Karnataka Weather Report: ಹಾಸನ ಜಿಲ್ಲೆಯಲ್ಲಿ ಮಳೆಯ ನಿರೀಕ್ಷೆ; ಇಂದಿನ ಹವಾಮಾನ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನುಳಿದಂತೆ ದಾಖಲೆಯ ಮಳೆಗೆ ಸಾಕ್ಷಿಯಾಗಿದ್ದ ಕಲ್ಯಾಣ ಕರ್ನಾಟಕದ (Kalyana Karnataka) ಜಿಲ್ಲೆಗಳಲ್ಲಿಯೂ ವರುಣನ ಅಬ್ಬರ ಇಳಿಕೆಯಾಗಿದೆ. ನಿರಂತರವಾಗಿ ಎರಡು ಮಾಸ ವರುಣ ಅಬ್ಬರಿಸಿದ ಕಾರಣ ತರಕಾರಿ ಬೆಳೆ ಹಾನಿಗೆ (Crop Loss) ತುತ್ತಾಗಿದ್ದು, ಬೆಲೆ (Vegetable Price) ಏರಿಕೆಯಾಗಿದೆ.

ಮುಂದೆ ಓದಿ ...
  • Share this:

ರಾಜ್ಯದಲ್ಲಿ ಮಳೆಯ (Karnataka Rains) ಪ್ರಮಾಣ ಬಹುತೇಕ ತಗ್ಗಿದೆ. ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು. ಅಲ್ಲಲ್ಲಿ ಚದುರಿದ ರೀತಿಯಲ್ಲಿ ತುಂತುರು ಮಳೆಯಾಗಲಿದೆ. ಮಲೆನಾಡು (Malnadu) ಭಾಗದಲ್ಲಿ ಸಣ್ಣ ಮಳೆಯಾಗುವ ನಿರೀಕ್ಷೆಗಳಿವೆ. ಆದ್ರೆ ಹಾಸನ (Hassan Rains) ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ದಾಖಲೆಯ ಮಳೆಗೆ ಸಾಕ್ಷಿಯಾಗಿದ್ದ ಕಲ್ಯಾಣ ಕರ್ನಾಟಕದ (Kalyana Karnataka) ಜಿಲ್ಲೆಗಳಲ್ಲಿಯೂ ವರುಣನ ಅಬ್ಬರ ಇಳಿಕೆಯಾಗಿದೆ. ನಿರಂತರವಾಗಿ ಎರಡು ಮಾಸ ವರುಣ ಅಬ್ಬರಿಸಿದ ಕಾರಣ ತರಕಾರಿ ಬೆಳೆ ಹಾನಿಗೆ (Crop Loss) ತುತ್ತಾಗಿದ್ದು, ಬೆಲೆ (Vegetable Price) ಏರಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ  ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 29-19, ಮೈಸೂರು 29-19, ಚಾಮರಾಜನಗರ 31-20, ರಾಮನಗರ 31-19, ಮಂಡ್ಯ 32-19, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-19, ಕೋಲಾರ 30-19, ಹಾಸನ 27-18, ಚಿತ್ರದುರ್ಗ 29-19, ಚಿಕ್ಕಮಗಳೂರು 26-17, ದಾವಣಗೆರೆ 26-21, ಶಿವಮೊಗ್ಗ 28-20, ಕೊಡಗು 24-17, ತುಮಕೂರು 29-18, ಉಡುಪಿ 30-23


ಮಂಗಳೂರು 29-23, ಉತ್ತರ ಕನ್ನಡ 28-20, ಧಾರವಾಡ 28-19, ಹಾವೇರಿ 29-20, ಹುಬ್ಬಳ್ಳಿ 29-20, ಬೆಳಗಾವಿ 27-19, ಗದಗ 30-19, ಕೊಪ್ಪಳ 31-19, ವಿಜಯಪುರ 30-20, ಬಾಗಲಕೋಟ 32-20, ಕಲಬುರಗಿ 31-21, ಬೀದರ್ 28-20, ಯಾದಗಿರಿ 32-22, ರಾಯಚೂರ 32-22 ಮತ್ತು ಬಳ್ಳಾರಿ 33-22


Karnataka Weather Report 24 September 2022 mrq
ಸಾಂದರ್ಭಿಕ ಚಿತ್ರ


ಚಿಕ್ಕಮಗಳೂರು; ಈರುಳ್ಳಿ ನಾಶ


ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಜಮೀನಿನಲ್ಲಿ ಕೊಳೆಯುವಂತಾಗಿವೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪಟ್ಟಣದ ರೈತ ಮಂಜುನಾಥ್, 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಮಳೆಯಿಂದ ಈರುಳ್ಳಿ ಸಂಪೂರ್ಣ ನಾಶವಾಗಿದೆ. ಈರುಳ್ಳಿ ಬೆಳ್ಳುಳ್ಳಿ ಗಾತ್ರದಲ್ಲಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕಲ್ಲ. ಆದ್ದರಿಂದ ಈರುಳ್ಳಿ ನಾಶ ಮಾಡಬೇಕಾಗುವ ಸಮಯ ಬಂದಿದೆ ಎಂದು ರೈತ ಮಂಜುನಾಥ್ ಹೇಳುತ್ತಾರೆ. ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ಮಂಜುನಾಥ್ ಈರುಳ್ಳಿ ಬೆಳೆದಿದ್ದರು.


ಇದನ್ನೂ ಓದಿ:  Kukke Subrahmanya Tample: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಸೇವಾ ದರದಲ್ಲಿ ಭಾರೀ ಹೆಚ್ಚಳ!


ಬೆಳ್ಳಂದೂರು ಕೆರೆ ಸುತ್ತ-ಮುತ್ತಲಿನ ನಿವಾಸಿಗಳಿಗೆ ತಪ್ಪದ ಕಾಟ


ಮಳೆ ಬಂದು ಹೋದ ಮೇಲೆ ಬೆಳ್ಳಂದೂರು (Bellanduru) ನಿವಾಸಿಗಳಿಗೆ ಮತ್ತೊಂದು‌ ಗೋಳು ಶುರುವಾಗಿದೆ. ಮಳೆ ಬಂದಾಗ ನೆರೆ ಜೊತೆ ಗುದ್ದಾಡಿದ್ದಾಯ್ತು. ಈಗ ಮಳೆಯ ಸೈಡ್ ಎಫೆಕ್ಟ್ (Side Effect) ನಿಂದಾಗಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಮೂಗಿ ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.


ಕೆರೆಯ ನಾಲೆ, ರಾಜಕಾಲುವೆ ಎಲ್ಲಾ ಗಬ್ಬುನಾರುತ್ತಿದೆ. ಆದರೆ ಪಾಲಿಕೆ ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿದೆ.  ದೂರು ಬೆಳ್ಳಂದೂರು ಕೆರೆಯಿಂದ ಬರುವ ನೀರು ಚರಂಡಿ ನೀರಿನ (Drainage Water) ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ. ಸುತ್ತ-ಮುತ್ತಲಿನ ಜನರು ಮನೆಯಲ್ಲೇ ಮಾಸ್ಕ್ (Mask)​ ಹಾಕಿಕೊಳ್ಳಲು ಶುರು ಮಾಡಿದ್ದಾರೆ.


ದೇಶದ ಹವಾಮಾನ ವರದಿ ಹೀಗಿದೆ


ಕಳೆದ 24 ಗಂಟೆಗಳಲ್ಲಿ, ಮಧ್ಯಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಉತ್ತರ ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಪ್ರತ್ಯೇಕ ಭಾರಿಯಿಂದ ಅತಿ ಹೆಚ್ಚು ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ, ಪೂರ್ವ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ.


Karnataka Weather Report 24 September 2022 mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Mysuru Dasara: ಪ್ರಯಾಣಿಕರೇ ಗಮನಿಸಿ, ಮೈಸೂರು ಪ್ರವೇಶಿಸುವ, ನಿರ್ಗಮಿಸುವ ಬಸ್​ಗಳ ಮಾರ್ಗ ಬದಲಾವಣೆ


ಸಿಕ್ಕಿಂ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಉತ್ತರಾಖಂಡದಲ್ಲಿ ಸಾಧಾರಣ ಮಳೆಯಾಗಬಹುದು.  ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಗಂಗಾನದಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರಾವಳಿ ಕರ್ನಾಟಕ, ಕೇರಳದ ಕೆಲವು ಭಾಗಗಳು ಮತ್ತು ಲಕ್ಷದ್ವೀಪದಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ.

top videos
    First published: