• Home
  • »
  • News
  • »
  • state
  • »
  • Karnataka Weather: ಮುಂದುವರಿದ ತುಂತುರು ಮಳೆ; ಇಂದು ಭಾಗಶಃ ಮೋಡ ಕವಿದ ವಾತಾವರಣ

Karnataka Weather: ಮುಂದುವರಿದ ತುಂತುರು ಮಳೆ; ಇಂದು ಭಾಗಶಃ ಮೋಡ ಕವಿದ ವಾತಾವರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಭಾಗಗಳಲ್ಲಿ ಮಳೆ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಗೆ ಜನರು ಹೈರಾಣು ಆಗಿದ್ದಾರೆ.

  • Share this:

Karnataka Weather Report: ಇಂದು ಭಾಗಶಃ ರಾಜ್ಯದ ಎಲ್ಲಾ ಭಾಗಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ತುಂತುರು ಮಳೆಯಾಗುವ (Rain) ಸಾಧ್ಯತೆಗಳಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಭಾಗಗಳಲ್ಲಿ ಮಳೆ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಗೆ ಜನರು ಹೈರಾಣು ಆಗಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿಯೂ (Karnataka Coastal)  ಮೋಡ ಮತ್ತು ಸೂರ್ಯನ ಆಟ ನಡೆಯಲಿದ್ದು, ಭಾಗಶಃ ಒಣ ಹವೆ ಇರಲಿದೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಕೊಡಗು, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ.  . ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷ್ಣೆ ಮತ್ತು ಭೀಮೆಯ (Krishna And Bhima River) ಅಬ್ಬರ ಹೆಚ್ಚಾಗುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆ ಜಲಾಶಯಗಳಿಂದ (Dams) ಹೆಚ್ಚು ನೀರು ಬಿಡಲಾಗುತ್ತದೆ.


ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿ ಯಸ್ ಗಳಲ್ಲಿ)


ಬೆಂಗಳೂರು 27-19, ಮೈಸೂರು 28-20, ಚಾಮರಾಜನಗರ 28-21, ರಾಮನಗರ 29-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 26-18, ಕೋಲಾರ 29-20, ಹಾಸನ 25-19, ಚಿತ್ರದುರ್ಗ 27-20, ಚಿಕ್ಕಮಗಳೂರು 24-18, ದಾವಣಗೆರೆ 27-21, ಶಿವಮೊಗ್ಗ 26-21, ಕೊಡಗು 22-17, ತುಮಕೂರು 28-20, ಉಡುಪಿ 28-24, ಮಂಗಳೂರು 27-24


ಇದನ್ನೂ ಓದಿ:  School Students: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ


ಉತ್ತರ ಕನ್ನಡ 27-21, ಧಾರವಾಡ 27-20, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 26-20, ಗದಗ 28-21, ಕೊಪ್ಪಳ 29-22, ವಿಜಯಪುರ 28-22, ಬಾಗಲಕೋಟ 29-22, ಕಲಬುರಗಿ 28-22, ಬೀದರ್ 26-21, ಯಾದಗಿರಿ 29-23, ರಾಯಚೂರ 29-23 ಮತ್ತು ಬಳ್ಳಾರಿ 31-23


ಈ ಭಾಗದಲ್ಲಿ ಮಳೆ ಸಾಧ್ಯತ


ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಈಶಾನ್ಯ ಭಾರತ ಮತ್ತು ಉಪ ಹಿಮಾಲಯದ ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇತ್ತ ಕರ್ನಾಟಕ, ಕೇರಳ, ಗೋವಾ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಅಮಾನ ಇಲಾಖೆ ಹೇಳಿದೆ.


ಪೂರ್ವ ಭಾರತ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದ ರೀತಿಯಲ್ಲಿ ಮಳೆ ಆಗಲಿದೆ.


ಜಲಾಶಯಗಳು ಭರ್ತಿ


ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿದ್ದು ಈಗಾಗಲೇ ಕೆಲವು ಜಲಾಶಯಗಳು ಭರ್ತಿಯಾಗಿವೆ.


ಕೃಷ್ಣ ರಾಜ ಸಾಗರಕ್ಕೆ ಸಿಎಂ ಬಾಗಿನ


ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕೆಆರ್‌‌‌‌‌‌‌‌ಎಸ್ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು ಈ ಭಾಗದ ರೈತಾಪಿ ವರ್ಗದವರಲ್ಲಿ ಸಂತಸ ಮನೆ ಮಾಡಿದೆ. ಈ ಪ್ರಯುಕ್ತ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಕೃಷ್ಣ ರಾಜ ಸಾಗರಕ್ಕೆ ಬಾಗಿನವನ್ನೂ ಸಹ ಅರ್ಪಿಸಿದರು.


ಇದನ್ನೂ ಓದಿ:  Madikeri: ಮಡಿಕೇರಿಗೆ ಹೋದ್ರೆ ಈ ಸುಂದರ ಸ್ಥಳಗಳನ್ನು ಮಿಸ್ ಮಾಡ್ದೇ ನೋಡಿ ಬನ್ನಿ


ಕಾಫಿ, ಕಾಳು ಮೆಣಸು ಬೆಳೆಗೆ ಕೂಳೆರೋಗ


ಕಾಫಿಯನ್ನೇ ಪ್ರಮುಖ ಬೆಳೆಯನ್ನಾಗಿ ಹೊಂದಿರುವ ಕೊಡಗು (Kodagu) ಜಿಲ್ಲೆಯಲ್ಲಿ ಜೂನ್ ಆರಂಭದಿಂದ ಇದುವರೆಗೆ ಅತ್ಯಧಿಕ ಮಳೆ (Rainfall) ಸುರಿದಿದೆ. ಪರಿಣಾಮ ಕಾಫಿ (Coffee) ಮತ್ತು ಕಾಳುಮೆಣಸುಗಳಿಗೆ (Black pepper) ಕೊಳೆರೋಗ ಬಂದಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚು ಮಳೆ ಸುರಿದಿದೆ.

Published by:Mahmadrafik K
First published: