Karnataka Weather Report: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ, ಇಂದಿನ ಹವಾಮಾನ ವರದಿ ಹೀಗಿದೆ

Karnataka Weather Report: ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಶುಕ್ರವಾರ ಮತ್ತು ಶನಿವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ನಿರೀಕ್ಷೆ ಇದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ (State) ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ರಾಜಧಾನಿ ಬೆಂಗಳೂರು (Bengaluru)  ಸೇರಿದಂತೆ ಇನ್ನೂ ಹಲವೆಡೆ ಮಳೆಯ ಯಾವುದೇ ಲಕ್ಷಣ ಗೋಚರಿಸಿಲ್ಲ. ಆದರೆ ಇಂದು ಬೆಳಗ್ಗೆಯಿಂದಲೇ ಸ್ವಲ್ಪ ಚಳಿಯ ವಾತಾವರಣವಿದ್ದು, ಹವಾಮಾನ ವರದಿಯ (Weather Report) ಪ್ರಕಾರ ಇಂದು ಸಂಜೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಶುಕ್ರವಾರ ಮತ್ತು ಶನಿವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ನಿರೀಕ್ಷೆ ಇದೆ. 

ಇನ್ನು ರಾಜಧಾನಿ ಬೆಂಗಳೂರಿನ ವಿಚಾರಕ್ಕೆ ಬಂದರೆ ಇಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

 ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್)

ಚಾಮರಾಜನಗರ: 30-19, ಚಿಕ್ಕಬಳ್ಳಾಪುರ: 29-18, ಕೋಲಾರ: 30-19, ತುಮಕೂರು: 29-18, ಕಾರವಾರ: 28-24, ಚಿಕ್ಕಮಗಳೂರು: 27-17, ದಾವಣಗೆರೆ: 29-20, ಹಾಸನ: 27-18, ಉಡುಪಿ: 29-24, ಚಿತ್ರದುರ್ಗ: 29-19,  ವಿಜಯಪುರ: 31-20, ಬೀದರ್: 27-19, ಕಲಬುರಗಿ: 29-21, ಬಾಗಲಕೋಟೆ: 32-20,

ಶಿವಮೊಗ್ಗ: 28-20, ಬೆಳಗಾವಿ: 26-19, ಮೈಸೂರು: 30-19, ಬಳ್ಳಾರಿ: 33-21, ಗದಗ: 29-19, ಹಾವೇರಿ: 29-20, ಬೆಂಗಳೂರು: 28-17, ರಾಯಚೂರು: 32-22, ಯಾದಗಿರಿ: 31-22, ಮಂಗಳೂರು: 29-23, ಕೊಪ್ಪಳ: 31-21

ಸಂಪೂರ್ಣ ದೇಶದ ಹವಾಮಾನ ವರದಿ ಹೀಗಿದೆ

ಕಳೆದ 24 ಗಂಟೆಗಳಲ್ಲಿ, ಮಧ್ಯಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಉತ್ತರ ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಪ್ರತ್ಯೇಕ ಭಾರಿಯಿಂದ ಅತಿ ಹೆಚ್ಚು ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ, ಪೂರ್ವ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಇಳಿಕೆಯಾದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ನಿಮ್ಮ ಜಿಲ್ಲೆಯ ಡ್ಯಾಂ ಎಷ್ಟು ತುಂಬಿದೆ ನೋಡಿ

ಸಿಕ್ಕಿಂ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಉತ್ತರಾಖಂಡದಲ್ಲಿ ಸಾಧಾರಣ ಮಳೆಯಾಗಬಹುದು.  ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಗಂಗಾನದಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರಾವಳಿ ಕರ್ನಾಟಕ, ಕೇರಳದ ಕೆಲವು ಭಾಗಗಳು ಮತ್ತು ಲಕ್ಷದ್ವೀಪದಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ನಿರಂತರ ಮಳೆಗೆ ತತ್ತರಿಸಿದ ಹೆಸ್ಕಾಂ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಭಾರೀ ಮಳೆಯಿಂದ 95 ಲಕ್ಷ ನಷ್ಟ ಅನುಭವಿಸಿದೆ. ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರೈತರ ಬೆಳೆ ಹಾನಿಯಾದ್ರೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 94.96 ಲಕ್ಷ ರೂ. ನಷ್ಟ ಅನುಭವಿಸಿದೆ. ಅತಿವೃಷ್ಟಿಯಿಂದ ಏಪ್ರಿಲ್ 1 ರಿಂದ ಆಗಸ್ಟ್ 31 ರವರೆಗೆ 1,549 ವಿದ್ಯುತ್ ಕಂಬ, 33 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಯಾಗಿವೆ. ಧಾರವಾಡ, ಹುಬ್ಬಳ್ಳಿ ಶಹರ, ಕಲಘಟಗಿ, ಕುಂದಗೋಳ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಹೆಚ್ಚಿನ ಹಾನಿಯುಂಟಾಗಿದೆ. ಧಾರವಾಡ ಮತ್ತು ಹುಬ್ಬಳ್ಳಿ ಶಹರದಲ್ಲಿ ಮಾತ್ರ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು ಟು ಮೈಸೂರು; ದಸರಾ ಪ್ರವಾಸ ಇನ್ನಷ್ಟು ಸಲೀಸು

ಬೆಳೆ ನಾಶ, ಸಾಲದ ಸುಳಿಯಲ್ಲಿ ರೈತ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ಮಳೆ ಆಗುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿಗೆ ಬಹುತೇಕ ಹಾನಿಯುಂಟಾಗಿದೆ. ಬಿತ್ತನೆಗೆ ಮಾಡಿದ ಖರ್ಚು ಜೇಬು ಸೇರುತ್ತಾ ಅನ್ನೋ ಅತಂಕದಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಜ್ಜನಕೆರೆ ಗ್ರಾಮದ ರೈತ ಲೋಕೇಶಪ್ಪ ಅವರು ಎರಡೂವರೆ ಎಕರೆಯಲ್ಲಿ ಬೆಳೆದ ಈರುಳ್ಳಿ ನಾಶವಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಲೋಕೇಶಪ್ಪ, ಕೈಯಲ್ಲಿ ವಿಷದ ಬಾಟೆಲ್ ಹಿಡಿದು ಸಂಕಟ ತೋಡಿಕೊಂಡ ವಿಡಿಯೋ ವೈರಲ್ ಆಗಿದೆ.
Published by:Sandhya M
First published: