Karnataka Weather Report: ಇಳಿಮುಖವಾದ ಮಳೆ, ನದಿಗಳು ಭರ್ತಿ; ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾದ ರೈತರು

ಇನ್ನು ಉತ್ತರ ಕರ್ನಾಟಕದಲ್ಲಿ ಮಳೆ ಇಳಿಮುಖವಾದ್ರೂ ಕೃಷ್ಣೆ ಮತ್ತು ಭೀಮೆ (Krishna And Bhima River) ಮಾತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದಕ್ಕೆ ಕಾರಣ ಮಹಾರಾಷ್ಟ್ರ (Maharashtra Rains) ಭಾಗದಲ್ಲಿ ಆಗುತ್ತಿರುವ ಮಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Karnataka Weather Report: ರಾಜ್ಯದಲ್ಲಿ ಮಳೆ (Rainfall) ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸೂರ್ಯನ (Sun) ಬಿಸಿಲು ಕಂಡು ರೈತರು (Farmers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಜಮೀನಿನಲ್ಲಿರುವ ಬೆಳೆಗಳು ಅಲ್ಲಿಯೇ ಕೊಳೆಯುವಂತಾಗಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆ ಕಡಿಮೆಯಾಗಿದ್ದು, ಜಲಾವೃತಗೊಂಡಿದ್ದ ಜಮೀನುಗಳು ಮೊದಲಿನ ಸ್ಥಿತಿಗೆ ಮರುಳುತ್ತಿವೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯ ಪ್ರವಾಹ ಇಳಿಮುಖವಾಗಿದೆ. ಕೊಡಗಿನಲ್ಲಿ (Kodagu Rains) ಈ ಬಾರಿ ಪಯಸ್ವಿನಿ ನದಿ (Payaswini River Flood) ಅಬ್ಬರಕ್ಕೆ ಕೊಯಿನಾಡು ಭಾಗದ ಜನರು ಮನೆಗಳನ್ನು ತೊರೆಯುವಂತಾಗಿತ್ತು. ಈ ಪ್ರವಾಹ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

  ಇನ್ನು ಉತ್ತರ ಕರ್ನಾಟಕದಲ್ಲಿ ಮಳೆ ಇಳಿಮುಖವಾದ್ರೂ ಕೃಷ್ಣೆ ಮತ್ತು ಭೀಮೆ (Krishna And Bhima River) ಮಾತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದಕ್ಕೆ ಕಾರಣ ಮಹಾರಾಷ್ಟ್ರ (Maharashtra Rains) ಭಾಗದಲ್ಲಿ ಆಗುತ್ತಿರುವ ಮಳೆ. ರಾಜಧಾನಿ ಬೆಂಗಳೂರಿನ ವಾತಾವರಣ (Bengaluru Weather) ಸಹ ಭಿನ್ನವಾಗಿಲ್ಲ. ಸೋಮವಾರ ಸಂಜೆ ಸಹ ಕೆಲವು ಭಾಗಗಳಲ್ಲಿ ಮಳೆಯಾಗಿರುವ (Bengaluru Rains) ವರದಿಗಳು ಬಂದಿವೆ. ಇಂದು ಗಾರ್ಡನ್ ಸಿಟಿಯಲ್ಲಿ ಗರಿಷ್ಠ 28 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

  ಬೆಂಗಳೂರು 28-18, ಮೈಸೂರು 30-19, ಚಾಮರಾಜನಗರ 31-19, ರಾಮನಗರ 30-19, ಮಂಡ್ಯ 31-19, ಬೆಂಗಳೂರು ಗ್ರಾಮಾಂತರ 28-18, ಚಿಕ್ಕಬಳ್ಳಾಪುರ 28-18, ಕೋಲಾರ 29-19, ಹಾಸನ 27-18, ಚಿತ್ರದುರ್ಗ 29-19, ಚಿಕ್ಕಮಗಳೂರು 26-17, ದಾವಣಗೆರೆ 29-20, ಶಿವಮೊಗ್ಗ 28-20

  ಕೊಡಗು 24-17, ತುಮಕೂರು 28-19, ಉಡುಪಿ 29-24, ಮಂಗಳೂರು 29-24, ಉತ್ತರ ಕನ್ನಡ 28-19, ಧಾರವಾಡ 28-18, ಹಾವೇರಿ 30-20, ಹುಬ್ಬಳ್ಳಿ 29-19, ಬೆಳಗಾವಿ 27-18, ಗದಗ 30-19, ಕೊಪ್ಪಳ 31-20, ವಿಜಯಪುರ 28-21, ಬಾಗಲಕೋಟ 31-20 , ಕಲಬುರಗಿ 26-22, ಬೀದರ್ 24-21, ಯಾದಗಿರಿ 28-22, ರಾಯಚೂರ 29-22 ಮತ್ತು ಬಳ್ಳಾರಿ 32-21

  ಇದನ್ನೂ ಓದಿ:  Male Mahadeshwara Hills: ಮಹದೇಶ್ವರಬೆಟ್ಟದಲ್ಲಿ ಡಿಜಿಟಲ್ ಹುಂಡಿ; ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ

  ಭೀಮಾ ನದಿ ತೀರದ  ಗ್ರಾಮಗಳಿಗೆ ಪ್ರವಾಹದ ಆತಂಕ

  ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ಭೀಮಾ ತೀರದ ಗ್ರಾಮಗಳಲ್ಲಿ ಮೈಕ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ನದಿ ಪಾತ್ರಕ್ಕೆ ಜನರಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ನದಿಯ ಕಡೆಗೆ ಜಾನುವಾರುಗಳನ್ನ ಬಿಡದಂತೆ ರೈತರಿಗೆ ಸೂಚನೆ ನೀಡಲಾಗಿದೆ.

  ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ 7 ಬಾಂದಾರು ಸಂಪೂರ್ಣ ಮುಳುಗಡೆಯಾಗಿದೆ. ಇಂಡಿ, ಆಲಮೇಲ, ಚಡಚಣ ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಶಿರನಾಳ-ಔಜ್, ಧೂಳಖೇಡ-ಚಿಂಚಪೂರ, ಗೋವಿಂದಪೂರ-ಬಂಡಾರಕವಟೆ, ಹಿಂಗಣಿ-ಆಳಗಿ ಬಾಂದಾರ, ಉಮರಾಣಿ-ಲವಗಿ, ಪಡನೂರು-ಖಾನಾಪುರ, ಹಿಳ್ಳಿ-ಗುಬ್ಬೇವಾಡಿ ಬಾಂದಾರ ಸಂಪೂರ್ಣ ಮುಳುಗಡೆಯಾಗಿದೆ.

  Karnataka Weather Report 20 September 2022 mrq
  ಭೀಮಾ ನದಿ


  ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್

  ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ್ರೆ ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆ ಭೀಮಾತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಪ್ರಕಟಿಸಲಾಗಿದೆ.

  ಇದನ್ನೂ ಓದಿ: Panchamasali Reservation: ರಾಜ್ಯ ಸರ್ಕಾರಕ್ಕೆ ಮತ್ತೆ ಲಿಂಗಾಯತ ಮೀಸಲಾತಿ ಬಿಸಿ; ಸಿಎಂ ಮನೆಗೆ ಮುತ್ತಿಗೆಗೆ ನಿರ್ಧಾರ

  ಜಲಾಶಯಗಳು ಭರ್ತಿ

  ಈ ಬಾರಿ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದ ಮಳೆ (Karnataka Rains) ಪ್ರಭಾವದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಬಹುತೇಕ ಜಲಾಶಯಗಳು (Karnataka Dam Level) ಭರ್ತಿಯಾಗಿವೆ. ಕೆಲ ದಿನಗಳ ಹಿಂದೆ ಜಾಸ್ತಿಯಾಗಿದ್ದ ಒಳಹರಿವಿನ ಪ್ರಮಾಣ ಪ್ರಸ್ತುತ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಡಿಮೆಯಾಗಿದ್ದ ಮಳೆ ಮತ್ತೆ ಕೆಲ ದಿನಗಳಿಂದ ರಾಜ್ಯದ ಅಲ್ಲಲ್ಲಿ ಸುರಿಯುತ್ತಿದೆ. ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು.

  Karnataka Weather Report 20 September 2022 mrq
  ಭೀಮಾ ನದಿ


  ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ (Farmers) ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ (Agriculture Activities) ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ
  Published by:Mahmadrafik K
  First published: