Karnataka Weather Report: ರಾಜ್ಯದಲ್ಲಿಂದು ಸಹ ತುಂತುರು ಮಳೆಯಾಗಲಿದೆ (Rainfall). ನಿರಂತರ ಮಳೆಯಿಂದಾಗಿ ಎಲ್ಲಾ ನದಿಗಳು (Rivers) ತುಂಬಿ ಹರಿಯುತ್ತಿವೆ. ಹಾಗಾಗಿ ಜನರಿಗೆ ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಆದ್ರೂ ನದಿ ರಭಸಕ್ಕೆ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಬರುತ್ತಲೇ ಇವೆ. ಇತ್ತ ಕೊಡಗಿನಲ್ಲಿ ಜಲಸ್ಪೋಟ ಮತ್ತು ಭೂ ಕುಸಿತ (Kodagu Rain And Landslide) ಮುಂದುವರಿದಿದೆ. ಯಾವಾಗ ಎಲ್ಲಿ ಭೂಕುಸಿತ ಆಗುತ್ತೆ ಅಂತ ಸ್ಥಳೀಯರು ಆತಂಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ (Maharashtra Rain) ಆಗುತ್ತಿರುವ ಹಿನ್ನೆಲೆ ಕೃಷ್ಣಾ ನದಿ (Krishna River) ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇಂದು ಭಾಗಶಃ ರಾಜ್ಯದಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 27-19, ಮೈಸೂರು 28-19, ಚಾಮರಾಜನಗರ 28-20, ರಾಮನಗರ 28-20, ಮಂಡ್ಯ 29-20, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 28-21, ಕೋಲಾರ 29-20, ಹಾಸನ 26-18, ಚಿತ್ರದುರ್ಗ 28-20, ಚಿಕ್ಕಮಗಳೂರು 24-18, ದಾವಣಗೆರೆ 27-21, ಶಿವಮೊಗ್ಗ 27-21, ಕೊಡಗು 22-17, ತುಮಕೂರು 28-19, ಉಡುಪಿ 28-24, ಮಂಗಳೂರು 28-24
ಉತ್ತರ ಕನ್ನಡ 25-21, ಧಾರವಾಡ 26-20, ಹಾವೇರಿ 28-21, ಹುಬ್ಬಳ್ಳಿ 26-21, ಬೆಳಗಾವಿ 23-20, ಗದಗ 28-21, ಕೊಪ್ಪಳ 29-22, ವಿಜಯಪುರ 28-22, ಬಾಗಲಕೋಟ 29-22, ಕಲಬುರಗಿ 28-22, ಬೀದರ್ 26-21, ಯಾದಗಿರಿ 30-23, ರಾಯಚೂರ 31-23 ಮತ್ತು ಬಳ್ಳಾರಿ 31-23
ಇದನ್ನೂ ಓದಿ: Hubballi: ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ; 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಈ ಭಾಗದಲ್ಲಿಂದು ಭಾರೀ ಮಳೆ
ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ, ಪಶ್ಚಿಮ ರಾಜಸ್ಥಾನ ಮತ್ತು ವಾಯುವ್ಯ ಗುಜರಾತ್ನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಛತ್ತೀಸ್ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ, ಜಾರ್ಖಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ತೆಲಂಗಾಣ, ಗೋವಾ, ಕೇರಳದಲ್ಲಿ ಮಳೆಯಾಗುವ ಸುಳಿವುನ್ನ ಹವಾಮಾನ ಇಲಾಖೆ ನೀಡಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಆತಂಕ
ಇನ್ನೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರ್ಷಧಾರೆ ಹೆಚ್ಚಾದ್ರೆ ಕೃಷ್ಣೆ ಮತ್ತು ಭೀಮೆ ಸೇರಿದಂತೆ ಸಪ್ತನದಿಗಳು ಅಪಾಯಮಟ್ಟ ಮೀರಿ ಹರಿಯಲಿವೆ. ಈಗಾಗಲೇ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಭಾಗಶಃ ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ. ಸದ್ಯ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆ ಹೊರ ಹರಿವು ಸಹ ಇಳಿಕೆಯಾಗಿದೆ.
ಶುಕ್ರವಾರ ತಡರಾತ್ರಿ ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಜೋರು ಮಳೆಯಾಗಿತ್ತು, ಬೀದರ್ ಜಿಲ್ಲೆಯಲ್ಲಿ ಶನಿವಾರ ಶಾಲೆಗಳಿಗೆ ರಜೆ ಘೋ ಷಣೆ ಮಾಡಲಾಗಿತ್ತು.
ಲಘು ವಾಹನಗಳ ಸಂಚಾರಕ್ಕೆ ರಸ್ತೆಗಳು ಮುಕ್ತ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಡಬಿಡದೇ ಸುರಿಯುತ್ತಿದ್ದ ಮಳೆಗೆ ಕುಸಿದ ಬೆಟ್ಟಗಳು, ಬಿರುಕು ಬಿಟ್ಟ ರಸ್ತೆಗಳು ಜನತೆಗೆ ಹಾಗೂ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿತ್ತು. ತತ್ಪರಿಣಾಮವಾಗಿ ಅಂತಹ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನೇ ಜಿಲ್ಲಾಡಳಿತ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಆ ರಸ್ತೆಗಳ ದುರಸ್ತಿ ಕಾರ್ಯವು ಚಾಲ್ತಿಯಲ್ಲಿದ್ದು ಲಘುವಾಹನಗಳ ಸಂಚಾರಕ್ಕೆ ರಸ್ತೆಗಳು ತೆರೆದುಕೊಂಡಿವೆ.
ಇದನ್ನೂ ಓದಿ: Karnataka Politics: ಜಮೀರ್ ಅಹ್ಮದ್ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ
ರಾಷ್ಟ್ರೀಯ ಹೆದ್ದಾರಿ-69 ಓಪನ್
ಹೊನ್ನಾವರ- ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ-69ರ 39.8 ಕಿ.ಮೀ ನಲ್ಲಿ ಅಧಿಕ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಜಿಲ್ಲಾಡಳಿತ ದುರಸ್ತಿ ಕಾರ್ಯ ನಡೆಸುತ್ತಿದ್ದು ಅರ್ಧ ಕೆಲಸ ಮುಗಿದಿದ್ದರಿಂದ ಲಘುವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
Kodagu: ಮತ್ತೆ ಜಲಸ್ಫೋಟಕ್ಕೆ ತತ್ತರಿಸಿದ ಕೊಡಗು, ನೋಡ ನೋಡುತ್ತಿದ್ದಂತೇ ಕುಸಿಯಿತು ಬೆಟ್ಟ!
ಕಾವೇರಿಯ (Cauvery) ತವರು, ಪ್ರಕೃತಿ ಸೌಂದರ್ಯದ ತಾಣ ಕೊಡಗಿನಲ್ಲಿ (Kodagu) ಮತ್ತೆ ಭೀಕರ ಜಲಸ್ಫೋಟ (water explosion) ಸಂಭವಿಸಿದೆ. ಜಲಸ್ಫೋಟದ ರಭಸಕ್ಕೆ ನೋಡ ನೋಡುತ್ತಿದ್ದಂತೆಯೇ ಇಡೀ ಬೆಟ್ಟವೇ (Hill) ಕುಸಿತವಾಗಿದೆ. ಮಡಿಕೇರಿ (Madikeri) ತಾಲ್ಲೂಕಿನ ಸೀಮೆಕಜೆಯಲ್ಲಿ ಭೀಕರ ಬೆಟ್ಟ ಕುಸಿತ (Land Slides) ಸಂಭವಿಸಿದೆ.
ಬೆಟ್ಟ ಕುಸಿತದ ಭೀಕರತೆ ಹೇಗಿತ್ತು ಅಂದರೆ ಅದನ್ನು ನೋಡಿ ಸಾರ್ವಜನಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಜಲಸ್ಫೋಟದ ತೀವ್ರತೆಗೆ ಸ್ಫೋಟಗೊಂಡು ಬೆಟ್ಟದ ಮಣ್ಣೆಲ್ಲ (soil) ರಸ್ತೆಗೆ ಬಂದು ಬಿದ್ದಿದೆ. ಲಕ್ಷಾಂತರ ಟನ್ ಪ್ರಮಾಣದ ಮಣ್ಣು ಕೆಸರಾಗಿ (Mud) ಹರಿದು ಹೋಗಿರುವ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ ನಡೆದಿರುವ ಜಲಸ್ಫೋಟ ತಡವಾಗಿ ಬೆಳಕಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ