Karnataka Weather Report: ರಾಜ್ಯದಲ್ಲಿ ಮಳೆಯ ಸಿಂಚನ; ಇಂದಿನ ಹವಾಮಾನ ವರದಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಆದ್ದರಿಂದ ನದಿ (River) ತೀರದ ಜನತೆಗೆ ಮತ್ತೊಮ್ಮೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.

  • Share this:

Weather Report: ರಾಜ್ಯದಲ್ಲಿ ಮುಂದಿನ ಮೂರು ದಿನ ಕೆಲವು ಭಾಗಗಳಲ್ಲಿ ಚದುರಿದ ಮಳೆಯಾಗುವ (Rainfall) ಸಾಧ್ಯತೆಗಳಿವೆ. ನೆರೆಯ ಗೋವಾ (Goa), ಮಹಾರಾಷ್ಟ್ರದ (Maharashtra) ಪಶ್ಚಿಮಘಟ್ಟ ಪ್ರದೇಶದಲ್ಲಿ (Western Hills) ಭಾರೀ ಮಳೆಯಾಗುವ (Heavy Rainfall) ಸಾಧ್ಯತೆಗಳಿವೆ. ಈ ಹಿನ್ನೆಲೆ ರಾಜ್ಯದ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಆದ್ದರಿಂದ ನದಿ (River) ತೀರದ ಜನತೆಗೆ ಮತ್ತೊಮ್ಮೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಯಾದಗಿರಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.


ದಕ್ಷಿಣ ಮತ್ತು ಒಳನಾಡು ಭಾಗದಲ್ಲಿಯೂ ಒಣ ಹವೆ ಇರಲಿದೆ. ಉತ್ತರ ಕನ್ನಡ (Uttara Kannada), ಬೆಳಗಾವಿ (Belagavi), ಧಾರವಾಡ (Dharwad) ಜಿಲ್ಲೆಗಳಲ್ಲಿ ಚದುರಿದ ರೀತಿ ಮಳೆಯಾಗುವ ಸಾಧ್ಯತೆಗಳಿವೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 28-19, ಮೈಸೂರು 28-21, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 28-20, ಕೋಲಾರ 29-21, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 24-18, ದಾವಣಗೆರೆ 28-21, ಶಿವಮೊಗ್ಗ 27-21, ಕೊಡಗು 22-17, ತುಮಕೂರು 27-20


ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 27-21, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 29-21, ಕೊಪ್ಪಳ 30-22, ವಿಜಯಪುರ 30-22, ಬಾಗಲಕೋಟ 31-23, ಕಲಬುರಗಿ 31-22, ಬೀದರ್ 29-21, ಯಾದಗಿರಿ 32-23, ರಾಯಚೂರ 32-23 ಮತ್ತು ಬಳ್ಳಾರಿ 32-23


Karnataka Weather Report 21st August 2022 mrq
ಜಲಾವೃತವಾಗಿರುವ ರಸ್ತೆ


ಇದನ್ನೂ ಓದಿ: MLA Raju Gowda: ನಿಷೇಧದ ನಡುವೆಯೂ ಡ್ಯಾಂ ಬಳಿ ನಿಂತು ಪೋಸ್! ಶಾಸಕ ರಾಜುಗೌಡ ಪುತ್ರನಿಗಿದೆಯಾ ಬೇರೆ ರೂಲ್ಸ್?


ಸಹಜ ಸ್ಥಿತಿಯತ್ತ ಕೊಡಗು


ಈ ಬಾರಿಯ ರಣಮಳೆ, ಪ್ರವಾಹ (Flood), ಮೇಘಸ್ಫೋಟಕ್ಕೆ(Cloud burst) ಕೊಡಗು ತತ್ತರಿಸಿತ್ತು. ಹಿಂದೆ ಸಂಭವಿಸಿದ ಮಹಾಪ್ರವಾಹದ ಭೀತಿ ಕೂಡ ಮತ್ತೊಮ್ಮೆ ಆವರಿಸಿತ್ತು. ಅದರಲ್ಲೂ ಆಗಸ್ಟ್ 1ರ ರಾತ್ರಿ ಉಂಟಾದ ಜಲಸ್ಫೋಟ, ಭೂಕುಸಿತ (Landslide), ಕುಂಭದ್ರೋಣ ಮಳೆ ಮತ್ತು ಮಾರಿ ಪ್ರವಾಹದಿಂದಾಗಿ ದಕ್ಷಿಣ ಕನ್ನಡ ಮತ್ತು ಕೊಡಗಿನ (Kodagu) ಗಡಿಪ್ರದೇಶಗಳು ಕಂಗೆಟ್ಟು ಹೋಗಿತ್ತು.


ಜನ- ವಾಹನ ಸಂಚಾರ ಆರಂಭ


ಅದರಲ್ಲೂ ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಕಲ್ಮಕಾರ್, ಹರಿಹರ- ಬಾಳುಗೋಡು ಪರಿಸರದಲ್ಲಿ ಅನಾಹುತಗಳೇ ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ (Operation) ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು (Bridge) ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಆರಂಭಗೊಂಡಿದೆ.


ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶದಲ್ಲಿ ಮಳೆಯಿಂದ ಅವಾಂತರಗಳು ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಶುರುವಾಗಿದೆ.


ಈ ಭಾಗದಲ್ಲಿಂದು ಮಳೆ ಸಾಧ್ಯತೆ


ಹವಾಮಾನ ಇಲಾಖೆಯ ಪ್ರಕಾರ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗಲಿದೆ.ಈ ಮಳೆಯಿಂದಾಗಿ ತಾಪಮಾನ ಮೂರರಿಂದ ನಾಲ್ಕು ಡಿಗ್ರಿಗಳಷ್ಟು ಕಡಿಮೆಯಾಗಲಿದೆ.


Karnataka Weather Report 21st August 2022 mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Puneeth Rajkumar: ಗಣೇಶನ ಜೊತೆ ಮನೆಗೆ ಬರ್ತಾರೆ ಪವರ್ ಸ್ಟಾರ್! ಅಪ್ಪು ಕುಟುಂಬಕ್ಕೆ ಮೂರ್ತಿ ನೀಡಲು ಅಭಿಮಾನಿಗಳ ಸಿದ್ಧತೆ


ಇದರ ಹೊರತಾಗಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಮಳೆಯಾಗಬಹುದು. ಇತ್ತ ಗೋವಾ ಮತ್ತು ಕೊಂಕಣ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.


'ಮಹಾ'ಮಳೆಗೆ ಭೀಮೆಯ ಅಬ್ಬರ


ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯದ ಕೃಷ್ಣೆ ಮತ್ತು ಭೀಮೆಗೆ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ.

top videos
    First published: