Karnataka Weather Report: ಬದಲಾಗುತ್ತಿರುವ ಹವಾಮಾನ; ಅಲ್ಲಲ್ಲಿ ಮಳೆ, ಮೋಡ ಕವಿದ ವಾತಾವರಣ

ಇಂದು ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಯಚೂರು ಮತ್ತು ಕಲಬುರಗಿಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Weather Report: ರಾಜ್ಯದಲ್ಲಿ ಹವಾಮಾನ ಕ್ಷಣ ಕ್ಷಣಕ್ಕೂ ಬದಲಾಗ್ತಿದೆ. ಇನ್ನು ವಿವಿಧ ಪ್ರದೇಶಗಳಲ್ಲಿ ಹವಾಮಾನ ವ್ಯತ್ಯಾಸ ಆಗ್ತಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಒಣ ಹವೆ ಜೊತೆಗೆ ಬಿಸಿಲಿನ (Sun Light) ಪ್ರಮಾಣ ಏರಿಕೆಯಾಗಿದೆ. ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು ಭಾಗದ ಜನರಿಗೆ ಮಧ್ಯಾಹ್ನ ಆಗ್ತಿದ್ದಂತೆ ಬೇಸಿಗೆಯ (Summer) ಅನುಭವ ಆಗ್ತಿದೆ. ಇಂದು ಸಹ ರಾಜ್ಯದ ಕೆಲವು ಭಾಗದಲ್ಲಿ ಮಳೆಯ ಸಿಂಚನ (Rainfall) ಆಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಹಗುರವಾದ ಮಳೆಯಾಗುವ (Low Rains) ಸಾಧ್ಯತೆಗಳಿವೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಯಚೂರು ಮತ್ತು ಕಲಬುರಗಿಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 27-19, ಮೈಸೂರು 26-20, ಚಾಮರಾಜನಗರ 27-21, ರಾಮನಗರ 28-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-19, ಕೋಲಾರ 28-21, ಹಾಸನ 25-19, ಚಿತ್ರದುರ್ಗ 28-20, ಚಿಕ್ಕಮಗಳೂರು 24-18, ದಾವಣಗೆರೆ 28-21, ಶಿವಮೊಗ್ಗ 26-21, ಕೊಡಗು 27-17, ತುಮಕೂರು 27-20, ಉಡುಪಿ 27-24, ಮಂಗಳೂರು 27-24, ಉತ್ತರ ಕನ್ನಡ 26-21, ಧಾರವಾಡ 27-20, ಹಾವೇರಿ 27-21

ಹುಬ್ಬಳ್ಳಿ 27-21, ಬೆಳಗಾವಿ 24-19, ಗದಗ 28-21, ಕೊಪ್ಪಳ 30-22, ವಿಜಯಪುರ 30-21, ಬಾಗಲಕೋಟ 30-22 , ಕಲಬುರಗಿ 32-22, ಬೀದರ್ 29-21, ಯಾದಗಿರಿ 31-22, ರಾಯಚೂರ 32-23 ಮತ್ತು ಬಳ್ಳಾರಿ 31-23

ಯಾದಗಿರಿ ಜಿಲ್ಲೆಯ ಹತ್ತಿಕುಣಿ ಜಲಾಶಯ ಭರ್ತಿ

ಯಾದಗಿರಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ಹತ್ತಿಕುಣಿ ಜಲಾಶಯವು ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನೆಲೆ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರು ಅವರು  ಹತ್ತಿಕುಣಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು.

Karnataka Weather Report 24 August 2022 mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Pratap Simha: ಮೈಸೂರಿನಲ್ಲಿ ಆಣೆ ಪ್ರಮಾಣದ ರಾಜಕೀಯ! ಚಾಮುಂಡೇಶ್ವರಿ ಮುಂದೆ ಕೈ ನಾಯಕನ ಸವಾಲು

ಯಾದಗಿರಿ ತಾಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿಯಾಗಿದೆ.ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.  ವಿಶೇಷ ಗಂಗಾ ಪೂಜೆಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ನೆರವೇರಿಸಿದರು.

ಕರಾವಳಿ, ದಕ್ಷಿಣ ಒಳನಾಡು ಕೆಲ‌ ಜಿಲ್ಲೆಗಳಿಗೆ ಐದು ದಿನ ಮತ್ತು ಇಂದು ಮತ್ತು ನಾಳೆ ಚಿಕ್ಕಮಗಳೂರು (Chikkamagaluru) ಹಾಗೂ ಕೊಡಗು (Kodagu) ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಆಗಸ್ಟ್ 24ರ ನಂತರ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

ಕೊಡಗಿನಲ್ಲಿ ಇಂದು ಯೆಲ್ಲೋ ಅಲರ್ಟ್

ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ (Kodagu Rains) ಶುರುವಾಗಿದೆ. ಕಳೆದ 10 ದಿನಗಳಿಂದ ಕೊಡಗು ಜನತೆಗೆ ಬ್ರೇಕ್ ನೀಡಿದ್ದ ವರುಣದೇವ ಈಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಇಂದು ಮತ್ತು ನಾಳೆ ಕೊಡಗು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಇತ್ತ ಮಳೆ ಶುರುವಾಗುತ್ತಿದ್ದಂತೆ ಜನತೆ ಭೂ ಕುಸಿತ (Kodagu Landslide) ಆತಂಕದಲ್ಲಿದ್ದಾರೆ.

ಇದನ್ನೂ ಓದಿ:  Bengaluru: ಟಬ್​​ನಲ್ಲಿ ಮುಳುಗಿಸಿ ಮಗುವನ್ನ ಕೊಂದ ತಾಯಿ, ಇತ್ತ ಸಾಲ ಕೇಳಿದ್ದಕ್ಕೆ ವ್ಯಕ್ತಿಯ ಹತ್ಯೆ, ಸ್ನೇಕ್ ಲೋಕೇಶ್ ಸಾವು

Karnataka Weather Report 24 August 2022 mrq
ಸಾಂದರ್ಭಿಕ ಚಿತ್ರ


ಗೋವಾ, ಮಹಾರಾಷ್ಟ್ರದಲ್ಲಿ ಉತ್ತಮ ಮಳೆ

ಈಗಾಗಲೇ ಗೋವಾ (Goa), ಕೊಂಕಣ (konkana) ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ (Maharashtra Rains) ಸತತವಾಗಿ ಮಳೆ ಸುರಿಯುತ್ತಿದೆ. ಈ ಬಾರಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್ (Bidar), ಕಲಬುರಗಿ (Kalaburagi) ಮತ್ತು ಯಾದಗಿರಿ (Yadagiri) ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
Published by:Mahmadrafik K
First published: