟು ಸುರಿದಿದ್ದು ಪ್ರಮುಖ ಜಲಾಶಯಗಳಲ್ಲಿ (Dams) ನೀರು ಸಮೃದ್ಧವಾಗಿ ಸಂಗ್ರಹಣೆಗೊಂಡಿದೆ. ಅಲ್ಲದೆ, ಕೆಲ ಜಲಾಶಯಗಳಿಂದ ಹೆಚ್ಚುವರಿಯಾದ ನೀರನ್ನು ಈಗ ಹೊರಬಿಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಕೆಲ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು.

ಇದನ್ನೂ ಓದಿ;  Idgah Ground: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ, ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ!

ಆದರೆ, ಈಗ ಎಲ್ಲೆಡೆ ಮಳೆ ಕಡಿಮೆಯಾಗಿದ್ದು ಅದರಂತೆ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಆದಾಗ್ಯೂ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ (Agricultural Activities) ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ
Published by:Mahmadrafik K
First published: